ಪಿಂಕ್ ಡ್ರ್ಯಾಗನ್ ಫ್ರೂಟ್​ ಚಹಾ ಬೇಕೆ? ಹಾಗಿದ್ದರೆ ಬಾಂಗ್ಲಾದೇಶಕ್ಕೆ ಹೋಗೋಣ ನಡೆಯಿರಿ

Dragon Fruit Chaay : ಈ ಹುಡುಗ ಡ್ರ್ಯಾಗನ್ ಹಣ್ಣಿನ ತಿರುಳನ್ನು ಚಹಾಕ್ಕೆ ಸೇರಿಸಿ ಕಲಕುತ್ತಾನೆ. ನಂತರ ಮಿಲ್ಕ್​ ಮೇಡ್​ ಸೇರಿಸಿ ಮತ್ತೆ ಕಲಕುತ್ತಾನೆ. ಅಲ್ಲಿಗದು ಇತ್ತ ಸಿಹಿಪೇಯವೂ ಅಲ್ಲ, ಪಾಯಸವೂ ಅಲ್ಲ, ಚಹಾನೂ ಅಲ್ಲ! ಕುಡಿದವರ ಗತಿ?

ಪಿಂಕ್ ಡ್ರ್ಯಾಗನ್ ಫ್ರೂಟ್​ ಚಹಾ ಬೇಕೆ? ಹಾಗಿದ್ದರೆ ಬಾಂಗ್ಲಾದೇಶಕ್ಕೆ ಹೋಗೋಣ ನಡೆಯಿರಿ
ಪಿಂಕ್ ಡ್ರ್ಯಾಗನ್​ ಫ್ರೂಟ್ ಚಹಾ
ಶ್ರೀದೇವಿ ಕಳಸದ | Shridevi Kalasad

|

Sep 28, 2022 | 12:09 PM

Pink Dragon Fruitwaali chai : ಲೆಮನ್ ಟೀ, ಲೆಮನ್​ ಗ್ರಾಸ್​ ಟೀ, ಹರ್ಬಲ್ ಟೀ, ತುಲಸೀ ಟೀ, ಶುಂಠಿ ಟೀ, ಏಲಕ್ಕಿ ಟೀ, ಧನಿಯಾ ಟೀ, ಜೀರಾ ಟೀ, ಪೆಪ್ಪರ್ ಟೀ, ಮಿಂಟ್​ ಟೀ ಹೀಗೆ ಥರಥರದ ಚಹಾಗಳು ಲಭ್ಯವಿವೆ. ಆದರೆ ಡ್ರ್ಯಾಗನ್​ ಫ್ರೂಟ್​ ಚಹಾ ನಿಮಗೆ ಗೊತ್ತಿತ್ತೇ? ಈಗ ಇದೂ ಕೂಡ ಆವಿಷ್ಕಾರವಾಗಿದೆ! ಬಾಂಗ್ಲಾದೇಶದ ರಸ್ತೆಬದಿ ಅಂಗಡಿಯೊಂದರಲ್ಲಿ ಡ್ರ್ಯಾಗನ್​ ಫ್ರೂಟ್ ಚಹಾ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಫುಡ್​ ಬ್ಲಾಗರ್​ ಒಬ್ಬರು, ದಿ ಗ್ರೇಟ್ ಇಂಡಿಯನ್​ ಫುಡಿ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಹೀಗೆ ರಸ್ತೆಬದಿ ಅಂಗಡಿಯಲ್ಲಿ ಈ ಹುಡುಗ ಡ್ರ್ಯಾಗನ್​ ಫ್ರೂಟ್ ಚಹಾ​ ತಯಾರಿಸುತ್ತಿರುವ ವಿಡಿಯೋ ಅನ್ನು  ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಈ ಹಣ್ಣಿನ ತಿರುಳನ್ನು ಚಹಾಕ್ಕೆ ಸೇರಿಸಿ ಕಲಕುತ್ತಾನೆ. ನಂತರ ಮಿಲ್ಕ್​ ಮೇಡ್​ ಸೇರಿಸಿ ಮತ್ತೆ ಕಲಕುತ್ತಾನೆ. ಅಲ್ಲಿಗದು ಇತ್ತ ಸಿಹಿಪೇಯವೂ ಅಲ್ಲ, ಪಾಯಸವೂ ಅಲ್ಲ, ಚಹಾನೂ ಅಲ್ಲ! ಯಾರಿಗೆ ಗೊತ್ತು, ಕುಡಿದು ನೋಡಿದವರೇ ಹೇಳಬೇಕು! ಹಾಗಾಗಿಯೇ ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘ಪಿಂಕ್ ಡ್ರ್ಯಾಗನ್ ಫ್ರೂಟ್​ವಾಲಿ ಚಾಯ್!’ ಆಸಕ್ತಿಕರವಾದ ಈ ರೀಲ್​ ನಿಮಗಾಗಿ ಬಾಂಗ್ಲಾದೇಶದಿಂದ ಎಂಬ ಶೀರ್ಷಿಕೆಯನ್ನು ಈ ವಿಡಿಯೋ ಹೊಂದಿದೆ. ಕೆಲವರು ಅದ್ಭುತ ಎಂದಿದ್ದಾರೆ. ಇನ್ನೂ ಕೆಲವರು ಅಸಹ್ಯ ಎಂದಿದ್ದಾರೆ.

ಇದನ್ನು ನೋಡಿದ ನಿಮಗೆ ಏನೆನ್ನಿಸುತ್ತಿದೆ?

ಇದನ್ನೂ ಓದಿ

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada