AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!

Meesho : ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋ ಆಫರ್​ ಕೇವಲ ರೂ. 10,212. ಮುಂದೇನಾಯಿತು? ವಿಡಿಯೋ ನೋಡಿ.

Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!
ಪಾರ್ಸೆಲ್​ನಲ್ಲಿ ಆಲೂಗಡ್ಡೆ!
TV9 Web
| Edited By: |

Updated on:Sep 27, 2022 | 4:24 PM

Share

Viral Video : ಹಬ್ಬದ ಸೀಸನ್​ ಬರುತ್ತಿದ್ದಂತೆ ಆನ್​ಲೈನ್​ ಶಾಪಿಂಗ್ ವೆಬ್​,​ ಆ್ಯಪ್​ಗಳು ಪೈಪೋಟಿಯ ಮೇಲೆ ರಿಯಾಯ್ತಿ, ಕೊಡುಗೆಗಳನ್ನು ಕೊಡಲು ಮುಗಿಬೀಳುತ್ತವೆ. ಆರ್ಡರ್ ಮಾಡಿದ ಸಾಮಾನುಗಳಿಗಾಗಿ ಕುತೂಹಲದಿಂದ ಕಾಯುತ್ತ ಕುಳಿತುಕೊಳ್ಳುವ ಈ ಆ್ಯಪ್​ಗಳು ಕೆಲವೊಮ್ಮೆ ಅರಗಿಸಿಕೊಳ್ಳಲಾರದಂಥ ಸರ್ಪ್ರೈಝ್ ನೀಡಿಬಿಡುತ್ತವೆ. ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನುಗಳನ್ನು ಪಡೆದದ್ದನ್ನು ಓದಿದ್ದೀರಿ. ಅಂಥದೇ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಮೀಶೋ ಅಪ್ಲಿಕೇಶನ್ ಮೂಲಕ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದ ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನ್​ಕುಮಾರ್, ಕ್ಯಾಮೆರಾ​ ಬದಲಾಗಿ ಒಂದು ಕೇಜಿ ಆಲೂಗಡ್ಡೆಯನ್ನು ಪಡೆದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಗ್ರಾಹಕರು ಪಾರ್ಸೆಲ್​ ತೆರೆಯಲು ಮಿಶೋ ಡೆಲಿವರಿ ಏಜೆಂಟ್​ಗೆ ಹೇಳುತ್ತಾರೆ. ಡೆಲಿವರಿ ಏಜೆಂಟ್​ ತೆರೆದು ನೋಡಿದಾಗ ಆದಲ್ಲಿ ಡ್ರೋನ್​ ಕ್ಯಾಮೆರಾ ಬದಲಾಗಿ ಒಂದು ಕೇಜಿ ತೂಗುವ 10 ಆಲೂಗಡ್ಡೆಗಳು ಕಾಣಿಸುತ್ತವೆ. ಈ ವಿಷಯವಾಗಿ ನನಗೇನು ಗೊತ್ತಿಲ್ಲ ಎಂದು ಡೆಲಿವರಿ ಏಜೆಂಟ್​ ಹೇಳುತ್ತಾನೆ.

ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋನಲ್ಲಿ ಕೇವಲ ರೂ. 10,212. ಆಗ ಅನುಮಾನಗೊಂಡ ಚೇತನ್​ಕುಮಾರ್ ಆರ್ಡರ್ ಮಾಡುವ ಮೊದಲು ಕಂಪೆನಿಯವನ್ನು ಸಂಪರ್ಕಿಸಿ ರಿಯಾಯ್ತಿ ದರವನ್ನು ಖಚಿತಪಡಿಸಿಕೊಂಡಿದ್ದಾರೆ. ಹೌದು ಇದು ಆಫರ್ ಎಂದು ಮೀಶೋ ತಿಳಿಸಿದೆ. ಆನಂತರವೇ ಆನ್​ಲೈನ್​ಮೂಲಕ ಪೂರ್ತಿ ಹಣಪಾವತಿ ಮಾಡಿದ್ಧಾರೆ. ಆದರೆ ನಂತರ ಈ ಫಜೀತಿ!

ಹುಷಾರು ಈ ಆಫರ್​ಗಳಿಗೆ ಮೊರೆ ಹೋಗಿ ಹಣ ಕಳೆದುಕೊಂಡೀರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Tue, 27 September 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ