AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವು ಆಕಳಿಸಿದಾಗ; ‘ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ’ ಎಂದ ನೆಟ್ಟಿಗ

Snake : ಹಸು, ಬೆಕ್ಕು, ನಾಯಿ ಆಕಳಿಸುವುದನ್ನು ನೋಡಿದ್ದೀರಿ. ಆದರೆ ಹಾವು? ಬಹುಶಃ ನೀವು ಹಾವಿನ ಆಕಳಿಕೆ ಈತನಕ ನೋಡಿಯೇ ಇಲ್ಲವೇನೋ. ಬನ್ನಿ ಹಾಗಿದ್ದರೆ ಈ ವಿಡಿಯೋ ನೋಡಿ.

ಹಾವು ಆಕಳಿಸಿದಾಗ; 'ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ' ಎಂದ ನೆಟ್ಟಿಗ
ಆಕಳಿಸುತ್ತಿರುವ ಹಾವು
TV9 Web
| Updated By: ಶ್ರೀದೇವಿ ಕಳಸದ|

Updated on:May 03, 2023 | 12:07 PM

Share

Viral Video : ಹಾವು! ಆದಿ, ಜಾನಪದ ಮತ್ತು ಪುರಾಣಕಾಲದಿಂದಲೂ ಈ ಜೀವಿಗೆ ವಿಶಿಷ್ಟ ಸ್ಥಾನ. ಭಯ ಭಕ್ತಿ ಮೋಹದೊಂದಿಗೆ ಮನುಷ್ಯನನ್ನು ಅಂತರದಲ್ಲಿರಿಸಿಕೊಂಡೇ ತನ್ನ ಬಗ್ಗೆ ವಿಶೇಷ ಆಕರ್ಷಣೆ ಉಳಿಸಿಕೊಂಡು ಬಂದಿದೆ. ಕಾವ್ಯ, ಸಿನೆಮಾ, ನಾಟಕ, ನೃತ್ಯ ಮುಂತಾದ ಕಲಾಪ್ರಕಾರಗಳಲ್ಲಿ ನಾಗರಾಜ, ನಾಗಿಣಿಯರ ವೈಭವ ಹೇಳತೀರದು. ಉಳಿದಂತೆ ಈ ಚುರುಕಾದ ಜೀವಿಗಳ ಚಲನವಲನದ ಬಗ್ಗೆಯಂತೂ ಎಂದಿಗೂ ಕುತೂಹಲ ಕಟ್ಟಿಟ್ಟಿದ್ದೇ.

ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಹುಶಃ ಹಾವು ಆಕಳಿಸುವುದನ್ನು ನೀವು ನೋಡುತ್ತಿರುವುದು ಇದೇ ಮೊದಲಿರಬಹುದು. ಯಾವ ಪರಿ ಇದು ತನ್ನ ಬಾಯನ್ನು ಹಿಗ್ಗಿಸಿದೆ ನೋಡಿ. ಅಚ್ಚರಿ ಮತ್ತು ಭಯ ಒಮ್ಮೆಲೇ ಆಗುವುದಲ್ಲದೆ?

ಇದನ್ನೂ ಓದಿ : ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್​​

ಇಷ್ಟೊಂದು ದೊಡ್ಡದಾಗಿ ಆಕಳಿಸಲು ಅದೆಷ್ಟು ರಾತ್ರಿ ನಿದ್ದೆಗೆಟ್ಟಿತ್ತೋ ಏನೋ. ಯಾವೂರಿಗೆ ಪ್ರವಾಸಕ್ಕೆ ಹೋಗಿತ್ತೋ ಏನೋ. ನೆಟ್ಟಿಗರೊಬ್ಬರಂತೂ, ಬೆಳಗಿನ ಹೊತ್ತು ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ ಎಂದಿದ್ದಾರೆ. ಹಾವನ್ನು ಮತ್ತು ಹೆಂಡತಿಯನ್ನು ಹೀಗೆಲ್ಲ ಪ್ರೀತಿಸುವವರೂ ಇದ್ದಾರೆ ಎಂದಾಯಿತಲ್ಲವೆ?

ಇದನ್ನೂ ಓದಿ : Viral Video: ಏರ್​ಪೋರ್ಟ್​ನಲ್ಲಿ ತಪಾಸಣೆಗೆಂದು ಮಹಿಳೆಯ ಬ್ಯಾಗ್​ ತೆರೆದು ನೋಡಿ ದಂಗಾದ ಸಿಬ್ಬಂದಿ, ಅಲ್ಲಿತ್ತು 22 ಜೀವಂತ ಹಾವುಗಳು

ಮುದ್ದು ಮಗುವಿನಂತೆ ಇದು ಎಷ್ಟು ನಿರಾಯಾಸವಾಗಿ ಆಕಳಿಸಿದೆಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹಾ ಇದನ್ನು ಈಗಲೇ ಎತ್ತಿಕೊಂಡು ಮಲಗಿಸಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:05 pm, Wed, 3 May 23

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ