Viral video from China: ಹೋಟೆಲ್ ನಲ್ಲಿ ಲ್ಯಾಪ್ ಟಾಪ್ ಕಳೆದಿದೆ ಅಂತ ರೊಚ್ಚಿಗೆದ್ದ ವ್ಯಕ್ತಿ ಲಾಬಿಯೊಳಗೆ ಕಾರು ನುಗ್ಗಿಸಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ!

ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಘಟನೆಯು ಮಂಗಳವಾರ ಬೆಳಗಿನ ಜಾವ ಘಟನೆ ನಡೆದಿದೆ. ಕಾರನ್ನು ಹೋಟೆಲ್ ನೊಳಗೆ ನುಗ್ಗಿಸಿದ ಚೆನ್ 28-ವರ್ಷ-ವಯಸ್ಸಿನ ವ್ಯಕ್ತಿಯಾಗಿದ್ದು ಹೋಟೆಲ್ ನಲ್ಲಿ ತಂಗಿದ್ದಾಗ ಅವನ ಲ್ಯಾಪ್ ಟಾಪ್ ನಾಪತ್ತೆಯಾದ ಕಾರಣ ಸಿಬ್ಬಂದಿಯೊಂದಿಗೆ ಜಗಳ ಕಾಯ್ದಿದ್ದ.

Viral video from China: ಹೋಟೆಲ್ ನಲ್ಲಿ ಲ್ಯಾಪ್ ಟಾಪ್ ಕಳೆದಿದೆ ಅಂತ ರೊಚ್ಚಿಗೆದ್ದ ವ್ಯಕ್ತಿ ಲಾಬಿಯೊಳಗೆ ಕಾರು ನುಗ್ಗಿಸಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ!
ಹೋಟೆಲ್ ಲಾಬಿಗೆ ನುಗ್ಗಿರುವ ಕಾರು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 12, 2023 | 12:32 PM

ಇದು ಹುಚ್ಚುತನ (insane) ಅಥವಾ ಅದರ ಪರಮಾವಧಿ ಅಂತ ಹೇಳಿದರೆ ಆ ಪದಗಳಿಗೆ ಅವಮಾನ ಮಾಡಿದಂತೆ ಮಾರಾಯ್ರೇ! ಯಾಕೆಂದರೆ ಚೀನಾದ ಈ ವ್ಯಕ್ತಿ ಮಾಡಿದ್ದು ಹುಚ್ಚನೊಬ್ಬನ ಎಣಿಕೆಗೂ ನಿಲುಕದ್ದು. ಆಗಿದ್ದೇನು ಅಂತ ನಿಮಗೆ ಹೇಳ್ತೀವಿ. ಪಂಚತಾರಾ ಹೋಟೆಲೊಂದರ (five star hotel) ಲಾಬಿಯಲ್ಲಿ ಅಡ್ಡಾದಿಡ್ಡಿ ಕಾರು ಓಡಿಸುತ್ತಾ ಅಲ್ಲಿರುವ ಬೆಲೆಬಾಳುವ ಪೀಠೋಪಕರಣ, ದುಬಾರಿ ಅಲಂಕಾರಿಕ ವಸ್ತುಗಳು ಮತ್ತು ಇತರ ಸಾಮಗ್ರಿಗಳನನ್ನು ಧ್ವಂಸಗೊಳಿಸುತ್ತಿರುವ ವ್ಯಕ್ತಿ ಆ ಹೋಟೆಲ್ ನಲ್ಲಿ ತಂಗಿದ್ದಾಗ ಅವನ ಲ್ಯಾಪ್ ಟಾಪ್ (laptop) ನಾಪತ್ತೆಯಾಗಿದ್ದಕ್ಕೆ ರೊಚ್ಚಿಗೆದ್ದು ತನ್ನ ಕೋಪವನ್ನು ಹಾಗೆ ಪ್ರದರ್ಶಿಸುತ್ತಿದ್ದಾನೆ. ಅದಕ್ಕೂ ಮೊದಲು ಹೋಟೆಲ್ ಸಿಬ್ಬಂದಿಯೊಂದಿಗೆ ಜೋರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದನಂತೆ.

‘ಅವನಿಗೆ ಮತಿ ಭ್ರಮಣೆಯಾಗಿದೆ’

ಚೀನಾದ ಶಾಂಘೈ ನಗರದಲ್ಲಿರುವ ಜಿನ್ಲಿಂಗ್ ಪರ್ಪಲ್ ಮೌಂಟೇನ್ ಹೋಟೆಲ್ ನಲ್ಲಿ ಅವನ ಶ್ವೇತವರ್ಣದ ಕಾರು, ಗಾಜಿನ ದ್ವಾರಗಳನ್ನು ಒಡೆಯತ್ತಾ ಒಳನುಗ್ಗುವ ಮತ್ತು ದಾರಿಯಲ್ಲಿ ಅಡ್ಡಬರುವ ವಸ್ತುಗಳನ್ನೆಲ್ಲ ದ್ವಂಸ ಮಾಡುವ ದೃಶ್ಯಗಳು ಸೆರೆಯಾದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಂತರ ಟಾಪ್ ಓಪನ್ ಆಗುವ ಸೌಕರ್ಯವಿರುವ ಕಾರು ಹೋಟೆಲ್ ಪ್ರವೇಶದ್ವಾರದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿ ಹೋಟೆಲ್ ನೊಳಗಿದ್ದ ಅತಿಥಿ ಮತ್ತು ಸಿಬ್ಬಂದಿ ಅಘಾತಕ್ಕೀಡು ಮಾಡುತ್ತದೆ. ಏನು ನಡೆಯುತ್ತಿದೆ ಅಂತ ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ. ‘ಅವನಿಗೆ ಮತಿ ಭ್ರಮಣೆಯಾಗಿದೆ,’ ಅಂತ ಒಬ್ಬರು ಕಿರುಚುತ್ತಾರೆ.

ಇದನ್ನೂ ಓದಿ: China Covid Cases: ಚೀನಾದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರೂ ವಿದೇಶಿ ಪ್ರಯಾಣ ನಿರ್ಬಂಧ ತೆರವು, ಕ್ವಾರಂಟೈನ್ ಇಲ್ಲ

ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಘಟನೆಯು ಮಂಗಳವಾರ ಬೆಳಗಿನ ಜಾವ ಘಟನೆ ನಡೆದಿದೆ. ಕಾರನ್ನು ಹೋಟೆಲ್ ನೊಳಗೆ ನುಗ್ಗಿಸಿದ ಚೆನ್ 28-ವರ್ಷ-ವಯಸ್ಸಿನ ವ್ಯಕ್ತಿಯಾಗಿದ್ದು ಹೋಟೆಲ್ ನಲ್ಲಿ ತಂಗಿದ್ದಾಗ ಅವನ ಲ್ಯಾಪ್ ಟಾಪ್ ನಾಪತ್ತೆಯಾದ ಕಾರಣ ಸಿಬ್ಬಂದಿಯೊಂದಿಗೆ ಜಗಳ ಕಾಯ್ದಿದ್ದ.

‘ಚೆನ್​​ನನ್ನು ವಶಕ್ಕೆ ಪಡೆಯಲಾಗಿದೆ’

ಆ ಹುಚ್ಚು ಮತ್ತು ಬಾಲಿಶ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ತಮ್ಮ ವೀಬೋ ಸೋಶಿಯಲ್ ಮಿಡಿಯಾ ಅಕೌಂಟ್ ನಲ್ಲಿ ಹೇಳಿದ್ದಾರೆ. ಚೆನ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹೋಟೆಲ್ ಸಿಬ್ಬಂದಿ ಎ ಎಫ್ ಪಿ ಮಾಧ್ಯಮದೊಂದಿಗೆ ಮಾತಾಡಿ, ಚೆನ್ ಲ್ಯಾಪ್ ಟಾಪ್ ಕಳುವಾಗಿತ್ತು ಮತ್ತು ಅದು ಹೋಟೆಲ್ ಹೊರಗಡೆ ಸಿಕ್ಕಿದೆ ಎಂದು ಹೇಳಿದ್ದಾರೆ. ಕಾರು ಹೊರಗಡೆ ಹೋಗುವ ಮೊದಲು, ಡೋರ್ ಗಳ ಒಂದು ಸೆಟ್ ಗೆ ಡಿಕ್ಕಿ ಹೊಡೆದಿದೆ ಮತ್ತು ಡೋರ್ ಗಳ ಫ್ರೇಮಿಗೆ ಡಿಕ್ಕಿಯಾದ ನಂತರ ನಿಶ್ಚಲ ಸ್ಥಿತಿಗೆ ಬಂದಿದೆ. ಆ ಎಲ್ಲ ಸಂದರ್ಭದಲ್ಲಿ ಕಾರಿನ ಅಪಾಯದ ದೀಪ ಬೆಳಗುತಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ.

ಇದನ್ನೂ ಓದಿ: ಸೈಕಲ್​ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್

ಹೋಟೆಲ್ ಲಾಂಜ್ ನಲ್ಲಿದ್ದ ಜನ ಚೆನ್ ಗೆ ಕಾರು ನಿಲ್ಲಿಸು ಅಂತ ಜೋರಾದ ಧ್ವನಿಯಲ್ಲಿ ಅರಚಿದ್ದಾರೆ. ನಂತರ ಕಾರಿನ ವಿಂಡೋ ಗ್ಲಾಸ್ ಒಡೆದು ಕಾರಿನ ಕೀ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.

‘ನೀನೇನು ಮಾಡಿದ್ದೀಯಾ ಅಂತ ಅರಿವಿದೆಯಾ? ನಿಂಗೇನು ಹುಚ್ಚು ಹಿಡಿದಿದೆಯಾ ಅಥವಾ ಅಸಲಿಗೆ ನೀನೊಬ್ಬ ಹುಚ್ಚನಾ?’ ಅಂತ ಅವರು ಕೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು