Updated on: Jul 09, 2022 | 4:01 PM
Sleep
ನೀವು ತುಂಬಾ ದಣಿದಿದ್ದಾಗ ರಾತ್ರಿ 9 ಗಂಟೆಗೇ ಮಲಗಿಬಿಡುತ್ತೀರಿ, ಸುಮಾರು 9 ಗಂಟೆಗಳ ಕಾಲ ನಿದ್ರೆಯನ್ನೂ ಮಾಡುತ್ತೀರಿ, ಆದರೆ ಅದನ್ನು ಒಂದು ದಿನ ಮಾತ್ರ ಮಾಡುವುದಲ್ಲ, ನಿತ್ಯವು ನಿಮ್ಮ ದೇಹಕ್ಕೆ ಕನಿಷ್ಠ 7-8 ತಾಸುಗಳ ನಿದ್ರೆಯ ಅಗತ್ಯವಿರುತ್ತದೆ.
ನೀವು ನಿತ್ಯ ಕಷ್ಟಪಡುತ್ತೀರಿ ಆದರೆ ನಿಮ್ಮ ಜೀವವನ್ನು ಉಳಿಸಿಕೊಳ್ಳುವ ಕುರಿತು ಗಮನಕೊಡುವುದೇ ಇಲ್ಲ.
ನೀವು ನಿತ್ಯ ಪದೇ ಪದೇ ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರೆ ನಿಮಗೆ ಹೆಚ್ಚಿನ ನಿದ್ರೆಯ ಅಗತ್ಯವಿದೆ ಎಂದರ್ಥ.
ನೀವು ತಡವಾಗಿ ಮಲಗಿದರೆ ಇಡೀ ದಿನ ಸುಸ್ತಾದ ಅನುಭವವಾಗುತ್ತದೆ
ನೀವು ಕಾಫಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತೀರಿ ಅದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ನಿದ್ರಾಹೀನತೆಯ ಚಿಹ್ನೆಯಾಗಿರುತ್ತದೆ.
ನೀವು ಕಡಿಮೆ ನಿದ್ರೆ ಮಾಡುತ್ತೀದ್ದೀರಾ, ರಾತ್ರಿ ಹೊತ್ತು ಟಿವಿ ನೋಡಿಕೊಂಡು ಹೆಚ್ಚು ಸಮಯ ಕಳೆಯುದ್ದೀರಾ, ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ ಕೆಲವು ಚಿಹ್ನೆಗಳು ಕಾಣಿಸಿದರೆ ನೀವು ಆತಂಕಗೊಳ್ಳಬೇಡಿ.