ಹಿಂದೂ ಧರ್ಮಗ್ರಂಥಗಳು ಅಶ್ಲೀಲತೆಯಿಂದ ಕೂಡಿದೆ; ಬಾಂಗ್ಲಾದೇಶದ ವಿಪಕ್ಷದ ನಾಯಕ ವಾಗ್ದಾಳಿ
ಹಿಂದೂ ಧರ್ಮದ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಯನ್ನು ನೀಡುವುದಿಲ್ಲ. ಹಿಂದೂ ಧರ್ಮದ ಎಲ್ಲಾ ಧಾರ್ಮಿಕ ಗ್ರಂಥಗಳು ಅಶ್ಲೀಲ ಪುಸ್ತಕಗಳಾಗಿವೆ ಎಂದು ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕರೊಬ್ಬರು ಹಿಂದೂ ಧರ್ಮಗ್ರಂಥಗಳ (Hindu Religious Scriptures) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅವುಗಳನ್ನು “ಅಶ್ಲೀಲ ಪಠ್ಯಗಳು” ಎಂದು ಕರೆದು ಭಾರೀ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಂದೂ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ನೀಡುವುದಿಲ್ಲ. ಅವು ಅಶ್ಲೀಲ ಪಠ್ಯಗಳಾಗಿವೆ ಎಂದು ಬಾಂಗ್ಲಾದೇಶದ (Bangladesh) ವಿರೋಧ ಪಕ್ಷದ ಗೊನೊ ಓಧಿಕಾರ್ ಪರಿಷತ್‌ನ ಜಂಟಿ ಸಂಚಾಲಕ ತಾರಿಕ್ ರೆಹಮಾನ್ ಹೇಳಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಉಗ್ರಗಾಮಿ ಸಂಘಟನೆ ಜಮಾತ್-ಇ-ಇಸ್ಲಾಮಿ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಬೆಂಬಲದೊಂದಿಗೆ ಉಗ್ರವಾದಿಗಳ ಗುಂಪು ಶೇಖ್ ಹಸೀನಾ ನೇತೃತ್ವದ ಸರ್ಕಾರ ವಿರುದ್ಧ ಅಪಪ್ರಚಾರ ಮಾಡುವುದರ ಜೊತೆಗೆ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Love Jihad Helpline: ಲವ್ ಜಿಹಾದ್ ವಿರುದ್ಧ ಜಾಗೃತಿ: ಒಂದು ಹೆಜ್ಜೆ ಮುಂದಿಟ್ಟ ಹಿಂದೂ ಸಂಘಟನೆಗಳು, ಹೆಲ್ಪ್‌ಲೈನ್ ಆರಂಭ
ಹಿಂದೂ ಧರ್ಮದ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಯನ್ನು ನೀಡುವುದಿಲ್ಲ. ಹಿಂದೂ ಧರ್ಮದ ಎಲ್ಲಾ ಧಾರ್ಮಿಕ ಗ್ರಂಥಗಳು ಅಶ್ಲೀಲ ಪುಸ್ತಕಗಳಾಗಿವೆ ಎಂದು ಬಾಂಗ್ಲಾದೇಶ ಗೊನೊ ಓಧಿಕಾರ್ ಪರಿಷತ್ತಿನ ಜಂಟಿ ಸಂಚಾಲಕ ಮತ್ತು ನೂರುಲ್ ಹಕ್ ನೂರ್ ಅವರ ಉನ್ನತ ಸಹಾಯಕ ತಾರಿಕ್ ರೆಹಮಾನ್ ಫೇಸ್ಬುಕ್ ಲೈವ್ನಲ್ಲಿ ಹಿಂದೂಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ಶೇರ್ ಮಾಡುತ್ತಿದ್ದಾರೆ. ಅಕ್ಟೋಬರ್ 2021ರಲ್ಲಿ ಪ್ರಾರಂಭವಾದ ಗೊನೊ ಓಧಿಕಾರ್ ಪರಿಷತ್ತು ಹೆಚ್ಚಾಗಿ ಕಾರ್ಯಕರ್ತರು ಮತ್ತು ಯುವಕರನ್ನು ತಮ್ಮ ನಾಯಕರನ್ನಾಗಿ ಹೊಂದಿದೆ. ಈ ಪಕ್ಷಕ್ಕೆ ಭಯೋತ್ಪಾದಕ ಸಂಘಟನೆ ಜಮಾತ್-ಎ-ಇಸ್ಲಾಮಿ ಬೆಂಬಲವಿದೆ.




