Viral Video: ಶ್ವಾನ, ಬೆಕ್ಕಿನ ನಡುವೆ ಮಹಾಯುದ್ಧ, ನಾನು ಏನು ಮಾಡುತ್ತಿರುವೇ? ಎಂದು ಗೊಂದಲಗೊಂಡ ನಾಯಿ
ನಾಯಿಯೊಂದು ಬೆಕ್ಕಿನ ಜತೆಗೆ ಗುದ್ದಾಟ ನಡೆಸುವ ವೀಡಿಯೊ ಒಂದು ವೈರಲ್ ಆಗಿದೆ, ಈ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ನೀವೇ ನೋಡಿ ಇಲ್ಲಿದೆ ವೈರಲ್ ವೀಡಿಯೊ
ಈ ನಾಯಿ ಮತ್ತು ಬೆಕ್ಕಿನ ಜಗಳ, ಅವುಗಳ ಪ್ರೀತಿ, ಆಟವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಲ್ಲ ಒಂದು ವೈರಲ್ ಆಗುತ್ತಿರುತ್ತದೆ. ಇದನ್ನೂ ನೋಡುವುದೇ ಒಂದು ಆನಂದ, ಹೀಗೆ ಇಲ್ಲೊಂದು ವೈರಲ್ ಆಗಿರುವ ವೀಡಿಯೊ ಬೆಕ್ಕು – ನಾಯಿಯ ಫೈಟ್ ತುಂಬಾ ತಮಾಷೆಯಾಗಿದೆ. ಇದನ್ನೂ ನೋಡಿ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಇದು ನಮ್ಮ ಮನೆಯಲ್ಲೂ ನಡೆಯುತ್ತದೆ ಎಂದು. ಟ್ವಿಟರ್ನಲ್ಲಿ ಬ್ಯುಟೆಂಗೆಬೀಡೆನ್ (@buitengebieden ) ಎಂಬ ಪೇಜ್ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ತೋರಿಸಿದಂತೆ ಬೆಕ್ಕು ಮತ್ತು ನಾಯಿಯ ನಡುವಿನ ಜಗಳವನ್ನು ನೀವು ನೋಡಬಹುದು. ಒಂದು ಬೆಕ್ಕು ಮತ್ತು ಶ್ವಾನ ಎದುರು ಬದುರಾಗಿ ಬಂತು ನಿಲ್ಲುತ್ತದೆ. ನಂತರ ಇದ್ದಕ್ಕಿದ್ದಂತೆ, ಬೆಕ್ಕು ಶ್ವಾನದ ಮೇಲೆ ದಾಳಿ ಮಾಡಿದೆ. ಅಲ್ಲಿಂದ ಪ್ರಾಣಿಗಳ ನಡುವೆ ಗುದ್ದಾಡಲು ಶುರುವಾಗಿದೆ. ಶ್ವಾನಕ್ಕೆ ಬೆಕ್ಕು ಒಂದು ಪಂಚ್ ನೀಡುತ್ತದೆ.
ತಕ್ಷಣ ಶ್ವಾನ ಬೆಕ್ಕಿನ ಮೇಲೆ ಎಗರುತ್ತದೆ. ಶ್ವಾನ ಸ್ಟಂಟ್ ಮಾಸ್ಟರ್ನಂತೆ ಹಲವು ಬಾರಿ ನೆಲದಲ್ಲೆ ಸುತ್ತಾಡುತ್ತದೆ. ಎರಡು ಪ್ರಾಣಿಗಳು ಗುರಾಯಿಸುತ್ತ, ಏರುಧ್ವನಿಯಲ್ಲಿ ಒಂದಕ್ಕೊಂದು ಬೈಯಲು ಶುರು ಮಾಡುತ್ತದೆ. ಕೊನೆಗೆ ನಾಯಿಗೆ ತಾನು ಏನು ಮಾಡುತ್ತಿದ್ದೇನೆ ಎಂದು ಗೊಂದಲಗೊಂಡು ಅಲ್ಲಿಯೇ ನಿಂತು ಬಿಡುತ್ತದೆ.
Ninja dog.. ? pic.twitter.com/UBfA0wVVl3
— Buitengebieden (@buitengebieden) May 5, 2023
ಈ ವೀಡಿಯೊ 1.5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ಅನೇಕರು ಲೈಕ್ ಮಾಡಿದ್ದಾರೆ. ಜತೆಗೆ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರೂ “ನಾಯಿಯು ಸೂಪರ್ ನೃತ್ಯ ಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ಆ ಸುರುಳಿ ಕಿಕ್ ಅದ್ಭುತವಾಗಿತ್ತು.” ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Published On - 1:04 pm, Mon, 8 May 23