ಬುದ್ಧಂ ಶರಣಂ; ಗರ್ಲ್ಫ್ರೆಂಡ್ ಮತ್ತು ಹಣಕ್ಕಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ಚೀನೀಭೂಪ
Buddha : 'ನಿನಗೆ ಗೊತ್ತಾ? ನನಗೀಗ 27. ಕಾರಿಲ್ಲ ಮನೆಯಿಲ್ಲ ಗರ್ಲ್ಫ್ರೆಂಡ್ ಇಲ್ಲ’ ಎಂದು ಯುವಕನೊಬ್ಬ 71 ಮೀಟರ್ ಉದ್ದದ ಬುದ್ಧನ ಕಿವಿ ಬಳಿ ಏರ್ಪೋಡ್ ಆಕಾರದ ಸ್ಪೀಕರ್ ಇಟ್ಟು ಜೋರಾಗಿ ಕೂಗಿಕೊಂಡ. ಮುಂದೇನಾಯಿತು?
Viral News : ದೈತ್ಯ ಬುದ್ಧನೇ ನಿನಗಾಗಿ ನಾನು 2,000 ಕಿ.ಮೀ ಪ್ರಯಾಣಿಸಿ ಬಂದಿದ್ದೇನೆ. ಹಣ, ಗರ್ಲ್ ಫ್ರೆಂಡ್, ಕಾರು ಎಲ್ಲವೂ ನನಗೆ ಬೇಕು ಕೆಳಿಸುತ್ತಿದೆಯಾ ನಿನಗೆ? ಎಂದು ಲೆಶನ್ನಲ್ಲಿರುವ ಬೃಹದಾಕಾರದ ಬುದ್ಧನ ಮೂರ್ತಿಯ ಕಿವಿ ಬಳಿ ಏರ್ಪೋಡ್ ಆಕಾರದ ಸ್ಪೀಕರ್ ಹಿಡಿದುಕೊಂಡು ಹೀಗೆ ಜೋರಾಗಿ ಕೂಗಿದ್ದಾನೆ ಚೀನಾದ ಈ ವ್ಯಕ್ತಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಅತಿವೇಗದಲ್ಲಿ ಹರಿದಾಡುತ್ತಿದೆ. ಇವನ ಅತಿರೇಕತನಕ್ಕೆ ನೆಟ್ಟಿಗರು ಬಿದ್ದುಬಿದ್ದು ನಗುತ್ತಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಏಪ್ರಿಲ್ 25ರಂದು ಈ ಸುದ್ದಿ ಮತ್ತು ವಿಡಿಯೋ ಅನ್ನು ಪ್ರಕಟಿಸಿತ್ತು. ಜಾಂಗ್ ಎಂಬಾತ 71 ಮೀಟರ್ ಎತ್ತರದ ಲೆಶನ್ ಬುದ್ಧನ ಕಿವಿಯ ಪಕ್ಕದಲ್ಲಿ ಸ್ಪೀಕರ್ ಹಿಡಿದು, ‘ನಿನಗೆ ಗೊತ್ತಾ? ನಾನು ಮೊದಲು ಶ್ರೀಮಂತನಾಗಬೇಕು. ಸುಮಾರು 12 ಕೋಟಿ ಹಣ ಸಾಕು. ಬಹುಮುಖ್ಯವಾಗಿ ನನಗೆ ಒಬ್ಬ ಗರ್ಲ್ಫ್ರೆಂಡ್ ಬೇಕು. ಆಕೆ ಸುಂದರವಾಗಿರಬೇಕು, ಸುಕೋಮಲೆಯಾಗಿರಬೇಕು ಮತ್ತು ನನ್ನನ್ನು ಪ್ರೀತಿಸುವಂತವಳಾಗಬೇಕು.’ ಎಂದು ಕೂಗಿ ಪ್ರಾರ್ಥಿಸಿಕೊಂಡಿದ್ದಾನೆ.
ವರ್ಷಕ್ಕೆ ಮೂರು ನಾಲ್ಕು ಸಲ ಇಲ್ಲಿ mercury retrograde ಎಂಬ ಜ್ಯೋತಿಷ್ಯ ವರ್ತಮಾನ (ಜನರ ನಂಬಿಕೆ ಪ್ರಕಾರ) ಸಂಭವಿಸುತ್ತದೆ. ಆ ಸಂದರ್ಭದಲ್ಲಿ ಜನರು ತಮ್ಮ ದುಃಖಗಳನ್ನು ತೋಡಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಎಣಿಸಿದಂತೆ ಅದೃಷ್ಟದ ಸೂಚನೆ ಇಲ್ಲಿ ದಕ್ಕಲಾರದು.
ಈ 27 ವರ್ಷದ ಜಾಂಗ್ಗೆ ಕೂಡ ಅದೃಷ್ಟದ ಬಾಗಿಲು ತೆರೆದಿಲ್ಲ. ಭ್ರಮನಿರಸನಗೊಂಡ ಆತ 12 ಗಂಟೆ ಪ್ರಯಾಣಿಸಿ ತನ್ನ ಊರು ಸೇರಿದ್ದಾನೆ. ಇಷ್ಟೇ ಅಲ್ಲ ಆನ್ಲೈನ್ನಲ್ಲಿ ನಾನು ಈ ಸ್ಪೀಕರ್ ಖರೀದಿಸಿದೆ. ಬುದ್ಧನ ಕಿವಿಗೆ ಇದು ಸರಿಹೋಗುತ್ತದೆ ಮತ್ತೆ ನನ್ನ ಪ್ರಾರ್ಥನೆ ತಲುಪುತ್ತದೆ ಎಂದು ನಾನಂದುಕೊಂಡಿದ್ದೆ. ಆದರೆ ಇದು ಯಾಕೋ ಸರಿ ಹೋಗಲಿಲ್ಲ ಎಂದು ಬೇಸರಿಸಿಕೊಂಡಿದ್ದಾನೆ.
ಹುಂಬುತನದಿಂದ ಕೂಡಿದ ಈತನ ಪ್ರಾರ್ಥನಾ ಶೈಲಿಯನ್ನು ನೆಟ್ಟಿಗರು ಆಡಿಕೊಂಡು ನಗುತ್ತಿದ್ದಾರೆ. ಹೋಗಿಹೋಗಿ ಬುದ್ಧನಿಗಾಗಿ ಇಂಥ ಬೇಡಿಕೆಯನ್ನು ನಿವೇದಿಸಿಕೊಳ್ಳುವುದೆ? ಆಸೆಯೇ ದುಃಖಕ್ಕೆ ಮೂಲ ಎಂದಿದ್ದು ನೆನಪಿಲ್ಲವೆ? ಅಲ್ಲದೆ, ಇಯರ್ ಫೋನ್ ಐಡಿಯಾ ಹೇಗೆ ಬಂತು ಎಂದು ಕೇಳಿದ್ದಾರೆ. ನೀವು ಇಯರ್ ಫೋನ್ ಇಟ್ಟಿದ್ದಕ್ಕೇ ಬುದ್ಧ ನಿಮ್ಮ ಆಸೆಯನ್ನು ನೆರವೇರಿಸಿಲ್ಲ ಎನ್ನುವುದು ನಿಮಗೆ ತಿಳಿಯಲಿಲ್ಲವೇ? ಹೀಗೆಲ್ಲ ಅನೇಕರು ಪ್ರಶ್ನಿಸಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:48 am, Sun, 7 May 23