ತನ್ನಿಬ್ಬರು ಮಕ್ಕಳ ರಕ್ಷಣೆಗೆ ಅಮೆರಿಕನ್ ಮಹಿಳೆಯೊಬ್ಬರು ಮನೆನುಗ್ಗಿದ ಆಗಂತುಕ ದರೋಡೆಕೋರನನ್ನು ಗುಂಡು ಹಾರಿಸಿ ಕೊಂದರೂ ಪೊಲೀಸರು ಬಂಧಿಸಿಲ್ಲ!
ಹ್ಯಾಮಂಡ್ ನವನೇ ಆಗಿರುವ ಮೃತ ವ್ಯಕ್ತಿ ದರೋಡೆ ಪ್ರಕರಣವೊದರಲ್ಲಿ 20 ವರ್ಷ ಸೆರೆವಾಸದ ಶಿಕ್ಷೆಗೊಳಗಾಗಿದ್ದ ಮತ್ತು ಪರೋಲ್ ಮೇಲೆ ಕೆಲದಿನಗಳ ಮಟ್ಟಿಗೆ ಹೊರಬಂದಿದ್ದ.

ಅಮೆರಿಕದ ಲೌಸಿಯಾನಾದ (Louisiana) ಹ್ಯಾಮಂಡ್ ಪ್ರದೇಶದ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಮನೆಗೆ ದರೋಡೆ ನಡೆಸುವ ಉದ್ದೇಶದಿಂದ ನುಗ್ಗಿದ ಆಗಂತುಕನನ್ನು ಗನ್ ಒಂದರಿಂದ ಗುಂಡು ಹಾರಿಸಿ ಕೊಂದರೂ ಪೊಲೀಸರು ಬಂಧಸಿಲ್ಲ ಮತ್ತು ಅವರ ಮೇಲೆ ಯಾವುದೇ ಕ್ರಿಮಿನಲ್ ಚಾರ್ಜ್ (charge) ವಿಧಿಸಲಾಗಿಲ್ಲ. ಪೊಲೀಸರು ಮಹಿಳೆಯ ಹೆಸರನ್ನು ಗೌಪ್ಯವಾಗಿಟ್ಟಿದ್ದು, ತನ್ನ ಮಕ್ಕಳ ರಕ್ಷಣೆಗಾಗಿ ಅವರು ಗುಂಡು ಹಾರಿಸಿದರೆಂದು ಹೇಳಿದ್ದಾರೆ. 51-ವರ್ಷ ವಯಸ್ಸಿನವನಾಗಿದ್ದ ರಾಬರ್ಟ್ ರೀಮ್ಸ್ (Robert Rheams) ಹೆಸರಿನ ದರೋಡೆಕೋರ ಜನೆವರಿ 8ರಂದು ಹ್ಯಾಮಂಡ್ ನಲ್ಲಿರುವ ಮಹಿಳೆಯ ಮನೆಗೆ ನುಗ್ಗಿದ್ದ. ಅವನ ಒಂದು ಕೈಯಲ್ಲಿ ಸಲಿಕೆ ಇದ್ದರೆ ಮತ್ತೊಂದು ಕೈಯಲ್ಲಿ ಸ್ಪ್ಯಾನರ್ ಇತ್ತು.
ಪಿಸ್ಟಲ್ನಿಂದ ಹಾರಿದ ಗುಂಡು ಅವನ ತಲೆಹೊಕ್ಕಿತು
ಅವನ ಆಗಮನದ ಸದ್ದಿನಿಂದ ಎಚ್ಚರಗೊಂಡ ಮಹಿಳೆ ಮತ್ತೊಂದು ರೂಮಲ್ಲಿ ಮಲಗಿದ್ದ ತಮ್ಮ ಮಕ್ಕಳ ಬಳಿ ಅವನ ಹೋದಾನು ಎಂಬ ಆತಂಕದಿಂದ ಅವನನ್ನು ಮುಖಾಮುಖಿಯಾಗಿ ಸೆಣಸಲು ಮುಂದಾಗಿದ್ದಾರೆ. ಅವರಿಬ್ಬರ ನಡುವೆ ಫೈಟ್ ನಡೆದಿದೆ ಮತ್ತು ತನಗೆ ಅವನನ್ನು ಮಣಿಸುವುದು ಸಾಧ್ಯವಾಗದು ಅಂತ ಮನವರಿಕೆಯಾದ ಬಳಿಕ ಅವರು ತಮ್ಮ ಬೆಡ್ ರೂಮಲ್ಲಿದ್ದ ಪಿಸ್ಟಲ್ ಕೈಗೆತ್ತಿಕೊಂಡು ಅವನ ಮೇಲೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ: ಮೆಸೆಂಜರ್ ಆರ್ಎನ್ಎ ಕೊವಿಡ್ ಲಸಿಕೆಯಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು; ಅಮೆರಿಕದ ವಿಜ್ಞಾನಿ ಎಚ್ಚರಿಕೆ
ಪಕ್ಕದ ಮನೆಯಿಂದ ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಅಲರ್ಟ್ ಮಾಡಿದಾಕ್ಷಣ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಲ್ಲಿಗೆ ಧಾವಿಸಿದ್ದಾರೆ. ಕೂಡಲೇ ರೀಮ್ಸ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ ಅಲ್ಲಿನ ವೈದ್ಯರು ಅವನು ಸತ್ತಿರವನೆಂದು ಘೋಷಿಸಿದ್ದಾರೆ.
ದರೋಡೆಕೋರನೂ ಹ್ಯಾಮಂಡ್ನವನೇ
ಹ್ಯಾಮಂಡ್ ನವನೇ ಆಗಿರುವ ಮೃತ ವ್ಯಕ್ತಿ ದರೋಡೆ ಪ್ರಕರಣವೊದರಲ್ಲಿ 20 ವರ್ಷ ಸೆರೆವಾಸದ ಶಿಕ್ಷೆಗೊಳಗಾಗಿದ್ದ ಮತ್ತು ಪರೋಲ್ ಮೇಲೆ ಕೆಲದಿನಗಳ ಮಟ್ಟಿಗೆ ಹೊರಬಂದಿದ್ದ.
ಮಹಿಳೆಯನ್ನಾಗಲೀ ಬೇರೆ ಯಾರನ್ನಾಗಲೀ ಪೊಲೀಸರು ಇದುವರೆಗೆ ಬಂಧಿಸಿಲ್ಲ ಮತ್ತು ತನಿಖೆ ಜಾರಿಯಲ್ಲಿದೆ ಎಂದು ವರದಿಯಾಗಿದೆ. ತಂಗಿಪಹೋವ ಪಾರಿಷ್ ಶೆರೀಫ್ ಕಚೇರಿಯ ಚೀಫ್ ಪೊಲೀಸ್ ಆಧಿಕಾರಿ ಜಿಮ್ಮಿ ಟ್ರಾವಿಸ್ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಈ ಪ್ರಕರಣದಲ್ಲಿ ಮನೆಯ ಯಜಮಾನಿಯೊಬ್ಬರು ಹಿಂಸೆಯ ಉದ್ದೇಶದಿಂದ ಮನೆಹೊಕ್ಕ ಅಂಗಂತುಕನಿಂದ ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ರಕ್ಷಿಸಲು ತಮಗಿರುವ ಹಕ್ಕನ್ನು ಬಳಸಿಕೊಂಡಿರುವಂತೆ ಗೋಚರಿಸುತ್ತದೆ,’ ಎಂದು ಹೇಳಿದ್ದಾರೆ.
ಕಾರು ಕಳುವು ಮಾಡುವ ಪ್ರಯತ್ನ ಮಾಡಿದ್ದ
ತಮ್ಮ ತನಿಖೆ ಪೂರ್ಣಗೊಂಡ ಬಳಿಕ ಈ ಪ್ರಕರಣನ್ನು ಹೆಚ್ಚಿನ ಪರಾಮರ್ಶೆಗಾಗಿ ಡಿಸ್ಟ್ರಿಕ್ಟ್ ಅಟಾರ್ನಿ ಅವರ ಅವಗಾಹನೆಗೆ ಕಳಿಸಲಾಗುವುದು ಎಂದು ಟ್ರಾವಿಸ್ ಹೇಳಿದ್ದಾರೆ. ಈ ಪ್ರಕರಣ ಜರುಗುವ ಮೊದಲು ರೀಮ್ಸ್ ಕಾರೊಂದನ್ನು ಕಳುವು ಮಾಡುವ ಪ್ರಯತ್ನ ಮಾಡಿದ್ದನೆಂಬ ಸಂಗತಿಯನ್ನೂ ಪೊಲೀಸರು ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ: Winter Diet For Lungs: ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವ ಬೆಸ್ಟ್ 7 ಆಹಾರಗಳು ಇಲ್ಲಿವೆ
‘ಕಾರಿನ ಮಾಲೀಕ ಹೊರರಾಜ್ಯದ ನಿವಾಸಿಯಾಗಿದ್ದು ಕೆಲಸದ ನಿಮಿತ್ತ ಹ್ಯಾಮಂಡ್ ಗೆ ಬಂದು ಮೊಟೆಲೊಂದರಲ್ಲಿ ನೆಲೆಸಿದ್ದ. ಆ ವ್ಯಕ್ತಿ ಕಾರಲ್ಲಿ ಹೋಗುತ್ತಿದ್ದಾಗ ರೀಮ್ಸ್ ಲಿಫ್ಟ್ ಕೇಳಿದ್ದ,’ ಎಂದು ಟ್ರಾವಿಸ್ ಹೇಳಿದ್ದಾರೆ.
ಡ್ರೈವರ್ಗೆ ಗಾಯ
‘ಕಾರು ಚಲಿಸಲಾರಂಭಿಸಿದ ನಂತರ ರೀಮ್ಸ್, ಡ್ರೈವರ್ ಮುಖಕ್ಕೆ ಮತ್ತು ತಲೆಗೆ ಗುದ್ದಲಾರಂಭಿಸಿದ್ದಾನೆ. ಏಟುಗಳಿಂದ ತತ್ತರಿಸಿದ ಡ್ರೈವರ್ ನಿಯಂತ್ರಣ ಕಳೆದುಕೊಂಡದ್ದರಿಂದ ಕಾರು ಕಂದಕವೊಂದಕ್ಕೆ ಇಳಿದು ಸಿಕ್ಕಿಹಾಕಿಕೊಂಡಿದೆ. ಕಾರು ನಿಂತ ಕೂಡಲೇ ಡ್ರೈವರ್ ತನ್ನ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿದ್ದಾನೆ,’ ಎಂದು ಟ್ರಾವಿಸ್ ಹೇಳಿದ್ದಾರೆ.
ಡ್ರೈವರ್ ಗೆ ಮುಖದ ಮೇಲೆಲ್ಲ ಗಾಯಗಳಾಗಿವೆ ಮತ್ತು ಕಾರು ಸಿಕ್ಕಿಬಿದ್ದಿದರಿಂದ ರೀಮ್ಸ್ ಕೂಡ ಅಲ್ಲಿಂದ ಪರಾರಿಯಾಗಿದ್ದಾನೆ, ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




