AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮುಂಬೈ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಹಠ ಮಾಡುತ್ತಾ ಪ್ಲಾಟ್‌ಫಾರ್ಮ್ ಮೇಲೆ ಮಲಗಿದ ಯುವಕ

ಮುಂಬೈನ ಬೊರಿವಾಲಿ ರೈಲ್ವೆ ನಿಲ್ದಾಣದಲ್ಲಿ ಯುವತಿಯ ಕಾಲಿಗೆ ಬಿದ್ದ ಯುವಕನ ವಿಡಿಯೋ ಭಾರಿ ವೈರಲ್ ಆಗಿದೆ. ಇದು ನಿಜವಾದ ಪ್ರೀತಿಯೋ, ಕೇವಲ ನಾಟಕವೋ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ರೈಲ್ವೆ ಪೊಲೀಸರ ಮಧ್ಯಪ್ರವೇಶದ ನಂತರ ಪ್ರಕರಣ ತಿಳಿಯಾಯಿತು. ಇಂತಹ ಸಾರ್ವಜನಿಕ ಪ್ರದರ್ಶನಗಳು ಕಾನೂನಿನ ದೃಷ್ಟಿಯಿಂದ ಹೇಗೆ ಪರಿಗಣಿಸಲ್ಪಡುತ್ತವೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಗಾಗಿ ಇಂತಹ ನಾಟಕಗಳು ಸೃಷ್ಟಿಯಾಗುತ್ತವೆಯೇ ಎಂಬ ಪ್ರಶ್ನೆಗಳನ್ನೂ ಇದು ಹುಟ್ಟುಹಾಕಿದೆ.

Video: ಮುಂಬೈ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಹಠ ಮಾಡುತ್ತಾ ಪ್ಲಾಟ್‌ಫಾರ್ಮ್ ಮೇಲೆ ಮಲಗಿದ ಯುವಕ
ಯುವತಿ ಕಾಲಿಗೆ ಬಿದ್ದ ವ್ಯಕ್ತಿ
ನಯನಾ ರಾಜೀವ್
|

Updated on: Jul 13, 2026 | 8:09 AM

Share

ಮುಂಬೈ, ಜುಲೈ 13: ಅದು ಸದಾ ಜನರಿಂದ ಗಿಜಿಗುಡುತ್ತಿರುವ ಮುಂಬೈನ ಬೊರಿವಾಲಿ ರೈಲು ನಿಲ್ದಾಣ(Railway Station). ಅಲ್ಲಿಗೆ ಬಂದ ಪ್ರಯಾಣಿಕರೆಲ್ಲಾ ಒಂದು ಕ್ಷಣ ತಮ್ಮ ರೈಲು ಹತ್ತುವುದನ್ನು ಮರೆತು, ಪ್ಲಾಟ್‌ಫಾರ್ಮ್ ಮೇಲೆಯೇ ನಡೆಯುತ್ತಿದ್ದ ಹೈಡ್ರಾಮಾವನ್ನು ಕಣ್ಣು ಅರಳಿಸಿ ನೋಡುತ್ತಿದ್ದರು. ಕಾರಣ, ಅಲ್ಲಿ ಯುವಕನೊಬ್ಬ ಯುವತಿಯ ಕಾಲು ಹಿಡಿದು ಪ್ಲಾಟ್​ಫಾರ್ಮ್​ ಮೇಲೆ ಮಲಗಿದ್ದಾನೆ. ಸದ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ಬರೋಬ್ಬರಿ 6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಪ್ಲಾಟ್‌ಫಾರ್ಮ್ ಮೇಲೆಯೇ ಕಾಲು ಹಿಡಿದು ಹಠ

ವೈರಲ್ ಆಗಿರುವ ವಿಡಿಯೋದಲ್ಲಿ, ತಿಳಿ ನೀಲಿ ಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್‌ನ ನೆಲದ ಮೇಲೆಯೇ ಮಲಗಿಕೊಂಡಿದ್ದಾನೆ. ಅಲ್ಲಿ ನಿಂತಿರುವ ಮುಖ ಮುಚ್ಚಿಕೊಂಡಿರುವ ಯುವತಿಯ ಕಾಲನ್ನು ಆತ ಬಿಗಿಯಾಗಿ ಹಿಡಿದುಕೊಂಡಿದ್ದಾನೆ.

ಬೆನ್ನಿಗೆ ಬ್ಯಾಗ್ ಧರಿಸಿರುವ ಆ ಯುವತಿ, ಆತನ ಹಿಡಿತದಿಂದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಪದೇ ಪದೇ ಒದ್ದಾಡುತ್ತಿದ್ದರೂ, ಆ ಯುವಕ ಮಾತ್ರ ಆಕೆಯನ್ನು ಹೋಗಲು ಬಿಡದೆ ಹಠ ಹಿಡಿದು ಕಾಲನ್ನೇ ಹಿಡಿದು ಮಲಗಿದ್ದ.

ಮಧ್ಯಪ್ರವೇಶಿಸಿದ ಮುಂಬೈ ರೈಲ್ವೆ ಪೊಲೀಸ್

ನಿಲ್ದಾಣದಲ್ಲಿ ಜನಸಮೂಹ ಹೆಚ್ಚಾಗುತ್ತಿದ್ದಂತೆ ಮತ್ತು ದಂಪತಿಗಳ ನಡುವಿನ ನಾಟಕ ಜೋರಾಗುತ್ತಿದ್ದಂತೆ ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ವಿಡಿಯೋದಲ್ಲಿ ಪೊಲೀಸರು ಆ ಯುವಕನನ್ನು ನೆಲದಿಂದ ಎಬ್ಬಿಸಿ ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಸುತ್ತಲೂ ನೆರೆದು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಕುತೂಹಲಕಾರಿ ಜನಸಮೂಹವನ್ನು ಪೊಲೀಸರು ಅಲ್ಲಿಂದ ದೂರ ಸರಿಯುವಂತೆ ಜಾಗ ಖಾಲಿ ಮಾಡಿಸಿದ್ದಾರೆ.

ಮತ್ತಷ್ಟು ಓದಿ: ದಶಕಗಳ ಕನಸು ನನಸು: ಮೆಜೆಸ್ಟಿಕ್‌ TO ಏರ್‌ಪೋರ್ಟ್‌ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್

ಇದು ನಿಜವಾದ ಪ್ರೀತಿಯೋ ಅಥವಾ ನಾಟಕವೋ

ಈ ವಿಡಿಯೋಗೆ ಜಾಲತಾಣಗಳಲ್ಲಿ ‘ಟ್ರೂ ಲವ್’ ಎಂಬ ಶೀರ್ಷಿಕೆ ನೀಡಲಾಗಿದೆಯಾದರೂ, ನೆಟ್ಟಿಗರು ಮಾತ್ರ ಇಬ್ಬಾಗವಾಗಿದ್ದಾರೆ. ಕೆಲವು ಬಳಕೆದಾರರು ಆ ಯುವಕನ ಪರಿಸ್ಥಿತಿ ಕಂಡು ಮರುಗಿದ್ದು, ಇತ್ತೀಚಿನ ದಿನಗಳಲ್ಲಿ ಇಷ್ಟು ಗಾಢವಾಗಿ ಪ್ರೀತಿಸುವವರು ಎಲ್ಲಿ ಸಿಗುತ್ತಾರೆ? ಎಂದು ಕಾಮೆಂಟ್ ಮಾಡಿದ್ದಾರೆ.

ಟೀಕೆ ಮತ್ತು ಅಪಹಾಸ್ಯ: ಇನ್ನು ಹಲವರು ಸಾರ್ವಜನಿಕ ಸ್ಥಳದಲ್ಲಿ ಇಂತಹ ನಾಟಕದ ಅಗತ್ಯವಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರಂತೂ, ಇಷ್ಟೊಂದು ಬಿದ್ದು ಬಿದ್ದು ಬೇಡಿಕೊಳ್ಳುವ ಬದಲು, ಹೆತ್ತ ತಂದೆ-ತಾಯಿಯ ಪಾದ ಮುಟ್ಟಿ ಆಶೀರ್ವಾದ ತಗೋ , ಜೀವನದಲ್ಲಿ ಉದ್ಧಾರ ಆಗ್ತೀಯಾ, ಎಂದು ಉಚಿತ ಸಲಹೆ ನೀಡಿದ್ದಾರೆ.

ವಿಡಿಯೋ

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆಗೆ ಕಾನೂನು ಏನು ಹೇಳುತ್ತದೆ?

ಹಲವರು ಇದನ್ನು ವೈಯಕ್ತಿಕ ವಿಷಯ ಎಂದು ಭಾವಿಸಿದರೂ, ಭಾರತೀಯ ರೈಲ್ವೆ ಕಾಯ್ದೆಯಡಿ ಸಾರ್ವಜನಿಕ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದು ಕಾನೂನುಬಾಹಿರವಾಗಿದೆ.

ಕಾನೂನು ಕ್ರಮ: ರೈಲ್ವೆ ಕಾಯ್ದೆಯ ಸೆಕ್ಷನ್ 145 ರ ಪ್ರಕಾರ, ರೈಲ್ವೆ ಆವರಣದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವುದು, ಅಸಭ್ಯವಾಗಿ ವರ್ತಿಸುವುದು ಅಥವಾ ಜನಸಂಚಾರಕ್ಕೆ ಅಡ್ಡಿಪಡಿಸುವುದು ಅಪರಾಧವಾಗಿದೆ. ಇದಕ್ಕಾಗಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ರೈಲ್ವೆ ಪೊಲೀಸರಿಗೆ ಅಧಿಕಾರವಿದೆ.

ಮುಂಬೈ ಮತ್ತು ದೆಹಲಿಯಂತಹ ಮೆಟ್ರೋ ನಗರಗಳ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ರೀಲ್ಸ್ ಮಾಡಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಇಂತಹ ನಕಲಿ ನಾಟಕಗಳನ್ನು ಸೃಷ್ಟಿಸುವ ಗ್ಯಾಂಗ್‌ಗಳೂ ಸಕ್ರಿಯವಾಗಿವೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರಾಗಲಿ ಅಥವಾ ರೈಲ್ವೆ ಅಧಿಕಾರಿಗಳಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಬೊರಿವಾಲಿ ನಿಲ್ದಾಣದ ಈ ‘ಲವ್ ಡ್ರಾಮಾ’ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗ್ತಾ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ