ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?

Blooper : ಈಕೆಯ ಭಾವಾಭಿವ್ಯಕ್ತಿಗೆ ಹಾರುವ ಹುಳವೊಂದು ಮರುಳಾಗಿಬಿಟ್ಟಿದೆ. ಆಗ ಈಕೆ ಅಭಿನಯದಲ್ಲಿಯೇ ಅದನ್ನು ನಿಭಾಯಿಸಿದ ರೀತಿ ಎಷ್ಟೊಂದು ಆಕರ್ಷಕವಾಗಿದೆ ನೋಡಿ. ಖಂಡಿತ ನೀವು ಪ್ರಾಂಜಲಿಯನ್ನು ಫಾಲೋ ಮಾಡುತ್ತೀರಿ!

ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?
ನೃತ್ಯಕಲಾವಿದೆ ಪ್ರಾಂಜಲಿ ಶರ್ಮಾ ರೀಲ್ಸ್ ಮಾಡುತ್ತಿದ್ದ ವೇಳೆ ಹುಳವೊಂದು ಹಾರಿಬಂದಾಗ...
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 08, 2023 | 1:47 PM

Viral Video : ಈಕೆ ಪ್ರಾಂಜಲಿ ಶರ್ಮಾ. ನೃತ್ಯಗಾತಿ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್​. Let’s slay together ಎನ್ನುತ್ತ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ಗಳನ್ನು ಅಪ್​ಲೋಡ್​ ಮಾಡುತ್ತಿರುತ್ತಾರೆ. ಸುಮಾರು 1,40,000 ಫಾಲೋವರ್ಸ್​ ಹೊಂದಿದ್ದಾರೆ. ಈಕೆ ಹಿಂದೀ ಚಿತ್ರಗೀತೆಗಳಿಗೆ ನೃತ್ಯ ಮತ್ತು ಭಾವಾಭಿನಯ ಮಾಡುವುದನ್ನು ನೋಡುತ್ತಿದ್ದರೆ ಜಗತ್ತೆಲ್ಲ ಮರೆತೇ ಹೋಗುತ್ತದೆ. ಈ ಮೋಹಕ ಬೆಡಗಿ ಹೀಗೆ ಒಮ್ಮೆ ರೀಲ್​ ಮಾಡುತ್ತಿದ್ದಾಗ ಹಾರುವ ಹುಳವೊಂದು ಮರುಳಾಗಿ ಹೀಗೆ ಅಲೆದಾಡಿದೆ. ಪ್ರಾಂಜಲಿ ಇದನ್ನು ನಿಭಾಯಿಸಿದ ರೀತಿ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Pranjali Sharma (@groovewith_pranjali)

ಅವಕಾಶ ಸಿಕ್ಕರೆ ಬಾಲಿವುಡ್​ಗೆ ನೇರ ಪ್ರವೇಶಿಸುವಂಥ ಪ್ರತಿಭೆ, ವರ್ಚಸ್ಸು ಈಕೆಯಲ್ಲಿದೆ. ಸದ್ಯ ತನ್ನಪಾಡಿಗೆ ತಾನು ರೀಲ್ಸ್​ ಅಪ್​ಲೋಡ್ ಮಾಡುತ್ತ ಆಗಾಗ ಇನ್​ಸ್ಟಾಗ್ರಾಮಿಗರನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತಿರುತ್ತಾರೆ. ಈಕೆಯಿನ್ನೂ ಕಾಲೇಜು ವಿದ್ಯಾರ್ಥಿನಿ. ನೋಡಿ ಮತ್ತೊಂದು ರೀಲಿನಲ್ಲಿ ಇವರ ಭಾವಾಭಿನಯವನ್ನು.

ನಿಮ್ಮ ಭಾವಾಭಿವ್ಯಕ್ತಿಯನ್ನು ನೋಡಿ ನಾನಂತೂ ನಿಮ್ಮ ಶಾಶ್ವತ ಅಭಿಮಾನಿಯೇ ಆಗಿದ್ದೇನೆ. ಆದಷ್ಟು ಬೇಗ ನೀವು ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂದು ಅನೇಕ ನೆಟ್ಟಿಗರು ಹೇಳುತ್ತಿರುತ್ತಾರೆ. ಯಾವಾಗ ನಾನು ನಿಮ್ಮನ್ನು ನೇರವಾಗಿ ನೋಡುತ್ತೇನೆಯೋ ಎಂದು ಹೇಳುವವರಿಗೇನು ಕಡಿಮೆ ಇಲ್ಲ. ​ಈಕೆ ಭರವಸೆಯ ನಟಿಯೂ ಆಗಬಲ್ಲಳು ಎನ್ನುವುದಕ್ಕೆ ಈ ಕೆಳಗಿನ ವಿಡಿಯೋ ನೋಡಿ.

ಅಭಿರುಚಿ, ಪರಿಶ್ರಮ ಇದ್ದರೆ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಬಲ್ಲವು ಎಂಬುದಕ್ಕೆ ಪ್ರಾಂಜಲಿ ಶರ್ಮಾ ಅಂಥವರೇ ಸಾಕ್ಷಿ. ದಿಲ್​ ತೋ ಬಚ್ಚಾ ಹೈ ಹಾಡಿಗೆ ಈಕೆ ಅಭಿನಯಿಸಿದ್ದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ. ಮತ್ತೆ ಮತ್ತೆ ನೋಡಬೇಕೆನ್ನುವ ಸೆಳೆತ ಈಕೆಯ ಅಭಿನಯಕ್ಕಿದೆ.

ಯಾವ ಹಾಡಿಗೆ, ಡೈಲಾಗ್​ ಗೆ ರೀಲ್​ ಮಾಡಲಿ, ದಯವಿಟ್ಟು ತಿಳಿಸಿ ಎಂದು ಜನಾಭಿಪ್ರಾಯ ಕೇಳುತ್ತಾಳೆ. ಈ ಮೂಲಕ ಅನೇಕರ ಖ್ವಾಯಿಷ್​ಗಳನ್ನು ಈಕೆ ಪೂರೈಸಿದ್ದಾಳೆ. ಕಣ್ಣಿನಲ್ಲೇ ಕೊಲ್ಲುತ್ತೀರಲ್ಲ, ನಿಮ್ಮಲ್ಲಡಗಿರುವ ಅದ್ಭುತ ಪ್ರತಿಭೆಗೆ ಸಲಾಂ ಎನ್ನುತ್ತಾರೆ ಅನೇಕರು. ಜನ್ಮ ಸಾರ್ಥಕವಾಯಿತು, ಅಚಾನಕ್ ಆಗಿ ನಿಮ್ಮ ರೀಲ್ ನೋಡಿದೆ ಎಂದೂ ಹೇಳುತ್ತಾರೆ. ‘ಫ್ಲರ್ಟ್​ ಮಾಡುವ ಅನಿವಾರ್ಯತೆ ಇದೆಯೇ?’ ಎಂದು ಶುರುವಾಗುವ ಈ ಡೈಲಾಗಿಗೆ ತುಂಟಗಣ್ಣಿನಿಂದ ಈಕೆ ಒಳಗೊಳ್ಳುವ ರೀತಿ ಇದೆಯಲ್ಲ… ಅದನ್ನು ಅನುಭವಿಸಬೇಕೆಂದರೆ ಈ ಕೆಳಗಿನ ರೀಲ್​ ನೋಡಲೇಬೇಕು.

ನೃತ್ಯದ ಯಾವ ಅಭಿವ್ಯಕ್ತಿಗೂ ಸೈ ಎನ್ನಿಸುವಂಥ ಮತ್ತು ಚುರುಕಾಗಿ ಅದನ್ನು ತನ್ನದಾಗಿಸಿಕೊಳ್ಳುವ ಚಾಕಚಕ್ಯತೆ ಈಕೆಯಲ್ಲಿದೆ. ಇದೆಲ್ಲವೂ ಅಪಾರ ಶ್ರಮದಿಂದ ಒಡಗೂಡುವಂಥದ್ದು. ಅಬ್ಬಾ ಈಕೆಯಂತೂ ಅಮೃತಶಿಲೆಯ ಪ್ರತಿಮೆಯಂತೆ ಇದ್ದಾಳೆ! ಎಂದು ಅನೇಕರು ಆಗಾಗ ಹೇಳುತ್ತಿರುತ್ತಾರೆ. ವಿಶೇಷ ಸಮಯವನ್ನು ಕೊಟ್ಟು ಆ ದೇವರು ನಿಮ್ಮನ್ನು ರೂಪಿಸಿದ್ದಾನೆ, ನಿಮ್ಮ ಅಪ್ಪ ಅಮ್ಮ ಧನ್ಯ ಎಂದೂ ಕೆಲವರು ಪ್ರತಿಕ್ರಿಯಿಸುತ್ತಿರುತ್ತಾರೆ.

ಆದಷ್ಟು ಬೇಗ ಈಕೆಯನ್ನು ಬೆಳ್ಳಿತೆರೆಯ ಮೇಲೆ ಕಾಣಲು ಕಾತರಿಸುತ್ತಿರುವ ಲಕ್ಷಾಂತರ ಅಭಿಮಾನಿಗಳ ದಂಡೇ ಇದೆ. ನೋಡೋಣ ಸಿನೆಮಾ ಕ್ಷೇತ್ರ ಈಕೆಯನ್ನು ಯಾವ ರೀತಿ ಬರಮಾಡಿಕೊಳ್ಳುತ್ತದೆಯೋ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:30 pm, Mon, 8 May 23

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್