ಆಸ್ಟ್ರೇಲಿಯಾದ ಮೆಲ್ಬೊರ್ನ್​ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಹಿಂದೂ ದೇಗುಲದ ಮೇಲೆ ದಾಳಿ

ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದಾರೆ. ಅವರ ಪ್ರಭಾವವೂ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.

ಆಸ್ಟ್ರೇಲಿಯಾದ ಮೆಲ್ಬೊರ್ನ್​ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಹಿಂದೂ ದೇಗುಲದ ಮೇಲೆ ದಾಳಿ
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿರುವ ಸ್ವಾಮಿ ನಾರಾಯಣ ದೇಗುಲದ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿದೆ.Image Credit source: Australia Today
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 12, 2023 | 2:33 PM

ಮೆಲ್ಬೊರ್ನ್: ಆಸ್ಟ್ರೇಲಿಯಾದ ಮೆಲ್ಬೊರ್ನ್ (Melbourne City) ನಗರದಲ್ಲಿ ಖಲಿಸ್ತಾನಿ (Khalistanis) ಬೆಂಬಲಿಗರು ಹಿಂದೂ ದೇಗುಲದ ಮೇಲೆ ದಾಳಿ ನಡೆಸಿದ್ದಾರೆ. ಮೆಲ್ಬೊರ್ನ್​ನ ಉತ್ತರಕ್ಕಿರುವ ಉಪನಗರ ಮಿಲ್​ ಪಾರ್ಕ್​ನ ಬಿಎಪಿಎಸ್ ಸ್ವಾಮಿ ನಾರಾಯಣ ಮಂದಿರದ ಗೋಡೆಗಳ ಮೇಲೆ ಗುರುವಾರ (ಜ 12) ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿತ್ತು. ಈ ಬರಹ ಹಾಗೂ ಕೆಟ್ಟ ಚಿತ್ರಗಳನ್ನು ನೋಡಿ ಸ್ಥಳೀಯರು ಹೌಹಾರಿದರು ಎಂದು ‘ಆಸ್ಟ್ರೇಲಿಯಾ ಟುಡೇ’ ವರದಿ ಮಾಡಿದೆ. ‘ಹಿಂದುಸ್ತಾನ್ ಮುರ್ದಾಬಾದ್’, ‘ಮೋದಿ ಹಿಟ್ಲರ್’ ಮತ್ತು ‘ಸಂತ ಭಿಂದ್ರನ್​ವಾಲೆ ಒಬ್ಬ ಹುತಾತ್ಮ’ ಎಂಬ ಬರಹಗಳು ದೇಗುಲದ ಗೋಡೆಗಳ ಮೇಲೆ ಕಂಡುಬಂತು.

ಪ್ರಕರಣ ಸಂಬಂಧ ‘ಆಸ್ಟ್ರೇಲಿಯಾ ಟುಡೆ’ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ ನಾರಾಯಣ ಮಂದಿರದ ಪ್ರತಿನಿಧಿಗಳು, ‘ದ್ವೇಷ ಮತ್ತು ವಿಧ್ವಂಸಕಾರಿ ಮನಃಸ್ಥಿತಿಯಿಂದ ಕೂಡಿರುವವರ ವರ್ತನೆಯಿಂದ ನಮಗೆ ತೀವ್ರ ಬೇಸರವಾಗಿದೆ. ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕೆಂದು ಎಲ್ಲರಲ್ಲೂ ಮನವಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದಾರೆ. ಅವರ ಪ್ರಭಾವವೂ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ‘ಸಿಖ್ಸ್​ ಫಾರ್ ಜಸ್ಟಿಸ್ (ಎಸ್​ಜೆಎಫ್) ಹೆಸರಿನಲ್ಲಿ ಆಸ್ಟ್ರೇಲಿಯದಲ್ಲಿ ಖಲಿಸ್ತಾನಿಗಳು ಚಟುವಟಿಕೆ ವಿಸ್ತರಿಸುತ್ತಿದ್ದಾರೆ. ಇದೇ ಜನವರಿ 29ಕ್ಕೆ ಆಸ್ಟ್ರೇಲಿಯಾ ಸಿಖ್ಖರ ಸಮಾವೇಶವನ್ನೂ ಆಯೋಜಿಸಲಾಗಿದೆ. ಸಮಾವೇಶದ ಮುನ್ನಾ ದಿನಗಳಲ್ಲಿ ದೇಶದ ವಿವಿಧೆಡೆ ಉದ್ವಿಗ್ನ ಪರಿಸ್ಥಿತಿ ತಲೆರೋದಿದೆ.

ಇಂದಿರಾಗಾಂಧಿಯನ್ನು ಕೊಂದಿದ್ದ ಸತ್ವಂತ್ ಸಿಂಗ್ ಮತ್ತು ಕೆಹರ್ ಸಿಂಗ್ ಅವರ ಭಾವಚಿತ್ರಗಳು ಮೆಲ್ಬೊರ್ನ್ ನಗರದ ವಿವಿಧೆಡೆ ಕಾಣಿಸಿಕೊಂಡಿವೆ. ಜನವರಿ 15ರಂದು ಇವರನ್ನು ಗಲ್ಲಿಗೆ ಹಾಕಿದ 34ನೇ ವರ್ಷಾಚರಣೆಯ ಪ್ರಯುಕ್ತ ಕಾರ್ ಜಾಥಾ ಆಯೋಜಿಸಲಾಗಿದೆ. ಜನವರಿ 15, 1989ರಂದು ಇಂದಿರಾಗಾಂಧಿ ಅವರ ಕೊಲೆಯಾಗಿತ್ತು.

ಖಲಿಸ್ತಾನ ಜನಮತ ಸಂಗ್ರಹದ (Khalistan Referendum) ಬಗ್ಗೆಯೂ ಪ್ಲಮ್​ಟನ್ ಗುರುದ್ವಾರದ ಸುತ್ತಮುತ್ತ ಪೋಸ್ಟರ್​ಗಳು ಕಾಣಿಸಿಕೊಂಡಿವೆ. ಈ ಜನಮತ ಸಂಗ್ರಹವನ್ನು ಪಂಜಾಬ್ ವಿಮೋಚನೆಯ ಕೊನೆಯ ಸಂಘರ್ಷ ಎಂದು ಬಣ್ಣಿಸಲಾಗಿದೆ. ಜನವರಿ 29ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಜನಮತ ಸಂಗ್ರಹ ನಡೆಯಲಿದೆ ಎಂದು ಪೋಸ್ಟರ್​ಗಳಲ್ಲಿ ತಿಳಿಸಲಾಗಿದೆ. ಈ ಪೋಸ್ಟರ್​ಗಳಲ್ಲಿಯೂ ಸತ್​ವಂತ್ ಸಿಂಗ್ ಹಾಗೂ ಕೆಹರ್ ಸಿಂಗ್ ಅವರ ಫೋಟೊಗಳಿವೆ. ಇವರಿಬ್ಬರನ್ನೂ ಹುತಾತ್ಮರು ಎಂದು ಬಣ್ಣಿಸಲಾಗಿದೆ.

ಈ ಬೆಳವಣಿಗೆಗಳು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದವರು ಹಾಗೂ ಹಿಂದೂಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾರತ ಸರ್ಕಾರವೂ ಅಧಿಕೃತವಾಗಿ ಆಸ್ಟ್ರೇಲಿಯಾ ಸರ್ಕಾರಕ್ಕೆ ತನ್ನ ಅಸಮಾಧಾನವನ್ನು ದಾಖಲಿಸಿದೆ. ಆದರೆ ಜನಮತ ಸಂಗ್ರಹವನ್ನು ಆಸ್ಟ್ರೇಲಿಯಾ ಸರ್ಕಾರ ಈವರೆಗೆ ನಿಷೇಧಿಸಿಲ್ಲ.

ಹೆಚ್ಚುತ್ತಿದೆ ಸಿಖ್ ಪ್ರತ್ಯೇಕತಾವಾದಿಗಳ ಚಟುವಟಿಕೆ

ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಚಳವಳಿಯು ಚುರುಕಾಗುತ್ತಿರುವ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ಆಗಾಗ ವರದಿಗಳು ಪ್ರಕಟವಾಗುತ್ತಿತ್ತು. ಚಳವಳಿಯನ್ನು ತಕ್ಷಣ ಹತ್ತಿಕ್ಕದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಅಲ್ಲಿರುವ ಭಾರತೀಯರು ಈ ಹಿಂದೆಯೂ ಆತಂಕ ವ್ಯಕ್ತಪಡಿಸಿದ್ದರು. ತೀವ್ರವಾದ ಬೆಳೆದರೆ ಅದಕ್ಕೆ ಪ್ರೋತ್ಸಾಹ ನೀಡುವ ದೇಶವೇ ಮೊದಲು ಬೆಲೆ ತೆರಬೇಕಾಗುತ್ತದೆ ಎಂದು ಆಸ್ಟ್ರೇಲಿಯಾದಲ್ಲಿರುವ ಅಧಿಕಾರಿಗಳು ಎಚ್ಚರಿಸಿದ್ದರು.

ಆಸ್ಟ್ರೇಲಿಯಾದ ವಿಕ್ಟೋರಿಯಾ ಸಿಖ್ ಗುರುದ್ವಾರ ಸಮಿತಿಯು ಇತ್ತೀಚೆಗೆ ಖಲಿಸ್ತಾನಿ ಟಿಶರ್ಟ್​ಗಳು ಮತ್ತು ಬಾವುಟಗಳನ್ನು ವಿತರಿಸಲಾಗಿತ್ತು. ಈ ಗುರುದ್ವಾರ ಸಮಿತಿಯು 2019ರಿಂದಲೂ ನಗರ ಕೀರ್ತನೆಗಳನ್ನು ಆಯೋಜಿಸುತ್ತಿದ್ದು, ಆಸ್ಟ್ರೇಲಿಯಾದ ವಿವಿಧೆಡೆ ಇರುವ 7 ಗುರುದ್ವಾರಗಳನ್ನು ಪ್ರತಿನಿಧಿಸುತ್ತದೆ. ಆಸ್ಟ್ರೇಲಿಯಾದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ವಿಕ್ಟೋರಿಯನ್ ಲೇಬರ್ ಸರ್ಕಾರದೊಂದಿಗೆ ಹತ್ತಿರದ ಸಂಬಂಧ ಹೊಂದಿರುವ ಅಮೃತ್​ವೀರ್ ಸಿಂಗ್ ಸಹ ಖಲಿಸ್ತಾನಿ ಚಳವಳಿಯೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರು ವಿಕ್ಟೋರಿಯಾ ಸಿಖ್ ಗುರುದ್ವಾರ ಸಮಿತಿಯ ಸದಸ್ಯರೂ ಆಗಿದ್ದಾರೆ.

ಪಂಜಾಬ್​ನಲ್ಲಿ ದ್ವೇಷ ಹರಡಲು ಯತ್ನಿಸಿ ವಿಫಲವಾಗಿರುವ ಸಂಘಟನೆಗಳು ಇದೀಗ ಬೇರೆ ದೇಶಗಳಲ್ಲಿರುವ ಸಿಖ್ಖರನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿರುವ ಬಗ್ಗೆ ಭಾರತ ಸರ್ಕಾರವು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಸಹ ಇಂಥ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಭಾರತ ಸರ್ಕಾರವು ಆತಂಕ ವ್ಯಕ್ತಪಡಿಸಿದೆ.

ಆಸ್ಟ್ರೇಲಿಯಾದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸ್ವೇಚ್ಛಾಚಾರ ನಡೆಯುತ್ತಿದೆ. ಭಾರತ ವಿರೋಧಿ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಎಸ್​ಜೆಎಫ್ ಈ ಸ್ವಾತಂತ್ರ್ಯದ ದುರುಪಯೋಗ ಪಡೆದುಕೊಳ್ಳುತ್ತಿದೆ. ಪಂಜಾಬ್​​ನಲ್ಲಿ ಅಪಪ್ರಚಾರ ನಡೆಸಲು ಯತ್ನಿಸಿದ ಈ ಗುಂಪು ಈಗಾಗಲೇ ವಿಫಲವಾಗಿದೆ. ವಿದೇಶಗಳಲ್ಲಿರುವ ಸರ್ಕಾರಗಳು ಭಾರತದ ಹಿತಾಸಕ್ತಿಯನ್ನು ಕಡೆಗಣಿಸಬಾರದು. ಎಸ್​ಜೆಎಫ್​ನ ನಾಯಕ ಗುರುಪತ್ವಂತ್ ಸಿಂಗ್ ಪುನ್ನನ್ ಅವರನ್ನು ತಕ್ಷಣ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಸಲಹೆ ಮಾಡಿದ್ದಾರೆ.

ಇದನ್ನೂ ಓದಿ: ಪಂಜಾಬ್​​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ಗ್ರೆನೇಡ್ ದಾಳಿ; ಕೃತ್ಯದ ಹೊಣೆ ಹೊತ್ತ ಖಲಿಸ್ತಾನಿ ಉಗ್ರ ಸಂಘಟನೆ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 12 January 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ