King Charles III’s coronation: ‘ತಲೆಕೆಡಿಸಿಕೊಳ್ಳಬೇಡಿ, ನನ್ನ ಸೀಟ್​ ನನಗೆ ಸಿಕ್ಕಿದೆ!’ ಕೇಟಿ ಪೆರ್ರಿ ತಿರುಗೇಟು

Katy Perry : ರಾಜನಿಗೆ ಕುರ್ಚಿ ಸಿಕ್ಕ ಬೆನ್ನಲ್ಲೇ ಕೇಟಿ ಪೆರ್ರಿ ಸೀಟಿಗಾಗಿ ಪರದಾಡಿದ ವಿಡಿಯೋ ಇಲ್ಲಿದೆ; ಆ ಅಗಾಧ ಟೊಪ್ಪಿಯಿಂದಾಗಿಯೇ ಆಕೆಗೆ ಸೀಟು ಕಾಣುತ್ತಿಲ್ಲ ಎಂದು ಕೆಲವರು. ಕೇಟಿಗೆ ಇನ್ನೂ ಸೀಟು ಸಿಕ್ಕೇ ಇಲ್ಲ ಎಂದು ಹಲವರು.

King Charles III’s coronation: 'ತಲೆಕೆಡಿಸಿಕೊಳ್ಳಬೇಡಿ, ನನ್ನ ಸೀಟ್​ ನನಗೆ ಸಿಕ್ಕಿದೆ!’ ಕೇಟಿ ಪೆರ್ರಿ ತಿರುಗೇಟು
ಮೇ 06ರಂದು ಲಂಡನ್‌ನಲ್ಲಿ ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕೆಮಿಲಾ ಪಟ್ಟಾಭಿಷೇಕದಲ್ಲಿ ಕೇಟಿ ಪೆರ್ರಿ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 08, 2023 | 5:26 PM

Trending News : ಇಂಗ್ಲೆಂಡಿನ ರಾಜಮನೆತನದ ಪಟ್ಟಾಭಿಷೇಕ, ಅದೂ 70 ವರ್ಷಗಳ ನಂತರ ಜರುಗುತ್ತಿರುವ ಮಹಾ ಸಮಾರಂಭವೆಂದರೆ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗುವುದು ಸಹಜವೇ ಅಲ್ಲವೇ? ಮೇ 6ರಂದು ನಡೆದ ಪಟ್ಟಾಭಿಷೇಕದ ಸಾವಿರಾರು ಅಧಿಕೃತ ಅನಧಿಕೃತ ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿ ಅಂತರ್ಜಾಲದಲ್ಲೆಡೆ ಹರಿದಾಡುತ್ತಲೇ ಇವೆ. ಈ ಸಮಾರಂಭಕ್ಕೆ ಬಂದ ಸೆಲೆಬ್ರಿಟಿ ಅತಿಥಿಗಳ ಕ್ಲಿಪ್‌ಗಳೂ ಈಗ ಸುದ್ದಿ ಮಾಡುತ್ತಿವೆ.

ಸಮಾರಂಭಕ್ಕೆ ಆಗಮಿಸಿದ್ದ ಸಾವಿರಾರು ಗಣ್ಯರಲ್ಲಿ ಅಮೆರಿಕದ ಜನಪ್ರಿಯ ಪಾಪ್ ಹಾಡುಗಾರ್ತಿ ಕೇಟಿ ಪೆರ್ರಿಯೂ (Katy Perry) ಒಬ್ಬರು. ನೆರೆದ ಜನಸ್ತೋಮದಲ್ಲಿ ತಮ್ಮ ಸೀಟು ಹುಡುಕಲು ಹೆಣಗಾಡುತ್ತಿರುವ ಅವರ ವಿಡಿಯೋವೊಂದು  ವೈರಲ್ ಆಗಿದೆ. ಬಸ್ಸು, ರೈಲು, ಕೊನೆಗೆ ವಿಮಾನದಲ್ಲೂ ಸೀಟಿಗಾಗಿ ಪರದಾಡುವುದು ನಮ್ಮ ದೇಶದಲ್ಲಿ ದಿನನಿತ್ಯದ ಸಂಗತಿ. ಆದರೆ ಇಂಗ್ಲೆಂಡಿನಂಥ ದೇಶದಲ್ಲಿ, ಅದೂ ರಾಜಪಟ್ಟಾಭಿಷೇಕದ ಸಂದರ್ಭದಲ್ಲಿ ದೊಡ್ಡ ಸೆಲೆಬ್ರಿಟಿಯೊಬ್ಬರು ತಮ್ಮ ಕೈಯ್ಯೊಳಗಿನ ಚೀಟಿ ನೋಡುತ್ತ ಕೂತಿರುವ ಜನರ ಸಾಲುಗಳುದ್ದಕ್ಕೂ ಓಡಾಡುತ್ತಿರುವುದು ಅಲ್ಲಿನ ಮಂದಿಗೆ ಮೋಜೆನ್ನಿಸಿದೆಯೋ ಏನೋ.

ಇದನ್ನೂ ಓದಿ : King Charles III coronation: ಬ್ರಿಟನ್ ರಾಜ 3ನೇ ಚಾರ್ಲ್ಸ್ ಪಟ್ಟಾಭಿಷೇಕ

ಇದೇ ನೆಪದಲ್ಲಿ ಅವರ ತಲೆಯ ಮೇಲಿನ ಟೊಪ್ಪಿಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ‘ಎಷ್ಟು ಮುದ್ದಾಗಿ ಕಾಣುತ್ತಿದ್ದಾಳೆ ಆ ದೊಡ್ಡ ಟೊಪ್ಪಿಯಡಿ’ ಕೆಲ ಅಭಿಮಾನಿಗಳು ಪ್ರೀತಿ ಹಂಚಿಕೊಂಡಿದ್ದಾರೆ. ‘ಆ ಅಗಾಧ ಟೊಪ್ಪಿಯಿಂದಾಗಿಯೇ ಅವಳಿಗೆ ಸೀಟು ಕಾಣುತ್ತಿಲ್ಲ’ ಎಂದು ಕೆಲವರು. ‘ಕೇಟಿಗೆ ಇನ್ನೂ ಸೀಟು ಸಿಕ್ಕೇ ಇಲ್ಲ, ಹಾಗೆಯೇ ಹುಡುಕುತ್ತಲೇ ಇದ್ದಾಳೆ’ ಎಂದು ಹಲವರು ಪ್ರತಿಕ್ರಿಯಿಸಿದ್ಧಾರೆ. ಆದರೆ ಕೇಟಿ, ತಲೆಕೆಡಿಸಿಕೊಳ್ಳಬೇಡಿ ನನ್ನ ಸೀಟ್​ ನನಗೆ ಸಿಕ್ಕಿದೆ’ ಎಂದು ಮರುಟ್ವೀಟ್ ಮಾಡಿದ್ದಾಳೆ.

ಇದನ್ನೂ ಓದಿ : ಹಸ್ಕಿಗೀತೆ; ಸಂಗೀತ ಕಲಿಯುವಲ್ಲಿ ಎಂಥಾ ಶ್ರದ್ಧೆ ಈ ತಾಯಿ ಮಕ್ಕಳದು

ಆಗಲಿ, ಅವರಿಗೆ ಸೀಟು ಸಿಕ್ಕಿದ್ದಲ್ಲಿ ಯಾವುದೇ ಕಾರಣಕ್ಕೂ ಅದನ್ನವರು ಬಿಟ್ಟುಕೊಡಬಾರದು. ಮಧ್ಯದಲ್ಲಿ ಎಲ್ಲಿಯಾದರೂ ಹೋಗಿಬರುವ ಪ್ರಸಂಗ ಬಂದರೂ ನಮ್ಮೂರುಗಳಲ್ಲಿ ಕರವಸ್ತ್ರ, ಟವೆಲ್ಲು, ಅಥವಾ ರುಮಾಲು ಹಾಕಿ ಸೀಟು ಕಾಯ್ದಿರಿಸುವಂತೆ ಕೇಟಿ ತನ್ನ ಅಗಾಧ ಟೊಪ್ಪಿಯನ್ನು ಸೀಟಿನಲ್ಲಿ ಇಟ್ಟು ಹೋಗಲಿ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 5:22 pm, Mon, 8 May 23

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು