ಗಗನಸಖಿ ವಿಮಾನದಲ್ಲಿ ತನ್ನ ಸಹೋದರನನ್ನು ನೋಡಿದ ಆ ಕ್ಷಣಗಳು

Brother and Sister : ಮನೆಯಲ್ಲಾದರೆ ಅಕ್ಕ ತಮ್ಮನ ಮಾತು ಕೇಳದೇ ಇರಬಹುದು. ಆದರೆ ವಿಮಾನದಲ್ಲಿ? ಒಂದು ಗ್ಲಾಸ್​ ನೀರು ಕೇಳಿದರೆ ಆಕೆ ನಗುಮುಖದಿಂದಲೇ ಕೊಡಬೇಕು ಅಲ್ಲವೆ? ಎಂದು ಒಬ್ಬರು ತಮಾಷೆ ಮಾಡಿದ್ದಾರೆ.

ಗಗನಸಖಿ ವಿಮಾನದಲ್ಲಿ ತನ್ನ ಸಹೋದರನನ್ನು ನೋಡಿದ ಆ ಕ್ಷಣಗಳು
ವಿಮಾನದಲ್ಲಿ ಸಹೋದರನೊಂದಿಗೆ ಗಗನಸಖಿ
Follow us
| Updated By: ಶ್ರೀದೇವಿ ಕಳಸದ

Updated on: May 07, 2023 | 10:37 AM

Viral Video : ಕರ್ತವ್ಯದಲ್ಲಿ ಮುಳುಗಿದಾಗ ಅಚಾನಕ್ಕಾಗಿ ಒಡಹುಟ್ಟಿದವರು ಎದುರಾದರೆ ಆಗುವ ಸಂತಸಕ್ಕೆ ಎಣೆ ಇದೆಯೇ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತನ್ನ ವಿಮಾನದಲ್ಲಿ ಅಚಾನಕ್ಕಾಗಿ ಸಹೋದರ ಸಿಕ್ಕಾಗ ಈ ಗಗನಸಖಿಗೆ ಹೇಗೆ ಪ್ರತಿಕ್ರಿಯಿಸಿದ್ದಾಳೆ ಎಂದು. ಈ ಅಂತಃಕರಣಪೂರಿತ ನಗುವನ್ನು ಎಲ್ಲಿಂದಲೂ ಕಡ ತರಲು ಸಾಧ್ಯವಿಲ್ಲ. ಬಾಂಧವ್ಯವೆಂದರೆ ಹೀಗೇ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by S H E M ?️ (@sam_rajalim21)

ಒಡಹುಟ್ಟಿದವರಲ್ಲಿಯೂ ಜಗಳ, ಚೇಷ್ಟೆ, ಪ್ರೀತಿ, ಮೌನ, ಮುನಿಸು ಎಲ್ಲವೂ ಮಿಳಿತಗೊಂಡಿರುತ್ತದೆ. ಆದರೆ ಸ್ಥಾಯಿಯಲ್ಲಿ ಇರುವುದು ಮಾತ್ರ ಅಂತಃಕರಣ. ಈ ವಿಡಿಯೋ ನೋಡಿದ ನೆಟ್ಟಿಗರ ಮನಸ್ಸುಗಳು ಮೃದುಗೊಂಡಿವೆ. ಅನೇಕರು ಹೃದಯತುಂಬಿ ಇವರಿಬ್ಬರನ್ನೂ ಹರಸಿದ್ದಾರೆ.

ಇದನ್ನೂ ಓದಿ : Video: ಖಾಲಿ ವಿಮಾನದಲ್ಲಿ ಸೂಪರ್ ಡ್ಯಾನ್ಸ್; ನೋಡುಗರನ್ನು ಮೋಡಿ ಮಾಡಿದ ಗಗನಸಖಿ!

ಏಪ್ರಿಲ್ 22 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಸಮಾರು 18  ಮಿಲಿಯನ್​ ಜನರು ವಿಡಿಯೋ ನೋಡಿದ್ದಾರೆ. 10 ಮಿಲಿಯನ್​ಗಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಬಹಳ ಆಪ್ತವಾಗಿದೆ ಈತನಕ ನೋಡಿದ ವಿಡಿಯೋಗಳಲ್ಲಿ ಇದು ನನ್ನನ್ನು ಹೆಚ್ಚು ಪ್ರಭಾವಿಸಿದೆ ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ನೋಡಿ : ಎಕ್ಸ್​​ಕ್ಯೂಸ್​​ ಮೀ, ಗುಟ್ಕಾ ಉಗಿಯಲು ವಿಮಾನದ ಕಿಟಕಿಯ ಬಾಗಿಲನ್ನು ತೆರೆಯುವಿರಾ?

ಮನೆಯಲ್ಲಾದರೆ ಅಕ್ಕ ತಮ್ಮನ ಮಾತು ಕೇಳದೇ ಇರಬಹುದು. ಆದರೆ ವಿಮಾನದಲ್ಲಿ? ಒಂದು ಗ್ಲಾಸ್​ ನೀರು ಕೇಳಿದರೆ ಆಕೆ ನಗುಮುಖದಿಂದಲೇ ಕೊಡಬೇಕು ಅಲ್ಲವೆ? ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಿಮ್ಮ ತಮ್ಮ ಅದೃಷ್ಟ ಮಾಡಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನನ್ನನ್ನು ನಿಮ್ಮ ಸಹೋದರನೆಂದು ಸ್ವೀಕರಿಸಿ, ನಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗೇ ಒಂದು ದಿನ ಎದುರುಗೊಳ್ಳುವ ಆ ದಿನ ಬೇಗ ಬರಲಿ ಎಂದು ಮಗದೊಬ್ಬರು ಕೇಳಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ