Flying Taxi: 2025ರ ವೇಳೆಗೆ ಭಾರತದಲ್ಲಿ ತಯಾರಾಗಲಿದೆ ಫ್ಲೈಯಿಂಗ್ ಟ್ಯಾಕ್ಸಿ!
ಭಾರತೀಯ-ಅಮೆರಿಕನ್ ವೈದ್ಯರ ಜಾಂಟ್ ಏರ್ 2025 ರ ವೇಳೆಗೆ ಭಾರತದಲ್ಲಿ ಏರ್ ಟ್ಯಾಕ್ಸಿಗಳು ಮತ್ತು ಡ್ರೋನ್‌ಗಳನ್ನು ತಯಾರಿಸಲು ಯೋಜಿಸಿದೆ
ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತವು ಹಾರುವ ಟ್ಯಾಕ್ಸಿಗಳನ್ನು (Flying Taxi) ಹೊಂದಬಹುದು ಎಂದು ಭಾರತೀಯ-ಅಮೆರಿಕನ್ (Indian-American) ಉದ್ಯಮಿ ಚಿರಿಂಜೀವ್ ಕಥುರಿಯಾ (Chiranjeev Kathuria) ಅವರು ಹೇಳಿದ್ದಾರೆ. ಕಥುರಿಯಾ ಅವರು ತಮ್ಮ ಕಂಪನಿಯು ಯುಎಸ್ ಜೊತೆ ಸೇರಿ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜಿಸಿದೆ ಎಂದು ಘೋಷಿಸಿದ್ದಾರೆ. ಕಥುರಿಯಾದ ಜೌಂಟ್ ಏರ್ (Jaunt Air) ಮೊಬಿಲಿಟಿಯು ಭಾರತದಲ್ಲಿ ಅರ್ಬನ್ ಏರ್ ಮೊಬಿಲಿಟಿ (UAM) ಪರಿಹಾರವನ್ನು ಅಭಿವೃದ್ಧಿಪಡಿಸಲು L&T ಟೆಕ್ನಾಲಜಿ ಸೇವೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯು ಭಾರತೀಯ ಚಾಪರ್ ಆಪರೇಟರ್‌ನಿಂದ 250 ಏರ್ ಟ್ಯಾಕ್ಸಿಗಳಿಗೆ ಆದೇಶವನ್ನು ಪಡೆದುಕೊಂಡಿದೆ ಎಂದು TOI ವರದಿ ತಿಳಿಸಿದೆ.
ಜೌಂಟ್ ಏರ್ ಕಂಪನಿಯು RQ-35 ಹೈಡ್ರನ್ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಡ್ರೋನ್ ಅನ್ನು ಪ್ರಸ್ತುತ ಯುದ್ಧ-ಪೀಡಿತ ಉಕ್ರೇನ್‌ನಲ್ಲಿ ಬಳಸುತ್ತಿದೆ. ರಕ್ಷಣಾ ಮಾರುಕಟ್ಟೆಗಾಗಿ ಮುಂದಿನ ವರ್ಷದಿಂದ ಈ ಡ್ರೋನ್‌ಗಳನ್ನು ಭಾರತದಲ್ಲಿಯೂ ತಯಾರಿಸಬಹುದು ಎಂದು ಕಥುರಿಯಾ ಹೇಳಿದರು, ವೈದ್ಯರಾಗಿ ಮಾರ್ಪಟ್ಟಿರುವ ಉದ್ಯಮಿ TOI ಗೆ ತಿಳಿಸಿದರು.
“ಮೊದಲ ಉತ್ಪಾದನಾ ಘಟಕವು ಯುಎಸ್‌ನಲ್ಲಿದೆ ಮತ್ತು ಎರಡನೆಯದು ಭಾರತದಲ್ಲಿರುತ್ತದೆ. 2025 ರ ವೇಳೆಗೆ ಎರಡೂ ದೇಶಗಳಲ್ಲಿ ಅವುಗಳ ಉತ್ಪಾದನೆಯನ್ನು ಪ್ರಾರಂಭಿಸಲು ನಾವು ಆಶಿಸುತ್ತೇವೆ. ಮುಂದಿನ ವರ್ಷದಿಂದ ಭಾರತದಲ್ಲಿ ಹೈಡ್ರನ್ ಡ್ರೋನ್ ಉತ್ಪಾದನೆಯನ್ನು ಪ್ರಾರಂಭಿಸಬಹುದು. ”ಎಂದು ದೆಹಲಿ ಮೂಲದ ಉದ್ಯಮಿ ಹೇಳಿದರು.
“1999 ರಲ್ಲಿ, ನಾನು ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಮತ್ತು ಹಣವನ್ನು ನೀಡಲು ವಾಣಿಜ್ಯ ಕಂಪನಿಯನ್ನು ಪ್ರಾರಂಭಿಸಿದೆ. ಮಾನವರಹಿತ ವೈಮಾನಿಕ ವಾಹನಗಳ ಪ್ರವೇಶವನ್ನು ಏಳು ವರ್ಷಗಳ ಹಿಂದೆ ಮಾಡಲಾಗಿತ್ತು. ಆದರೆ ನಾನು ಏನೇ ಮಾಡಿದರೂ ನನ್ನ ಹೃದಯ ಯಾವಾಗಲೂ ಭಾರತದಲ್ಲಿಯೇ ಇತ್ತು. 1990 ರ ದಶಕದ ಮಧ್ಯಭಾಗದಲ್ಲಿ, ನಾನು ಭಾರತದಲ್ಲಿ ಮೊದಲ US ಹೂಡಿಕೆ ಬ್ಯಾಂಕ್ ಕಚೇರಿಯನ್ನು ಸ್ಥಾಪಿಸಲು ಸಹಾಯ ಮಾಡಿದೆ ಮತ್ತು ಮೋರ್ಗಾನ್ ಸ್ಟಾನ್ಲಿಯಲ್ಲಿ ಸೇವೆ ಸಲ್ಲಿಸಿದೆ. ಈಗಲೂ ನಾನು ಭಾರತದಲ್ಲಿ ಏನಾದರೂ ಮಾಡಬಹುದೇ ಎಂದು ನನ್ನನ್ನೇ ಕೇಳಿಕೊಳ್ಳುತ್ತಿದ್ದೇನೆ” ಎಂದು ಡಾ ಕಥೂರಿಯಾ TOI ಗೆ ತಿಳಿಸಿದರು.
ಇದನ್ನೂ ಓದಿ: ನಕಲಿ ಅನಾರೋಗ್ಯ ರಜೆಗಳಿಗೆ ಬ್ರೇಕ್; ಈಗ ನಿಮ್ಮ ಧ್ವನಿಯಿಂದ ನಿಮಗೆ ಶೀತವಿದೆಯೇ ಎಂದು ಕೃತಕ ಬುದ್ಧಿಮತ್ತೆ ಕಂಡುಹಿಡಿಯಬಹುದು!
TOI ವರದಿಯ ಪ್ರಕಾರ ಕಂಪನಿಯು 2026-27 ರ ವೇಳೆಗೆ ಕೆನಡಾ ಮತ್ತು US ನಲ್ಲಿ ಏರ್ ಟ್ಯಾಕ್ಸಿ ಸೇವೆಗಳನ್ನು ಪ್ರಾರಂಭಿಸಲು ಯೋಜಿಸಿದೆ.