AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri : ರೈಲುಪ್ರಯಾಣಿಕರಿಗೆ ಶುಭಸುದ್ದಿ, ನವರಾತ್ರಿ ಪ್ರಯುಕ್ತ ವ್ರತ ವಿಶೇಷ ತಿಂಡಿತಿನಿಸುಗಳು ಲಭ್ಯ

IRCTC : ನವರಾತ್ರಿ ಪ್ರಯುಕ್ತ ವ್ರತ ಆಚರಿಸುವ ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯವು ಒಂಬತ್ತು ದಿನಗಳ ಕಾಲ ವಿಶೇಷ ತಿಂಡಿತಿನಿಸುಗಳನ್ನು ಪೂರೈಸಲು ಆರಂಭಿಸಿದೆ. ನೆಟ್ಟಿಗರು ಈ ಸೌಲಭ್ಯದಿಂದ ಪ್ರಸನ್ನರಾಗಿದ್ದಾರೆ.

Navaratri : ರೈಲುಪ್ರಯಾಣಿಕರಿಗೆ ಶುಭಸುದ್ದಿ, ನವರಾತ್ರಿ ಪ್ರಯುಕ್ತ ವ್ರತ ವಿಶೇಷ ತಿಂಡಿತಿನಿಸುಗಳು ಲಭ್ಯ
ನವರಾತ್ರಿ ಪ್ರಯುಕ್ತ ರೈಲ್ವೆ ಇಲಾಖೆಯ ವಿಶೇಷ ವ್ರತ ತಿನಿಸು
TV9 Web
| Edited By: ಶ್ರೀದೇವಿ ಕಳಸದ|

Updated on:Sep 28, 2022 | 2:56 PM

Share

Navaratri : ನವರಾತ್ರಿ ಈಗಾಗಲೇ ಆರಂಭವಾಗಿದೆ. ಎಲ್ಲೆಡೆ ದೇವಿಯ ಆರಾಧನೆ ವಿಜೃಂಭಣೆಯಿಂದ ನಡೆಯುತ್ತಿದೆ. ಅನೇಕರು ವ್ರತ-ಉಪವಾಸಗಳನ್ನು ಆಚರಿಸುತ್ತ ನಿತ್ಯಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಕಷ್ಟು ಜನ ಈ ಒಂಬತ್ತು ದಿನಗಳ ಆರಾಧನೆಗಾಗಿ ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡ ರೈಲ್ವೆ ಇಲಾಖೆಯು ವ್ರತಕ್ಕೆ ಸಂಬಂಧಿಸಿದ ವಿಶೇಷ ತಿಂಡಿತಿನಿಸುಗಳನ್ನು ತನ್ನ ಪ್ರಯಾಣಿಕರಿಗೆ ಪೂರೈಸಲು ಪ್ರಾರಂಭಿಸಿದೆ. ಈ ವಿಷಯವನ್ನು ಟ್ವಿಟರ್​ನಲ್ಲಿ ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿದೆ.

‘ದಿ ಇಂಡಿಯನ್ ರೈಲ್ವೇಸ್ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಈ ಹಬ್ಬದ ಸಮಯದಲ್ಲಿ ವ್ರತದ ಪ್ರಯುಕ್ತ ವಿಶೇಷ ತಿಂಡಿತಿನಿಸುಗಳ ಪಟ್ಟಿಯನ್ನೇ ಹೊಂದಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ಪ್ರಯಾಣಿಕರಿಗೆ ಪೂರೈಸಲಾಗುತ್ತದೆ’ ಎಂಬ ಪೋಸ್ಟ್​ನೊಂದಿಗೆ ತಿನಿಸಿನ ಫೋಟೋ ಹಂಚಿಕೊಂಡಿದೆ ರೈಲ್ವೆ ಸಚಿವಾಲಯ. ಈ ಪೋಸ್ಟ್​ ಅನ್ನು 3,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ವಿವಿಧ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ವ್ರತ ಆರಾಧಕರಿಗೆ ಅನುಕೂಲವಾಗಿರುವಂಥ ಈ ನಿರ್ಧಾರವನ್ನು ಅನೇಕರು ಶ್ಲಾಘಿಸಿದ್ದಾರೆ.

ತಿಂಡಿಯ ಫೋಟೋ ನೋಡುತ್ತಿದ್ದಂತೆ ರೈಲು ಏರಬೇಕು ಅನ್ನಿಸುತ್ತಿರಬೇಕಲ್ಲ? ಶುಭದಸರಾ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:55 pm, Wed, 28 September 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್