Video: 65 ವರ್ಷದ ಬೊಚ್ಚು ಬಾಯಿಯ, ಬೋಡು ತಲೆಯ ಮೇಯರ್ 16ರ ವಿದ್ಯಾರ್ಥಿನಿಯನ್ನು ಮದುವೆಯಾದ, ಅತ್ತೆಗೆ ಕೊಟ್ಟ ಗಿಫ್ಟ್ ಏನು ಗೊತ್ತಾ!?
ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮೇಯರ್ ಕಚೇರಿಯು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ನೇಮಕಾತಿಯು ಮೇಯರ್ ವಿವೇಚನೆಯ ಅನುಸಾರವೇ ಕಾರ್ಯಗತವಾಗಿದೆ ಎಂದು ಪ್ರತಿಪಾದಿಸಿದೆ
ಸ್ವಜನಪಕ್ಷಪಾತದ (nepotism) ಲಜ್ಜೆಗೆಟ್ಟ ಪ್ರಕರಣದಲ್ಲಿ, ದಕ್ಷಿಣ ಬ್ರೆಜಿಲ್ (mayor of Araucaria, southern Brazil) ಮುನ್ಸಿಪಾಲಿಟಿ ಮೇಯರ್, 65 ವರ್ಷದ ಹಿಸ್ಸಾಮ್ ಹುಸೇನ್ ದೇಹೈನಿ (Hissam Hussein Dehaini) ಅವರು 16 ವರ್ಷದ ಹುಡುಗಿ ಕೌನ್ ರೋಡ್ ಕ್ಯಾಮಾರ್ಗೊಳನ್ನು (Kauane Rode Camargo) ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ (marriage). ನಂತರ ದೊಡ್ಡ ವಿವಾದವನ್ನೂ ಸೃಷ್ಟಿಸಿದ್ದಾರೆ. ಅವರು ಮದುವೆಯಾದ ಕೆಲವು ದಿನಗಳ ನಂತರ ಅವರ ತಾಯಿಯನ್ನು ಅಂದರೆ ಅತ್ತೆಯನ್ನು (mother-in-law) ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರನ್ನಾಗಿ ನೇಮಿಸಿದ್ದಾರೆ. ಕಳೆದ ವಾರ ಈ ಪ್ರಕರಣ ನಡೆದಿದ್ದು ಮಾಜಿ ಬಾಲ ಸೌಂದರ್ಯ ರಾಣಿ ಕೌನೆ ರೋಡ್ ಕ್ಯಾಮಾರ್ಗೊಳನ್ನು ವಿವಾಹವಾದಾಗ ಸ್ವತಃ ದೇಹೈನಿ ಹುಬ್ಬೇರಿಸಿ, ಸಂಭ್ರಮಿಸಿದ್ದಾನೆ. ಆದರೆ ಆ ಶ್ರೀಮಂತ ಬ್ರೆಜಿಲಿಯನ್, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುತ್ತಿದ್ದಂತೆ ತೀವ್ರ ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಮ್ಮ ಪಕ್ಷಕ್ಕೆ, ಮತ್ತು ಸರ್ಕಾರದಲ್ಲಿನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ವಧುವಿನ ವಯಸ್ಸು 16 ದಾಟುವುದಕ್ಕೆ ಕಾದಿದ್ದು, ಮರು ದಿನವೇ ಆಕೆಯನ್ನು ಮೇಯರ್ ಕಾನೂನುಬದ್ಧವಾಗಿ ಮದುವೆಯಾದರು ಎಂಬ ಮಾಹಿತಿಯೂ ಇದೆ. ಬ್ರಿಟಿಷ್ ಮಾಧ್ಯಮಗಳ ಪ್ರಕಾರ, ಪ್ರೌಢಶಾಲಾ ವಿದ್ಯಾರ್ಥಿನಿ ಕಳೆದ ವರ್ಷ ಮಿಸ್ ಅರೌಕೇರಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಗಳಿಸಿದ್ದರು.
ಈ ಮಧ್ಯೆ, ಬ್ರೆಜಿಲಿಯನ್ ರಾಜ್ಯವಾದ ಪರಾನಾದ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯು ಯುವ ವಧುವಿನ ತಾಯಿಯನ್ನು ಮೇಯರ್ ವಿವಾಹದ ಕೇವಲ ಒಂದು ದಿನದ ನಂತರ ಅರೌಕೇರಿಯಾದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಹುದ್ದೆಗೆ ನೇಮಿಸಿರುವುದರ ಬಗ್ಗೆ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಮದುವೆ ಆಗಿಲ್ಲ ಏಕೆ ಎಂದವರಿಗೆ, ಇಂಥಹಾ ಹುಡುಗನ ಹುಡುಕಿಕೊಡಿ ಎಂದ ರಮ್ಯಾ
ಬ್ರೆಜಿಲಿಯನ್ ಕಾನೂನಿನ ಪ್ರಕಾರ, 16 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ತಮ್ಮ ಪೋಷಕರ ಒಪ್ಪಿಗೆಯೊಂದಿಗೆ ಕಾನೂನುಬದ್ಧವಾಗಿ ಮದುವೆಯಾಗಬಹುದು. ಆದ್ದರಿಂದ ಯುವ ವಧುವಿನ ತಾಯಿಯನ್ನು ಪುರಸಭೆಯ ಆಡಳಿತದಲ್ಲಿ ಉತ್ತಮ ಸಂಬಳದ ಸ್ಥಾನಕ್ಕೆ ನೇಮಕ ಮಾಡುವುದು ಒಂದು ರೀತಿಯ ಲಂಚಕೋರತನ ಎಂದು ಪರಿಗಣಿಸಲಾಗಿದೆ. ಅವರ ಅತ್ತೆ, ಮರ್ಲಿನ್ ನಗರದ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಆದರೆ ಕಡಿಮೆ ಸಂಬಳ ಮತ್ತು ಕಡಿಮೆ ಪ್ರಭಾವವನ್ನು ಹೊಂದಿದ್ದರು. ಆದರೆ ಈಗ ವಿವಾದಾತ್ಮಕ ವಿವಾಹದ ಮರುದಿನ ಅತ್ತೆಯ ನೇಮಕಾತಿ ಸುದ್ದಿ ಅರೌಕೇರಿಯಾದಲ್ಲಿ ಭಾರಿ ಹಗರಣವನ್ನು ಹುಟ್ಟುಹಾಕಿದೆ.
ಇನ್ನು, ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮೇಯರ್ ಕಚೇರಿಯು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ನೇಮಕಾತಿಯು ಮೇಯರ್ ವಿವೇಚನೆಯ ಅನುಸಾರವೇ ಕಾರ್ಯಗತವಾಗಿದೆ. ಮೆಯರ್ ಅವರ ಅತ್ತೆಯು ಪುರಸಭೆಯ ಆಡಳಿತದಲ್ಲಿ ನೇಮಕಕ್ಕೆ ಅಗತ್ಯವಿರುವ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಪ್ರತಿಪಾದಿಸಿದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Mon, 8 May 23