ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್​ ನ್ಯೂಸ್​ ತುಣುಕು ವೈರಲ್

Blooper : ‘ಇದರಲ್ಲೇನು ತಪ್ಪಿದೆ? ಇಂಥವು ಆಗುತ್ತವೆ,’ ‘ಇದೊಂದು ಹರ್ಷದಾಯಕ ಘಟನೆ’ ಎಂದು ಮಾನವಸಹಜ ಸಹಾನುಭೂತಿಯಿಂದ ಪ್ರತಿಕ್ರಿಯಿಸಿದ್ದಾರೆ ಅನೇಕರು. ನಮ್ಮ ದೇಶದ ಸುದ್ದಿವಾಚಕಿ ಹೀಗೆ ವರ್ತಿಸಿದ್ದರೆ ಏನೆನ್ನುತ್ತಿದ್ದಿರಿ?

ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್​ ನ್ಯೂಸ್​ ತುಣುಕು ವೈರಲ್
ಬಿಬಿಸಿ ಸುದ್ದಿವಾಚಕಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 08, 2023 | 10:29 AM

Viral Video : ಕ್ಯಾಮೆರಾ ಎದುರು ನಟಿಸುವುದು, ಮಾತನ್ನಾಡುವುದು, ಪ್ರಶ್ನೆಗಳಿಗೆ ಉತ್ತರಿಸುವುದು ಅಥವಾ ಸುದ್ದಿ ಪ್ರಸ್ತುತಪಡಿಸುವುದು ಒಂದು ಸವಾಲೇ. ನೇರಪ್ರಸಾರದಲ್ಲಂತೂ ಈ ಸವಾಲು ಇನ್ನೂ ಹೆಚ್ಚಿರುತ್ತದೆ. ಏಕೆಂದರೆ ಕ್ಯಾಮೆರಾ ನಿಮ್ಮ ಹಾವಭಾವ, ತಪ್ಪು ಒಪ್ಪು, ಓರೆಕೋರೆಗಳನ್ನು ಜಗತ್ತಿನಗಲಕ್ಕೂ ಹರಡಿ ಕೊಂಡಿರುವ ಕೋಟ್ಯಂತರ ಕಣ್ಣುಗಳಿಗೆ ಸಂವಹಿಸುತ್ತಿರುತ್ತದೆ. ಹೀಗಿದ್ದಾಗ ಅಕಸ್ಮಾತ್ ಜರುಗುವ ಬ್ಲೂಪರ್ಸ್ ಅಥವಾ ಸಣ್ಣ ಪ್ರಮಾದಗಳು ನಗೆಗೋ, ತಲ್ಲಣಕ್ಕೋ, ಆಕ್ರೋಶಕ್ಕೋ ಅಥವಾ ಒಮ್ಮೊಮ್ಮೆ ಸಹಾನುಭೂತಿಗೂ ಕಾರಣವಾಗುವುದು ಸಾಮಾನ್ಯವೇ ಅಲ್ಲವೇ?

ಏಕೆಂದರೆ ನಾವಿರುವುದು ಎಲ್ಲವೂ ಅಳಿಸಲಾರದ ಮಸಿಯಲ್ಲಿ ಬರೆಯಲ್ಪಟ್ಟ, ವಿಡಿಯೋ ಕ್ಲಿಪ್‌ಗಳ, ಸ್ಚ್ರೀನ್‌ಶಾಟ್‌ಗಳ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ. ಸತತ ಕ್ಯಾಮೆರಾದ ಎದುರಿಗೆ ಕೆಲಸ ಮಾಡುವ ಅನಿವಾರ್ಯತೆ ಇರುವವರು ಇದನ್ನು ನಿಭಾಯಿಸುವ ಬಗೆ ಹೇಗೆ?

ಇದನ್ನೂ ಓದಿ : ರೈಲಿನಲ್ಲಿ ರೀಲು; ಭಲೇ ಹುಡುಗೀರಾ!;ಮೆಚ್ಚಿದೆವು ನಿಮ್ಮ ಆತ್ಮವಿಶ್ವಾಸವ

ಹೀಗೊಂದು ಅಚಾತುರ್ಯದ ಘಟನೆ ಇತ್ತೀಚೆಗೆ ಬಿಬಿಸಿ ನ್ಯೂಸ್ ವಾಹಿನಿಯ ಮೂಲಕ ಪ್ರಸಾರವಾಯಿತು. ಲೈವ್​ನಲ್ಲಿದ್ದ ಸುದ್ದಿವಾಚಕಿ ಕೊನೇ ಹಂತದಲ್ಲಿ ಇನ್ನೇನು ತನ್ನ ಕೆಲಸ ಮುಗಿಯಿತು ಎಂದು ವಿಶ್ರಮಿಸುವ ಹೊತ್ತಿನಲ್ಲಿ ಅದು ನೇರಪ್ರಸಾರದ ಮೂಲಕ ಜಗತ್ತನ್ನು ತಲುಪಿಬಿಟ್ಟಿದೆ. ಇದು ಅರಿವಿಗೆ ಬರುತ್ತಿದ್ದಂತೆ ಅರೆಕ್ಷಣ ಆಕೆ ದಂಗಾದರೂ ಕೂಡಲೇ ಸಾವರಿಸಿಕೊಂಡು ತನ್ನ ಕೆಲಸ ಮುಂದುವರಿಸಿದ್ದಾಳೆ.

ಇದನ್ನೂ ಓದಿ : ಬುದ್ಧಂ ಶರಣಂ; ಗರ್ಲ್​ಫ್ರೆಂಡ್​ ಮತ್ತು ಹಣಕ್ಕಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ಚೀನೀಭೂಪ

ನಿರೀಕ್ಷೆಯಂತೆ ಈ ವಿಡಿಯೋ ವೈರಲ್ ಆಗಿ ಹತ್ತಾರು ಲಕ್ಷ ಜನ ಈ ಬ್ಲೂಪರ್ ನೋಡಿದ್ದಾರೆ. ಅನೇಕ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ‘ಇಲ್ಲಿಗೆ ಅವಳ ಕೆಲಸ ಹೋಯಿತು, ವೃತ್ತಿಗೆ ತಿಲಾಂಜಲಿ,’ ಎಂದು ಕೆಲವರು ಭವಿಷ್ಯ ನುಡಿದಿದ್ದರೆ, ಇನ್ನು ಕೆಲವರು, ‘ಕಂಕುಳ ಕೂದಲನ್ನು ಅಣಕ ಮಾಡುವ ಮೀಮ್‌ಗಳ ಸರಣಿಯೇ ಬರಲಿದೆ, ಕಾಯಿರಿ,’ ಎಂದು ಕೀಟಲೆ ಮಾಡಿದ್ದಾರೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಆದರೆ ಗಮನಾರ್ಹ ಸಂಗತಿಯೆಂದರೆ, ಬಹಳಷ್ಟು ಮಂದಿ, ‘ಇದರಲ್ಲೇನು ತಪ್ಪಿದೆ? ಇಂಥವು ಆಗುತ್ತವೆ,’ ‘ಇದೊಂದು ಹರ್ಷದಾಯಕ ಘಟನೆ’ ಎಂದು ಮಾನವಸಹಜ ಸಹಾನುಭೂತಿಯಿಂದ ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ನಿಮಗೇನನ್ನಿಸುತ್ತದೆ? ನಮ್ಮ ದೇಶದ ವಾಹಿನಿಯಲ್ಲಿ ಒಬ್ಬ ನಿರೂಪಕಿಯಿಂದ ಈ ರೀತಿಯ ಪ್ರಮಾದವಾಗಿದ್ದರೆ ನಮ್ಮ ಮಂದಿಯಿಂದ ಯಾವ ರೀತಿಯ ಪ್ರತಿಕ್ರಿಯೆ ಅಪೇಕ್ಷಿಸಲು ಸಾಧ್ಯ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:24 am, Mon, 8 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ