ಕಲ್ಲಿನ ಪುಡಿಗಿಂತ ಅಕ್ಕಿ ಹಿಟ್ಟಿನಲ್ಲಿ ರಂಗೋಲಿ ಬಿಡಿಸಿದರೆ ಹೇಗೆ? ಇದರಿಂದ ಆಗುವ ಪ್ರಯೋಜನಗಳು ಇಲ್ಲಿವೆ

ತಮಿಳುನಾಡಿನಲ್ಲಿ ಕೋಲಂ ಎಂದು ಕರೆಯುವ ಅಕ್ಕಿ ಪುಡಿಯಲ್ಲಿ ಬಿಡಿಸುವ ರಂಗೋಲಿಯಲ್ಲಿ ಧಾರ್ಮಿಕತೆ, ಪರೋಪಕಾರ, ಗಣಿತದ ಅಂಶಗಳು ಒಳಗೊಂಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಲ್ಲಿನ ಪುಡಿಗಿಂತ ಅಕ್ಕಿ ಹಿಟ್ಟಿನಲ್ಲಿ ರಂಗೋಲಿ ಬಿಡಿಸಿದರೆ ಹೇಗೆ? ಇದರಿಂದ ಆಗುವ ಪ್ರಯೋಜನಗಳು ಇಲ್ಲಿವೆ
ಕೋಲಂ ಬಿಡಿಸುವುದು
Follow us
TV9 Web
| Updated By: Rakesh Nayak Manchi

Updated on:Jul 10, 2022 | 10:21 AM

ಅಂಗಡಿಗಳಲ್ಲಿ ಕಲ್ಲಿನಿಂದ ಮಾಡಲ್ಪಟ್ಟ ರಂಗೋಲಿ (Rangoli) ಪುಡಿ ಹೆಚ್ಚಾಗಿ ಲಭ್ಯವಾಗುತ್ತದೆ. ಅದಾಗ್ಯೂ ಅಕ್ಕಿ ಪುಡಿಯಲ್ಲಿಯೂ ರಂಗೋಲಿ ಬಿಡಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಅಕ್ಕಿ ಪುಡಿ ರಂಗೋಲಿಗೆ ತಮಿಳುನಾಡಿನಲ್ಲಿ ಕೋಲಂ (kolam) ಅಂತ ಕರೆಯುತ್ತಾರೆ. ಈ ಅಕ್ಕಿ ಪುಡಿಯ ರಂಗೋಲಿ ಬಿಡಿಸುವುದು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ ಇದರ ಹಿಂದೆ ಪರೋಪಕಾರ ಕೂಡ ಇದೆ. ಮಾತ್ರವಲ್ಲದೆ ಇದರಲ್ಲಿ ಗಣಿತ, ದೇವತಾಶಾಸ್ತ್ರ ಅಥವಾ ಧಾರ್ಮಿಕ ವಿಚಾರವನ್ನು ಕೂಡ ನಾವು ಕಾಣಬಹುದು. ಹಾಗಿದ್ದರೆ ಈ ಕೋಲಂನ ಉಪಯೋಗಗಳು ಮತ್ತು ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿಯಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಮೊದಲೇ ಹೇಳಿದಂತೆ ಕೋಲಂ ಕೇವಲ ಅಲಂಕಾರಿಕ ವಸ್ತುವಾಗಿ ಉಳಿದಿಲ್ಲ, ಇದರ ಹಿಂದೆ ಗಣಿತ ಕೂಡ ಇದೆ. ಎಣಿಕೆ, ಅಳತೆ, ಗುರುತಿಸುವಿಕೆ, ಪ್ರಯೋಗ ಮತ್ತು ವಿವರಿಸುವುದನ್ನು ಗಣಿತದಲ್ಲಿ ನೋಡಬಹುದು. ಇದು ಈ ಕೋಲಂನಲ್ಲೂ ಕಾಣಬಹುದು. ಪಾಶ್ಚಿಮಾತ್ಯ ಗಣಿತಶಾಸ್ತ್ರದ ಸಂಪ್ರದಾಯಕ್ಕೆ ಕೊಡುಗೆ ನೀಡಿದ ಕೆಲವು ಅಂತರ್ಗತ ಸ್ಥಳೀಯ ಸಂಪ್ರದಾಯಗಳಲ್ಲಿ ಕೋಲಂ ಒಂದಾಗಿದೆ ಎಂದು ತನ್ನ ಜನಾಂಗೀಯ ಸಂಶೋಧನೆಯನ್ನು ಉಲ್ಲೇಖಿಸಿ (ಮಾನವಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಸಂಯೋಜಿಸುವ ಅಧ್ಯಯನದ ಕ್ಷೇತ್ರ) ಸ್ಯಾನ್ ಫ್ರಾನ್ಸಿಸ್ಕೋ ವಿಶ್ವವಿದ್ಯಾನಿಲಯದ ದೇವತಾಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ವಿಜಯ ನಾಗರಾಜನ್ ಹೇಳುತ್ತಾರೆ.

ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿನ ಲೇಖನವೊಂದರ ಪ್ರಕಾರ, “ಒಂದು ಪರಿಪೂರ್ಣ ಕೋಲಮ್ ಮಾಡಲು ಆ ಸುಂದರವಾದ ಜ್ಯಾಮಿತೀಯ ಮಾದರಿಗಳನ್ನು ರೂಪಿಸುವಾಗ ಚುಕ್ಕೆಗಳು, ಶೃಂಗಗಳು, ಚಾಪಗಳು ಮತ್ತು ರೇಖೆಗಳ ಎಣಿಕೆಯನ್ನು ಇರಿಸಿಕೊಳ್ಳಬೇಕು” ಎಂದು ತಿಳಿಸಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಮದುವೆಯಾಗ್ತಿರೋ ಹೆಣ್ಣುಮಕ್ಕಳಿಗೆ ಕಾಂತಿಯುತ ತ್ವಚೆ ಪಡೆಯಲು ಇಲ್ಲಿವೆ ಟಿಪ್ಸ್

ಕೋಲಂ ಬಿಡಿಸುವುದರ ಹಿಂದೆ ಅಡಗಿರುವ ಧಾರ್ಮಿಕ ನಂಬಿಕೆ

ಕೋಲಂನ ಹಿಂದಿನ ಧಾರ್ಮಿಕತೆ ಬಗ್ಗೆ ತಿಳಿದುಕೊಂಡಾಗ ಕೋಲಂ ಬಿಡಿಸುವ ಮೂಲಕ ದೇವತೆಗಳನ್ನು ಮನೆಗೆ ಆಹ್ವಾನಿಸುವುದು ಸೇರಿದಂತೆ ಇನ್ನಿತರ ವಿಚಾರಗಳು ಮನನವಾಗುತ್ತದೆ. ವಿಜಯ ನಾಗರಾಜನ್ ಅವರು ‘ಫೀಡಿಂಗ್ ಎ ಥೌಸಂಡ್ ಸೋಲ್ಸ್: ವುಮೆನ್, ರಿಚುವಲ್ ಅಂಡ್ ಇಕಾಲಜಿ ಇನ್ ಇಂಡಿಯಾ – ಆನ್ ಎಕ್ಸ್‌ಪ್ಲೋರೇಶನ್ ಆಫ್ ದಿ ಕೋಲಂ ‘ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಹೇಳಿರುವಂತೆ, ಸಂಪತ್ತು ಮತ್ತು ಎಲ್ಲಾ ರೂಪಗಳ ಸೌಂದರ್ಯದ ದೇವತೆಯಾದ ಲಕ್ಷ್ಮಿಯನ್ನು ಮನೆಗೆ ಸ್ವಾಗತಿಸಲು ಮತ್ತು ಭೌತಿಕ ಅಥವಾ ಆಧ್ಯಾತ್ಮಿಕತೆಯನ್ನು ನಮ್ಮ ಮನೆಗಳಿಗೆ ಸ್ವಾಗತಿಸಲು ಮತ್ತು ಲೋಪ, ಪಾಪಗಳ ಬಗ್ಗೆ ಭೂದೇವಿ ಬಳಿ ಕ್ಷಮೆ ಕೇಳಲು ಬೆಳಿಗ್ಗೆ ಕೋಲಂ ಅನ್ನು ಎಳೆಯಲಾಗುತ್ತದೆ.

ಇದನ್ನೂ ಓದಿ: ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ 5 ಚಿಹ್ನೆಗಳು

ಕೋಲಂ ಬಿಡಿಸುವುದರ ಹಿಂದೆ ಅಡಗಿದೆ ಪರೋಪಕಾರ

ತಮಿಳುನಾಡಿನ ಬಹುತೇಕ ಮನೆಗಳು ಕೋಲಂ ಮಾಡಲು ಅಕ್ಕಿ ಪುಡಿಯನ್ನೇ ಬಳಸುತ್ತಾರೆ. ಅಕ್ಕಿ ಹಿಟ್ಟು ಕೀಟಗಳು, ಇರುವೆಗಳು, ಪಕ್ಷಿಗಳಿಗೆ ಆಹಾರವನ್ನು ಒದಗಿಸುತ್ತದೆ. ವಿಜಯ ನಾಗರಾಜನ್ ತನ್ನ ಪುಸ್ತಕದಲ್ಲಿ, ಹಿಂದೂಗಳು ಸಾವಿರ ಆತ್ಮಗಳಿಗೆ ಆಹಾರವನ್ನು ನೀಡಲು ಅಥವಾ ನಮ್ಮ ನಡುವೆ ವಾಸಿಸುವವರಿಗೆ ಆಹಾರವನ್ನು ನೀಡಲು ಕರ್ಮದ ಬಾಧ್ಯತೆಯನ್ನು ಹೊಂದಿದ್ದಾರೆ ಎಂಬ ಪುರಾಣದಲ್ಲಿನ ನಂಬಿಕೆಯನ್ನು ಉಲ್ಲೇಖಿಸಲಾಗಿದೆ.

ಲೋನ್ಲಿ ಪ್ಲಾನೆಟ್‌ನಲ್ಲಿನ ಲೇಖನವೊಂದರಲ್ಲಿ ಲೇಖಕರು ಹೇಳಿರುವಂತೆ, “ಅಕ್ಕಿ ಪುಡಿಯು ಪಕ್ಷಿಗಳು ಸೇರಿದಂತೆ ಇತರ ಸಣ್ಣ ಜೀವಿಗಳನ್ನು ಸಹ ಮನೆ ಮುಂದೆ ಆಹ್ವಾನಿಸುತ್ತದೆ. ಇದು ಇತರ ಜೀವಿಗಳನ್ನು ಒಬ್ಬರ ಮನೆ ಮತ್ತು ದೈನಂದಿನ ಜೀವನದಲ್ಲಿ ಸ್ವಾಗತಿಸುವ ಒಂದು ಮಾರ್ಗವಾಗಿದೆ, ಸಾಮರಸ್ಯದ ಸಹಬಾಳ್ವೆಗೆ ದೈನಂದಿನ ಗೌರವ ಮತ್ತು ಪರಿಸರ ಸಮತೋಲನವನ್ನು ಸೃಷ್ಟಿಸುವ ಸರಳ ಹೆಜ್ಜೆಯಾಗಿದೆ.

ಇದನ್ನೂ ಓದಿ: ಚಾಣಕ್ಯ ನೀತಿ: ಈ ನಿಯಮಗಳನ್ನು ಪಾಲಿಸಿದರೆ.. ದುರಾದೃಷ್ಟವೂ ಅದೃಷ್ಟವೇ ಆಗಬಹುದು

Published On - 10:21 am, Sun, 10 July 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ