‘ಅಷ್ಟು ಕಷ್ಟವೇ ನನ್ನದೊಂದು ಪಾಸ್ಪೋರ್ಟ್ ಫೋಟೋ ತೆಗೆಯುವುದು?’ ಎಂಥ ಜನವಪ್ಪಾ ನೀವು!
Passport Size Photo : 'ಅಬ್ಬಾ ಎಂಥಾ ನಿದ್ದೆ! ಹನ್ನೆರಡು ದಿನಗಳ ನನ್ನ ಹೆಣ್ಣುಮಗುವಿನ ಪಾಸ್ಪೋರ್ಟ್ ಸೈಝ್ ಫೋಟೋ ತೆಗೆಯುವುದು ಒಂದು ಅಗಾಧ ಕೆಲಸವೇ...’ ವಿಡಿಯೋ ನೋಡಿ.
Viral Video : ಮಗು ಇದ್ದಲ್ಲಿ ನಗು, ಕುತೂಹಲ, ಖುಷಿ, ತಾಳ್ಮೆ, ಆತಂಕ, ಅಚ್ಚರಿ, ಸಾಹಸ ಎಲ್ಲ ಭಾವವೂ ಮಿಳಿತಗೊಂಡಿರುತ್ತದೆ. ಅದರ ಒಂದೊಂದು ಚಲನವಲನವೂ ಅಪೂರ್ವವೇ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಮಗು ಹುಟ್ಟಿ ಹನ್ನೆರಡು ದಿನಗಳಾಗಿವೆಯಷ್ಟೇ. ಇದರ ಪಾಸ್ಪೋರ್ಟ್ ಫೋಟೋ ತೆಗೆಯಲೆಂದು ಅಪ್ಪನಾದವನು ಏರ್ಪಾಡು ಮಾಡಿದ್ದಾನೆ. ಆದರೆ ಅಷ್ಟು ಸುಲಭವೇ ಇದು? ಈ ಕೆಳಗಿನ ವಿಡಿಯೋ ನೋಡಿ ಯಾಕೆ ಎಂದು ಗೊತ್ತಾಗುತ್ತದೆ!
ಇದನ್ನೂ ಓದಿView this post on Instagram
ಅಬ್ಬಾ ಇದೊಂದು ಅಗಾಧ, ಅದ್ಭುತವಾದಂಥ ದಿನ ಎಂದು ಫೋಟೋ ಶೂಟ್ ಮುಗಿದ ಮೇಲೆ ಈ ಮಗುವಿನ ಅಪ್ಪ ಉದ್ಗರಿಸಿದ್ದಾನೆ! ಯೂಟ್ಯೂಬರ್ ಕೂಡ ಆಗಿರುವ ಮಗುವಿನ ಅಪ್ಪ ನಿಖಿಲ್ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
‘ಎಳೆಕೂಸುಗಳು ದಿನವೂ ದೀರ್ಘಾವಧಿಯಲ್ಲಿ ನಿದ್ದೆ ಮಾಡುತ್ತವೆ ಹಾಗಾಗಿ ಫೋಟೋಶೂಟ್ ಮಾಡುವುದು ಸುಲಭ ಎಂದುಕೊಂಡಿದ್ದೆ. ಆದರೆ ಪಾಸ್ಪೋರ್ಟ್ ಸೈಝಿನ ಫೋಟೋ ತೆಗೆಯುವುದು ಮಾತ್ರ ಕಷ್ಟ! ನನ್ನ ಮಗಳ ಪಾಸ್ಪೋರ್ಟ್ ಫೋಟೋ ತೆಗೆಯಲು ಕೆಲ ಗಂಟೆಗಳನ್ನೇ ಮೀಸಲಿಡಬೇಕಾಯಿತು’ ಎಂದಿದ್ಧಾನೆ ಶರ್ಮಾ.
ಇದನ್ನೂ ಓದಿ : ನಮಗೂ ಇಂಥ ಅಪ್ಪ ಬೇಕು; ‘ಏನೂ ಆಗುವುದಿಲ್ಲ ಮಗಳೇ, ಇಲ್ಲಿ ಒಮ್ಮೆ ನಾಲ್ಕು ಹೆಜ್ಜೆ ಕುಣಿದು ನೋಡು’
ಈ ವಿಡಿಯೋ ಅನ್ನು ಈತನಕ ಸುಮಾರು 4 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 2.3 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಬಹಳಷ್ಟು ಜನ ಮುದ್ದಾದ ಮಗುವನ್ನು ಹೊಗಳಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ಇತ್ತೀಚೆಗೆ ನಮ್ಮ ಐದು ದಿನಗಳ ಮಗುವಿನ ಫೋಟೋಗಳನ್ನು ಕೆಲವೇ ನಿಮಿಷಗಳಲ್ಲಿ ತೆಗೆದೆವು. ಬಹಳ ಚೆನ್ನಾಗಿ ಬಂದಿವೆ. ಆದರೆ, ಅದರ ಹೆಬ್ಬೆರಳಿನ ಮುದ್ರೆ ಪಡೆಯಲು ಮೂರು ಗಂಟೆಗಳೇ ಬೇಕಾಯಿತು’ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?
ಎಳೇಕೂಸುಗಳಿಗೆ ಫ್ಲ್ಯಾಷ್ ಬಳಸಿ ಫೋಟೋ ತೆಗೆಯಬೇಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ ಮತ್ತೊಬ್ಬರು. ನಮ್ಮ ಮಗಳ ಪಾಸ್ಪೋರ್ಟ್ ಫೋಟೋವನ್ನು ತೆಗೆಯಲು ನಮಗೆ 30 ದಿನಗಳು ಬೇಕಾದವು! ಮತ್ತೆ ಆಕೆ ಡೈಪರ್ನಲ್ಲಿ ಮಲವಿಸರ್ಜಿಸುವಾಗ ಅದನ್ನೂ ಕೂಡ ಫೋಟೋ ತೆಗೆಯಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ತಂದೆಗೆ ಹೆಣ್ಣುಮಗುವೆಂದರೆ ಅಪಾರ ಪ್ರೀತಿ. ಅದನ್ನು ವಿವರಿಸಲಸಾಧ್ಯ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:26 pm, Mon, 8 May 23