Viral Video : ಈ ಪುಟ್ಟಿ ಅಪ್ಪನೆದುರು ಶಾಂತಮಯೀ, ಅಮ್ಮನೆದುರು ರುದ್ರಭಯಂಕರೀ

Father and Daughter : ಪುಟ್ಟ ಮಕ್ಕಳು ಯಾಕೆ ಹೀಗೆ? ಅಪ್ಪನೆದುರು ಒಂದು ಥರ, ಅಮ್ಮನೆದುರು ಒಂದು ಥರ. ಎಂಥಾ ಪೊಲಿಟಿಕ್ಸ್​ ಮಾಡುತ್ತವೆ ಈ ವಯಸ್ಸಿನಲ್ಲೇ! ವಿಡಿಯೋ ನೋಡಿದರೆ ಹೌದಲ್ಲ ಎನ್ನಿಸದೇ ಇರದು.

Viral Video : ಈ ಪುಟ್ಟಿ ಅಪ್ಪನೆದುರು ಶಾಂತಮಯೀ, ಅಮ್ಮನೆದುರು ರುದ್ರಭಯಂಕರೀ
ಅಪ್ಪನೆದುರು ಮಳ್ಳಿಮಳ್ಳಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 27, 2022 | 5:04 PM

Viral Video : ಈ ಪುಟ್ಟಮಕ್ಕಳ ನೌಟಂಕಿ ಹೇಳಹೊರಟೆ ಒಂದೆರಡಲ್ಲ. ಅಪ್ಪನ ಬಳಿ ಒಂದು ರೀತಿ, ಅಮ್ಮನ ಬಳಿ ಒಂದು ರೀತಿ ವರ್ತಿಸಿ ಇಬ್ಬರ ನಡುವೆಯೂ ಜಗಳ ತಂದಿಡುವ ಮಹಾನ್​ ತರಲೆಗಳು. ಅಷ್ಟೇ ಯಾಕೆ ಹೊರಗಿನವರೊಂದಿಗೆ ಇರುವ ರೀತಿಯಂತೂ ಹೇಳುವುದೇ ಬೇಡ. ಈ ಮಕ್ಕಳಷ್ಟೂ ನಯ ನಾಜೂಕಿನವರು ಈ  ಜಗತ್ತಿನಲ್ಲಿಯೇ ಇಲ್ಲವೇನೋ ಎಂಬಂತೆ ವರ್ತಿಸಿಬಿಡುತ್ತವೆ. ಈ ಪುಟ್ಟಿಯ ವಿಡಿಯೋ ನೋಡಿ. ಇದೀಗ ಇದು ವೈರಲ್ ಆಗಿದೆ. ಅಮ್ಮ ಎದುರಿಗಿದ್ದಾಗ ಚಂಡಿ ಹಿಡಿಯುತ್ತಾಳೆ. ಅಪ್ಪ ಎದುರಿದ್ದರೆ ಮೆತ್ತನ್ನ ಮಳ್ಳಿಯಾಗುತ್ತಾಳೆ. 8 ಲಕ್ಷಕ್ಕಿಂತಲೂ ಹೆಚ್ಚಿನ ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆಂದರೆ ಅಂಥದ್ದೇನಿದೆ ಮಜಾ ಇದರಲ್ಲಿ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರು ಈ ವಿಡಿಯೋ ನೋಡಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನಂತೂ ಏಳುಬಾರಿ ಈ ವಿಡಿಯೋ ನೋಡಿದೆ ಎಂದಿದ್ದಾರೆ ಒಬ್ಬರು. ನನ್ನ ಮಗಳೂ ಹೀಗೇ! ಅಪ್ಪನೆದುರು ಹೀಗೇ ಇರುತ್ತಾಳೆ, ನನ್ನೆದುರು ಮಾತ್ರ ಹೀಗೆಯೇ ಆಡುತ್ತಾಳೆ ಎಂದಿದ್ದಾರೆ ಮತ್ತೊಬ್ಬರು. ಅಪ್ಪನನ್ನು ಮಾತ್ರ ಬಹಳ ಸರಿಯಾಗಿ ಟ್ರೀಟ್ ಮಾಡುತ್ತಾರೆ ಈ ಮಕ್ಕಳು ಎಂದಿದ್ಧಾರೆ ಮಗದೊಬ್ಬರು.

ಎಂಥ ಮುದ್ದು ವಿಡಿಯೋ ಅಲ್ವಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:58 pm, Tue, 27 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ