AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Jihad Helpline: ಲವ್ ಜಿಹಾದ್ ವಿರುದ್ಧ ಜಾಗೃತಿ: ಒಂದು ಹೆಜ್ಜೆ ಮುಂದಿಟ್ಟ ಹಿಂದೂ ಸಂಘಟನೆಗಳು, ಹೆಲ್ಪ್‌ಲೈನ್ ಆರಂಭ

ಹಿಂದೂ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಿ ಲವ್ ಜಿಹಾದ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಸಹೋದರಿಯರ ರಕ್ಷಣೆಗೆ ಬದ್ದವಿದ್ದೇವೆ ಎಂದು ವಿ.ಎಚ್.ಪಿ ಹೇಳಿದೆ. ಈ ಹೆಲ್ಪ್ ಲೈನ್ ಗೆ ಚಾಲನೆ ನೀಡುತ್ತಿದ್ದಂತೆ ಸಂತ್ರಸ್ತರಿಂದ ಕರೆ, ಮೇಸೆಜ್‌ಗಳು ಬರೋದಕ್ಕೆ ಆರಂಭವಾಗಿದೆ.

Love Jihad Helpline: ಲವ್ ಜಿಹಾದ್ ವಿರುದ್ಧ ಜಾಗೃತಿ: ಒಂದು ಹೆಜ್ಜೆ ಮುಂದಿಟ್ಟ ಹಿಂದೂ ಸಂಘಟನೆಗಳು, ಹೆಲ್ಪ್‌ಲೈನ್ ಆರಂಭ
ಲವ್ ಜಿಹಾದ್ ವಿರುದ್ಧ ಜಾಗೃತಿ: ಹೆಲ್ಪ್‌ಲೈನ್ ಆರಂಭ
TV9 Web
| Edited By: |

Updated on: Jan 03, 2023 | 10:17 AM

Share

ಲವ್ ಜಿಹಾದ್ ಕರಾವಳಿಯಲ್ಲಿ (Coastal Karnataka) ಅತೀ ಹೆಚ್ಚು ಸೌಂಡ್ ಮಾಡಿರುವ, ಮಾಡುತ್ತಿರುವ ಪದ. ಹಲವು ಸಮಯಗಳಿಂದ ಈ ಲವ್ ಜಿಹಾದ್ (Love Jihad) ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹಿಂದೂ ಸಂಘಟನೆಗಳು (Hindu) ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಲವ್ ಜಿಹಾದ್ ತಡೆಗೆ ಹೆಲ್ಪ್‌ಲೈನ್ ಆರಂಭಿಸಿದೆ. ಹೆಲ್ಪ್‌ಲೈನ್ ನಂಬರ್‌ಗೆ (Love Jihad Helpline) ಈಗಾಗಲೇ ಸಾಕಷ್ಟು ಕರೆ ಬಂದಿದ್ದು ಯುವತಿಯರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್; ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ವಿ.ಎಚ್.ಪಿ: ಹೌದು..ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಆಗಾಗ ಲವ್ ಜಿಹಾದ್‌ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಖೆಡ್ಡಾಕೆ ಬೀಳಿಸಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಹಿಂದೂಪರ ಸಂಘಟನೆಗಳ ಹಲವು ಸಮಯಗಳ ಆರೋಪ.

ಈ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಇದೀಗ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ತಡೆಗೆ ಹೆಲ್ಪ್‌ಲೈನ್ ಆರಂಭಿಸಿದೆ. ಮನೆಯಲ್ಲಿ, ನೆರೆಹೊರೆಯಲ್ಲಿ, ಊರು ಹಳ್ಳಿಗಳಲ್ಲಿ ಲವ್‌ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ ಎಂದು ಎರಡು ವಾಟ್ಸಪ್ ಸಂಖ್ಯೆಯನ್ನು ನೀಡಲಾಗಿದೆ. ಇದರ ಜೊತೆ ಇ ಮೇಲ್ ಐಡಿಯನ್ನು ನೀಡಿದ್ದು ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ವಿ.ಎಚ್.ಪಿ ಮುಖಂಡ ಪ್ರದೀಪ್ ಸರಿಪಳ್ಳ ತಿಳಿಸಿದ್ದಾರೆ.

Also Read:

ಪ್ರತ್ಯೇಕ ಲವ್ ಜಿಹಾದ್ ವಿರೋಧಿ ಪೋಲೀಸ್ ಪಡೆ ರಚನೆಗೆ ಹಿಂದೂ ಸಂಘಟನೆಗಳ ಒತ್ತಾಯ

ಹಿಂದೂ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಿ ಲವ್ ಜಿಹಾದ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ನೂರಾರು ಹೆಣ್ಣು ಮಕ್ಕಳು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಒಳಗಾಗಿ ಜೀವವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಸಹೋದರಿಯರ ರಕ್ಷಣೆಗೆ ವಿ.ಎಚ್.ಪಿ ಸಿದ್ದ ಎಂದು ಹೇಳಿದೆ. ಈ ಹೆಲ್ಪ್ ಲೈನ್ ಗೆ ಚಾಲನೆ ನೀಡುತ್ತಿದ್ದಂತೆ ಸಂತ್ರಸ್ತರಿಂದ ಕರೆ, ಮೇಸೆಜ್‌ಗಳು ಬರೋದಕ್ಕೆ ಆರಂಭವಾಗಿದೆ.

ಹೀಗಾಗಿ ಅವರನ್ನು ಕಚೇರಿಗೆ ಕರೆಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಸಹಾಯವಾಣಿ ತಂಡದಲ್ಲಿ ಮನಃಶಾಸ್ತ್ರಜ್ಞರು, ವಕೀಲರು, ದುರ್ಗವಾಹಿನಿ ಸಂಘಟನೆಯ ಪ್ರಮುಖರು ಇದ್ದಾರೆ. ಪ್ರಕರಣದಲ್ಲಿ ಕಾನೂನು ನೆರವು ಬೇಕಿದ್ದರೆ ನೆರವು, ಕೌನ್ಸಿಲಿಂಗ್, ಧೈರ್ಯ ತುಂಬುವ ಕೆಲಸವನ್ನು ಸಹ ಮಾಡಲಾಗುತ್ತಿದೆ ಎನ್ನುತ್ತಾರೆ ಶ್ವೇತಾ, ಜಿಲ್ಲಾ ಸಂಚಾಲಕಿ-ದುರ್ಗವಾಹಿನಿ, ಮಂಗಳೂರು (Mangaluru) ಅವರು.

ಕೆಲ ಸಮಯದ ಹಿಂದೆ ಉಗ್ರರ ಜೊತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಉಳ್ಳಾಲದಲ್ಲಿ ಎನ್.ಐ.ಎ. ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಸಹ ಹಿಂದೂ ಧರ್ಮದಿಂದ ಮತಾಂತರಗೊಂಡವಳು. ಹೀಗಾಗಿ ದೆಹಲಿಯ ಶ್ರದ್ದಾ ಹತ್ಯೆ ಪ್ರಕರಣ ಸೇರಿದಂತೆ ಕರಾವಳಿಯಲ್ಲಿನ ಲವ್ ಜಿಹಾದ್ ಘಟನೆಗಳನ್ನು ಉದಾಹರಣೆಯಾಗಿರಿಸಿ ಹಿಂದೂ ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡುತ್ತಿವೆ. ಒಟ್ಟಿನಲ್ಲಿ ಈ ಲವ್‌ ಜಿಹಾದ್ ತಡೆ ಸಹಾಯವಾಣಿ ಯುವತಿಯರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂದು ಕಾದುನೋಡಬೇಕಿದೆ.

ವರದಿ: ಅಶೋಕ್, ಟಿವಿ 9, ಮಂಗಳೂರು

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್