ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?

Cat : ಈ ಬೆಕ್ಕಣ್ಣ ಮಾಲ್​ನಲ್ಲಿ ಏನು ಶಾಪಿಂಗ್ ಮಾಡಲು ಹೋಗಿತ್ತೋ ಏನೋ. ಪಾಪ ಎಸ್ಕಲೇಟರ್​ ಏರಿ ಮೇಲಿನ ಮಹಡಿ ತಲುಪಲು ಪರದಾಡಿಬಿಟ್ಟಿದೆ. ಮುಂದೇನಾಗುತ್ತದೆ? ಈ ವಿಡಿಯೋ ನೋಡಿ..

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?
ಎಸ್ಕಲೇಟರ್ ಏರುತ್ತಿರುವ ಬೆಕ್ಕಣ್ಣ.
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Sep 28, 2022 | 10:26 AM

Viral Video : ಅಪಾರ್ಟ್​ಮೆಂಟ್​, ಹೋಟೆಲ್​ನ ಲಿಫ್ಟ್​ಗಳಲ್ಲಿ ಓಡಾಡುವ ಬೆಕ್ಕುಗಳಿಗೆ ಒಮ್ಮೆ ಮೆಟ್ಟಿಲು ಹತ್ತಲು ಹೇಳಿ ನೋಡೋಣ. ಬಹಳ ಒತ್ತಾಯಿಸಿದರೆ, ನಿಮ್ಮೆದುರು ನಾಲ್ಕು ಮೆಟ್ಟಿಲು ಏರಿದ ಹಾಗೆ ಮಾಡಬಹುದು ತಕ್ಷಣವೇ ಮತ್ತೆ ಲಿಫ್ಟ್​ ಬಾಗಿಲಿನ ಮುಂದೆ ಕುಳಿತುಬಿಡುತ್ತವೆ. ಬೆಕ್ಕೆಂದರೆ ಹಾಗೇ! ಈಗಿಲ್ಲಿ ಬೆಕ್ಕಣ್ಣನೊಬ್ಬ ಮಾಲ್​ಗೆ ಬಂದಿದಾನೆ. ಏನು ಶಾಪಿಂಗ್ ಮಾಡುವುದಿದೆಯೋ ಗೊತ್ತಿಲ್ಲ. ಎಸ್ಕಲೇಟರ್​ ಏರಿ ಮೇಲಿನ ಮಹಡಿಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೀಗೆ ಒಂದಿಷ್ಟು ಬಾರಿ ಪುನರಾವರ್ತನೆಯಗುತ್ತದೆ. ನಂತರ? ಈ ವಿಡಿಯೋ ನೋಡಿ.

Good thing someone helped him out..🐈🐾💪🙏 pic.twitter.com/cnC82GVGY1

ಪಾಪ ಎಷ್ಟೊಂದು ಆತ್ಮವಿಶ್ವಾಸದಿಂದ ಎಸ್ಕಲೇಟರ್ ಏರಿದರೂ ಬೆಕ್ಕಣ್ಣನಿಗೆ ಮೇಲಿನ ಮಹಡಿ ತಲುಪಲಾಗುವುದೇ ಇಲ್ಲ. ಹೇಗೆ ಸಾಧ್ಯವಾದೀತು, ಇಳಿಯುತ್ತಿರುವ ಎಸ್ಕಲೇಟರ್​ ಮೇಲೆ ಏರಿದರೆ? ನೋಡಲೇನೋ ಈ ವಿಡಿಯೋ ಮೋಜಿನಿಂದ ಮುದ್ದಿನಿಂದ ಕೂಡಿದೆ. ಪಾಪ ಬೆಕ್ಕಣ್ಣನ ಮನಸ್ಸಿನೊಳಗೆ… ಕೊನೆಗೆ ಇದರ ಪರದಾಟ ನೋಡದ ಯಾರೋ ಕರುಣಾಮಯಿಯೊಬ್ಬರು, ಮೇಲೇ ಹೋಗುತ್ತಿರುವ ಎಸ್ಕಲೇಟರ್​ ಅನ್ನು ಹತ್ತಿಸುತ್ತಾರೆ.

Yoda4ever ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada