AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಕ್ಸ್​​ಕ್ಯೂಸ್​​ ಮೀ, ಗುಟ್ಕಾ ಉಗಿಯಲು ವಿಮಾನದ ಕಿಟಕಿಯ ಬಾಗಿಲನ್ನು ತೆರೆಯುವಿರಾ?

Gutka : ಅಂಗೈಯ್ಯೊಳಗೆ ಏನನ್ನೋ ಉಜ್ಜುತ್ತ, ಗಗನಸಖಿಯ ಗಮನ ಸೆಳೆದು ವಿಮಾನದ ಕಿಟಕಿಯನ್ನು ತೆರೆಯಲು ಕೇಳಿಕೊಳ್ಳುತ್ತಾನೆ ಈ ಯುವಕ. ಆಕೆ ಯಾಕೆ ಎಂದು ಕೇಳಿದಾಗ ಗುಟ್ಕಾ ಉಗಿಯಲು ಎಂದು ಹೇಳುತ್ತಾನೆ.

ಎಕ್ಸ್​​ಕ್ಯೂಸ್​​ ಮೀ, ಗುಟ್ಕಾ ಉಗಿಯಲು ವಿಮಾನದ ಕಿಟಕಿಯ ಬಾಗಿಲನ್ನು ತೆರೆಯುವಿರಾ?
ಗುಟ್ಕಾ ಉಗಿಯಲು ಕಿಟಕಿ ಬಾಗಿಲು ತೆರೆಯಿರಿ...
TV9 Web
| Edited By: ಶ್ರೀದೇವಿ ಕಳಸದ|

Updated on:Jan 23, 2023 | 11:37 AM

Share

Viral Video : ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗಷ್ಟೇ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲನ್ನು ತೆರೆದ ಪ್ರಕರಣ ಇನ್ನೂ ಹಸಿಹಸಿಯಾಗಿಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಪ್ರಕರಣದ ಸುತ್ತ ಅನೇಕ ಮೀಮ್​​ಗಳು, ಜೋಕ್​ಗಳು, ಕಾರ್ಟೂನ್​ಗಳು ಇನ್ನೂ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತಲೇ ಇವೆ. ಹೀಗಿರುವಾಗಲೇ ಯುವಕನೊಬ್ಬ ಗುಟ್ಕಾ (Gutka) ಉಗಿಯಲು ವಿಮಾನದ ಕಿಟಕಿಯನ್ನು ತೆರೆಯಲು ಗಗನಸಖಿಗೆ ಕೇಳಿಕೊಂಡ ವಿಡಿಯೋ ವೈರಲ್ ಆಗುತ್ತಿದೆ.

ಇತ್ತೀಚೆಗೆ ಸರದಿಯಂತೆ ವಿಮಾನದಲ್ಲಿ ಸಾಕಷ್ಟು ಅಹಿತಕರ, ಅಸಭ್ಯ ಘಟನೆಗಳು ನಡೆದು ವಿಮಾನಯಾನವೆಂದರೆ ಭಯ, ಉದ್ವಿಗ್ನ ಉಂಟಾಗುವಂತೆ ಮಾಡಿವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ತಕ್ಷಣ ಆರಂಭದಲ್ಲಿ ಕೋಪ ಬರುತ್ತದೆಯಾದರೂ ಕ್ಷಣಗಳಲ್ಲೆ ಇದು ನಿಮ್ಮನ್ನು ನೆಗೆಗಡಲಲ್ಲಿ ತೇಲಿಸಿ ಸದ್ಯ! ಎಂದುಕೊಳ್ಳುವಂತೆ ಮಾಡುತ್ತದೆ.

ಇದನ್ನೂ ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಇಂಡಿಗೋ ವಿಮಾನದಲ್ಲಿ ನಡೆದ ಈ ಮುದ್ದಾಮ್​ ಗುಟ್ಕಾ ಪ್ರಕರಣವನ್ನು ಗೋವಿಂದ ಶರ್ಮಾ ಎನ್ನುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂಗೈಯ್ಯೊಳಗೆ ಏನನ್ನೋ ಉಜ್ಜುತ್ತ, ಗಗನ ಸಖಿಯ ಗಮನ ಸೆಳೆದು ವಿಮಾನದ ಕಿಟಕಿಯನ್ನು ತೆರೆಯಲು ಕೇಳಿಕೊಳ್ಳುತ್ತಾನೆ ಈ ಯುವಕ. ಆಕೆ ಯಾಕೆ ಎಂದು ಕೇಳಿದಾಗ ಗುಟ್ಕಾ ಉಗಿಯಲು ಎಂದು ಹೇಳುತ್ತಾನೆ. ಆಗ ಆಕೆಗೆ ಫಕ್ಕನೆ ನಗು ಬರುತ್ತದೆ. ಗುಟುಕಾ ಉಗಿಯುವ ನಾಟಕ ಮಾಡಿದ ವ್ಯಕ್ತಿಗೂ ಅಲ್ಲಿದ್ದ ಪ್ರಯಾಣಿಕರಿಗೂ ನಗು ತಡೆಯಲಾಗುವುದಿಲ್ಲ.

ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್

ಈ ವಿಡಿಯೋ ಅನ್ನು 1 ಮಿಲಿಯನ್​ಗಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಕಾನ್ಪುರ್ ವಿಮಾನದಲ್ಲಿ ಇದಕ್ಕಾಗಿ ವಿಶೇಷ ನವೀಕರಣ ಮಾಡಲಾಗಿದೆ ಎಂದಿದ್ದಾರೆ ಒಬ್ಬರು. ಇವ ಪಕ್ಕಾ ನನ್ನ ದೋಸ್ತನೇ ಎಂದಿದ್ದಾರೆ ಇನ್ನೊಬ್ಬರು. ಉತ್ತರ ಪ್ರದೇಶ, ಬಿಹಾರದ ಮಂದಿಗೆ ವಿಮಾನದಲ್ಲಿಯೂ ಕಿಟಕಿಗಳು ಬೇಕಾಗುತ್ತವೆ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ, ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:34 am, Mon, 23 January 23

Follow Us
TV9 Web
TV9 Web

TV9 Kannada

Read More
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ