AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಯಂತ್ರಣ ತಪ್ಪಿದ ಕಾರು, ಟ್ರಾಫಿಕ್ ಪೊಲೀಸ್​ಗೆ ಢಿಕ್ಕಿ; ನೋಡಿ ವೈರಲ್ ವಿಡಿಯೋ

Car Accident : ಅಮೆರಿಕದ ಅಪ್ರಾಪ್ತ ಚಾಲಕನೊಬ್ಬನ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ಟ್ರಾಫಿಕ್​ ಪೊಲೀಸ್​ಗೆ ಢಿಕ್ಕಿ ಹೊಡೆದಿದೆ. ಮುಂದೆ ಏನಾಯಿತೆಂದು ತಿಳಿಯಲು ಈ ವಿಡಿಯೋ ನೋಡಿ.

ನಿಯಂತ್ರಣ ತಪ್ಪಿದ ಕಾರು, ಟ್ರಾಫಿಕ್ ಪೊಲೀಸ್​ಗೆ ಢಿಕ್ಕಿ; ನೋಡಿ ವೈರಲ್ ವಿಡಿಯೋ
ಅಮೆರಿಕದ ಟ್ರಾಫಿಕ್ ಪೊಲೀಸ್​ಗೆ ಢಿಕ್ಕಿ ಹೊಡೆದ ಕಾರು
TV9 Web
| Edited By: ಶ್ರೀದೇವಿ ಕಳಸದ|

Updated on:May 03, 2023 | 1:35 PM

Share

Viral Video : ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಕಾರೊಂದು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಅಲ್ಲಿದ್ದ ಟ್ರಾಫಿಕ್​ ಪೊಲೀಸ್​ ಮತ್ತು ಕಾರಿನ ಚಾಲಕ ಸದ್ಯ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅನ್ನು ನೆಟ್ಟಿಗರು ಗಾಬರಿಯಿಂದ ನೋಡುತ್ತಿದ್ದಾರೆ.

ವರ್ಜೀನಿಯಾದ ಫೇರ್‌ಫ್ಯಾಕ್ಸ್ ಕೌಂಟಿಯ ಪೊಲೀಸ್ ಡ್ಯಾಶ್‌ಕ್ಯಾಮ್‌ನಲ್ಲಿ ಈ ವಿಡಿಯೋ ಚಿತ್ರೀಕರಣಗೊಂಡಿದೆ. ಈ ವಿಡಿಯೋ ಅನ್ನು ಪೊಲೀಸ್ ಇಲಾಖೆಯು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ; ಮೇ 1 ರಂದು, ಸುಮಾರು 11:38 ಗಂಟೆಗೆ, ಬಿಎಂಡಬ್ಲ್ಯೂ 750 ಕಾರಿನ ಬಳಿ ಪೊಲೀಸ್​ ಸಮಾಲೋಚನೆ ನಡೆಸುತ್ತಿರುವ ಹೊತ್ತಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬ್ರಾಡ್ಡಾಕ್ ರಸ್ತೆಯ ಸೌತ್ ಫೇರ್‌ಫ್ಯಾಕ್ಸ್ ಕೌಂಟಿ ಪಾರ್ಕ್​ ದಾರಿಯಲ್ಲಿ ಕಪ್ಪುಬಣ್ಣದ ಬಿಎಂಡಬ್ಲ್ಯೂ ಎಂ 3 ಕಾರಿನಲ್ಲಿದ್ದ 17 ವರ್ಷದ ಚಾಲಕನು ಅತೀವೇಗದಲ್ಲಿ ಚಲಿಸುತ್ತಿದ್ದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡಿದೆ.’ ಎಂದು ಫೇರ್‌ಫ್ಯಾಕ್ಸ್ ಕೌಂಟಿ ಪೊಲೀಸ್ ಇಲಾಖೆ ತಿಳಿಸಿದೆ.

ಇದನ್ನ ಓದಿ : ಹಾವು ಆಕಳಿಸಿದಾಗ;ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ; ಎಂದ ನೆಟ್ಟಿಗ

‘ಭೀಕರ ದುರಂತಕ್ಕೆ ಕಾರಣವಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಆದರೆ ಅಪ್ರಾಪ್ತ ವಯಸ್ಸಿನ ಚಾಲಕನ ಪೋಷಕರು ಈ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಬೇಕು. ಅಜಾಗರೂಕತೆಯಿಂದ ಚಲಿಸಿದರೆ ಇತರರಿಗೆ ಹೇಗೆ ತೊಂದರೆಯಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು’ ಎಂದಿದ್ದಾರೆ ಪೊಲೀಸರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 1:27 pm, Wed, 3 May 23

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?