Viral Video: ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಉರಗ ತಜ್ಞ
ವ್ಯಕ್ತಿಯೊಬ್ಬರು ಕಾರಿನಡಿಯಲ್ಲಿ ಅಡಗಿ ಕುಳಿತಿದ್ದ ಕೋಬ್ರಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡುವ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ಕ್ಲಿಪ್ ನ್ನು ಅರಣ್ಯಾಧಿಕಾರಿ ಸುಸಾಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯಾವುದೇ ಹಾವುಗಳಾದರೂ ಸರಿ, ಅವುಗಳು ಮಾನವನ ಆವಾಸಸ್ಥಾನಗಳಿಂದ ದೂರವಿದ್ದು ಕಾಡುಗಳಲ್ಲಿ ವಾಸಿಸಲು ಬಯಸುತ್ತವೆ. ಈ ಮಳೆಗಾಲದಲ್ಲಿ ಅವುಗಳು ಅರಣ್ಯಗಳಿಗೆ ಸಮೀಪದಲ್ಲಿರುವ ಮಾನವ ಆವಾಸಸ್ಥಾನಗಳಿಗೆ ಆಹಾರ ಮತ್ತು ಸುರಕ್ಷತೆಯ ಹುಡುಕಾಟಕ್ಕಾಗಿ ಬರುತ್ತಿರುತ್ತವೆ. ಈ ರೀತಿ ಬಂದಂತಹ ಹಾವುಗಳನ್ನು ಅದೆಷ್ಟೋ ಜನ ಉರಗ ತಜ್ಞರನ್ನು ಕರೆದಂತು ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬರುವಂತೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಬರೋಬ್ಬರಿ 15 ಫೀಟ್ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು, ಈ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಇದೀಗ ವೈರಲ್ ಆಗಿರುವ ವೀಡಿಯೋವನ್ನು ಅರಣ್ಯಾಧಿಕಾರಿ ಸುಸಂತ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಹಾಗೂ ‘ಹಾವು ಹಿಡಿಯುವ ಕಾರ್ಯಾಚರಣೆಯನ್ನು ತರಬೇತಿ ಪಡೆದ ಉರಗ ತಜ್ಞರಿಂದ ಮಾಡಲಾಗುತ್ತದೆ. ದಯವಿಟ್ಟು ನೀವು ಈ ರೀತಿಯ ಪ್ರಯತ್ನ ಮಾಡಬೇಡಿ’ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಮನೆಯೊಂದರಲ್ಲಿ ಕಾಣಿಸಿಕೊಂಡ 15 ಅಡಿ ಉದ್ದದ ಕಿಂಗ್ ಕೋಬ್ರಾವನ್ನು ಉರಗ ತಜ್ಞರೊಬ್ಬರು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
King Cobra’s are vital in the food chain for maintaining balance in nature. Here is one nearly 15 feet long rescued & released in the wild.
Entire operation is by trained snake catchers. Please don’t try on your own. With onset of rains, they can be found in all odd places. pic.twitter.com/g0HwMEJwp2
— Susanta Nanda (@susantananda3) May 4, 2023
ಇದನ್ನೂ ಓದಿ:ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್ ನ್ಯೂಸ್ ತುಣುಕು ವೈರಲ್
ಮನೆಯೊಂದರ ಬಳಿ ನಿಲ್ಲಿಸಿದ ಕಾರಿನಡಿಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪವನ್ನು ನುರಿತ ಉರಗ ತಜ್ಞರು ಮೊಣಚಾದ ಹಾವು ಹಿಡಿಯುವ ಸ್ಟಿಕ್ ಸಹಾಯದಿಂದ ಹಿಡಿದು ನಂತರ ಆ ದೈತ್ಯ ಕಾಳಿಂಗ ಸರ್ಪವನ್ನು ಉದ್ದನೆಯ ಚೀಲಕ್ಕೆ ಹಾಕಿ, ಸುರಕ್ಷಿತವಾಗಿ ಕಾಡಿಗೆ ಬಿಡುವ ದೃಶ್ಯವನ್ನು ವೈರಲ್ ವೀಡಿಯೋ ಕ್ಲಿಪ್ನಲ್ಲಿ ಕಾಣಬಹುದು.
ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ವೀಡಿಯೋ ಸುಮಾರು 31.2 ಸಾವಿರ ವೀಕ್ಷಣೆಗಳನ್ನು ಹಾಗೂ 1.5 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಅನೇಕರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ‘ಉತ್ತಮ ವೀಡಿಯೋ. ಈ ಹಾವು ಹಿಡಿಯುವವರು ತುಂಬಾ ಧೈರ್ಯಶಾಲಿ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ನಾನು ಯಾವಾಗಲೂ ಕೇಳಲು ಬಯಸುವ ಈ ಬ್ಯಾಗ್ನ ಬಗ್ಗೆ ಒಂದು ಪ್ರಶ್ನೆ ಇದೆ. ಚೀಲವನ್ನು ಹೊತ್ತೊಯ್ಯುವಾಗ ಅವು ಕಚ್ಚುವುದಿಲ್ಲವೇ, ವಿಶೇಷವಾಗಿ ಆ ವಿಷಕಾರಿ ಹಾವುಗಳು’ ಎಂದು ತಮ್ಮ ಕುತೂಹಲದ ಬಗ್ಗೆ ಕೇಳಿದ್ದಾರೆ. ಇನ್ನು ಅನೇಕ ಬಳಕೆದಾರರು ಹಾವನ್ನು ರಕ್ಷಿಸಿದ್ದಕ್ಕಾಗಿ ಇದು ತುಂಬಾ ಒಳ್ಳೆಯ ಕಾರ್ಯ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ