AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

King Charles III’s coronation: ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೂ ಮುನ್ನ ಲಂಡನ್​​ ರೈಲಿನಲ್ಲಿ ಅಗ್ನಿ ಆಕಸ್ಮಿಕ

ಲಂಡನ್ ಮೆಟ್ರೋ​​ ರೈಲೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ದಕ್ಷಿಣ ಲಂಡನ್‌ನ ಟ್ಯೂಬ್ ರೈಲಿನಲ್ಲಿ ನಡೆದಿದೆ. ಲಂಡನ್​​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

King Charles III’s coronation: ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೂ ಮುನ್ನ ಲಂಡನ್​​ ರೈಲಿನಲ್ಲಿ ಅಗ್ನಿ ಆಕಸ್ಮಿಕ
ವೈರಲ್ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on: May 06, 2023 | 7:10 PM

Share

ಲಂಡನ್​​: ಇಂದು (ಮೇ 6) ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕ (King Charles III’s coronation) ನಡೆದಿದೆ. ಇದಕ್ಕೂ ಮುನ್ನ ನೆನ್ನೆ (ಮೇ5) ಲಂಡನ್ ಮೆಟ್ರೋ​​ ರೈಲೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ದಕ್ಷಿಣ ಲಂಡನ್‌ನ ಟ್ಯೂಬ್ ರೈಲಿನಲ್ಲಿ ನಡೆದಿದೆ. ಲಂಡನ್​​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬಿಬಿಸಿ ಪ್ರಕಾರ , ಘಟನೆಯು ಕ್ಲಾಫಮ್ ಕಾಮನ್ ಸ್ಟೇಷನ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇದೀಗ ಈ ಕುರಿತು ಒಂದು ವೀಡಿಯೊ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮೆಟ್ರೋ ರೈಲಿನ ಅಂಡರ್​​ಗ್ರೌಂಡ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ, ರೈಲಿನ ಒಳಗೆ ಇದ್ದ ಪ್ರಯಾಣಿಕರನ್ನು ಹೊರಗೆ ಬರಲು ಒಬ್ಬ ವ್ಯಕ್ತಿ ಸುತ್ತಿಗೆಯಿಂದ ರೈಲಿನ ಗಾಜಿನ ಕಿಟಕಿಗೆ ಹೊಡೆದು ಪ್ರಯಾಣಿಕರು ಹೊರಗೆ ಬರುವಂತೆ ಮಾಡಿದ್ದಾನೆ. ಚಾರ್ಲ್ಸ್ III ರ ಪಟ್ಟಾಭಿಷೇಕದ ಮೊದಲು ಲಂಡನ್ ರೈಲಿನ ಅಂಡರ್‌ಗ್ರೌಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು.

ಈ ಘಟನೆಯಿಂದ ಯಾವುದೇ ಅಪಘಾತಗಳು ವರದಿಯಾಗಿಲ್ಲ ಎಂದು ಬ್ರಿಟಿಷ್ ಸಾರಿಗೆ ಪೊಲೀಸ್ (ಬಿಟಿಪಿ) ಮಾಹಿತಿ ನೀಡಿದ್ದಾರೆ. ಲಂಡನ್ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದಿದ್ದರು ಆದರೆ ಬೆಂಕಿಯ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಬ್ಯಾಟರ್‌ಸಿಯಾ, ಟೂಟಿಂಗ್ ಮತ್ತು ಬ್ರಿಕ್ಸ್‌ಟನ್‌ನಿಂದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಮೊದಲು ಸುಮಾರು 500 ಜನರು ರೈಲಿನಿಂದ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ:King Charles III s coronation: ಬ್ರಿಟನ್ ರಾಜ 3ನೇ ಚಾರ್ಲ್ಸ್ ಪಟ್ಟಾಭಿಷೇಕ

ಮೆಟ್ರೋ ನಿಲ್ದಾಣದಲ್ಲಿ ರೈಲು ಹಠಾತ್ತನೆ ನಿಂತಿದೆ. ಹಲವು ನಿಮಿಷಗಳವರೆಗೆ ರೈಲು ಚಲನೆ ನಿಲ್ದಾಣದಲ್ಲೇ ಬಾಕಿಯಾಗಿತ್ತು, ಈ ಬಗ್ಗೆ ಸಿಬ್ಬಂದಿಗಳಿಂದ ಯಾವುದೇ ಪ್ರಕಟನೆ ರೈಲಿನಲ್ಲಿ ಬಂದಿಲ್ಲ. ನಂತರ ರೈಲಿನಲ್ಲಿ ಉರಿಯುತ್ತಿದ್ದ ದೀಪ ಆಫ್ ಆಗಿದೆ. ಸ್ವಲ್ಪ ಸಮಯದ ನಂತರ ಮತ್ತು ಹಿಂಭಾಗದಿಂದ ಕಿರುಚುವ ಶಬ್ದ ಕೇಳಿದೆ ಎಂದು ಪ್ರಯಾಣಿಕರೊಬ್ಬರು ಪಿಎ ಸುದ್ದಿ ಸಂಸ್ಥೆಗೆ ತಿಳಿಸಿದರು.

ನಂತರ ರೈಲಿನ ಸಿಬ್ಬಂದಿ ಹಿಂಭಾಗಕ್ಕೆ ಹೋಗುವಂತೆ ಹೇಳಿದ್ದಾರೆ. ಒಂದು ಕ್ಷಣ ಎಲ್ಲರೂ ಭಯಭಿತರಾಗಿದ್ದರು, ಹೊರಗಿನಿಂದ ರೈಲಿನ ಕಿಟಕಿ ಗ್ಲಾಸ್​​​ನ್ನು ಮುರಿಯಲು ಶುರು ಮಾಡಿದ್ದಾರೆ. ರೈಲಿನಲ್ಲಿ ಸುಟ್ಟ ವಾಸನೆ ಬರುತ್ತಿತ್ತು. ಆ ಕಾರಣದಿಂದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ