ಪ್ರತ್ಯೇಕ ಲವ್ ಜಿಹಾದ್ ವಿರೋಧಿ ಪೋಲೀಸ್ ಪಡೆ ರಚನೆಗೆ ಹಿಂದೂ ಸಂಘಟನೆಗಳ ಒತ್ತಾಯ

ಉತ್ತರಪ್ರದೇಶ ಮಾದರಿಯಲ್ಲಿ ಪ್ರತ್ಯೇಕ ಲವ್ ಜಿಹಾದ್ ವಿರೋಧಿ ಪೋಲೀಸ್ ಪಡೆ ರಚನೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಮೋಹನ್ ಗೌಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರತ್ಯೇಕ ಲವ್ ಜಿಹಾದ್ ವಿರೋಧಿ ಪೋಲೀಸ್ ಪಡೆ ರಚನೆಗೆ ಹಿಂದೂ ಸಂಘಟನೆಗಳ ಒತ್ತಾಯ
ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಮೋಹನ್ ಗೌಡ
Follow us
| Updated By: ವಿವೇಕ ಬಿರಾದಾರ

Updated on:Dec 17, 2022 | 6:28 PM

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹಾಲಾಲ್​ ಕಟ್ (Halal Cut) ಅಭಿಯಾನ ಮತ್ತೆ ಮುನ್ನಲೆಗೆ ಬಂದಿದೆ. ಇದರ ಜೊತೆಗೆ ಇತ್ತೀಚಿಗೆ ಲವ್​ ಜಿಹಾದ್ (Love Jihad)​ ಪ್ರಕರಣಗಳು ಕೂಡ ವರದಿಯಾಗುತ್ತಿವೆ. ಈ ಕುರಿತು ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಮೋಹನ್ ಗೌಡ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಲವ್ ಜಿಹಾದ್ ಪ್ರಕರಣಗಳು ದಾಖಲಾಗುತ್ತಿವೆ. ಉತ್ತರಪ್ರದೇಶ ಮಾದರಿಯಲ್ಲಿ ಪ್ರತ್ಯೇಕ ಲವ್ ಜಿಹಾದ್ ವಿರೋಧಿ ಪೋಲೀಸ್ ಪಡೆ ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಹಾಲಾಲ್​ ಮತ್ತು ಲವ್​ ಜಿಹಾದ ವಿರುದ್ಧ ಇಂದು (ಡಿ.17) ಫ್ರೀಡಂಪಾರ್ಕ್​ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಈ ವೇಳೆ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಸಂಚಾಲಕ ಮೋಹನ್ ಗೌಡ ಮತಾಂತರ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತ್ರ್ಯೇಕ ಪೊಲೀಸ್​ ಪಡೆ ರಚನೆಗಾಗಿ ಸಚಿವರಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಡಿ.19ರಿಂದ ಮೂರು ದಿನ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ

ಚುನಾವಣೆ ಸಮಯದಲ್ಲಿ ಯಾರ್ಯಾರಿಗೆ ಮಣ್ಣು ಹಾಕಬೇಕು ಅನ್ನೋದು ನಮಗೆ ಗೊತ್ತು

ನಿಮಗೆ ವೋಟು ಹಾಕಿ ಅಧಿಕಾರಕ್ಕೆ ತಂದಿರೋದು ಹಿಂದೂ ಸಂಘಟನೆಗಳು. ಆದರೆ ಬೇರೆ ಧರ್ಮದ ಮೇಲೆ ಯಾಕಿಷ್ಟು ವಾತ್ಸಲ್ಯ? ಸಾಫ್ಟ್ ಹಿಂದುತ್ವ ಬೇಕಾಗಿಲ್ಲ. ಚುನಾವಣೆ ಸಮಯದಲ್ಲಿ ಯಾರ್ಯಾರಿಗೆ ಮಣ್ಣು ಹಾಕಬೇಕು ಅನ್ನೋದು ನಮಗೆ ಗೊತ್ತು ಎಂದು ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಭಾಸ್ಕರನ್​ ಎಚ್ಚರಿಕೆ ನೀಡಿದ್ದಾರೆ.

ಮೊದಲು ಜಿಹಾದಿ ಪೋರ್ಸ್​​​ಗಳನ್ನು ತಡೆಯಿರಿ. ಹಿಂದೂ ಹುಡುಗಿಯರ ಜೊತೆ ಸ್ನೇಹ ಬೆಳೆಸಿ ಬಲೆಗೆ ಕೆಡವಿಕೊಳ್ಳಲು ಮುಸ್ಲಿಂ ಯುವಕರ ಗ್ಯಾಂಗ್ ತಯಾರಾಗಿದೆ. ನಿರಂತರವಾಗಿ ಹಿಂದೂ ಯುವತಿಯರ ಬ್ರೈನ್ ವಾಷ್ ಮಾಡಲಾಗುತ್ತಿದೆ. ನಾವೇನಾದರು ತಡೆದರೇ ನೈತಿಕ ಪೊಲೀಸ್ ಗಿರಿ ಅಂತ ಆಗುತ್ತೆ. ಇದೆಲ್ಲವೂ ಬೇಡ‌ ಮೊದಲು ಲವ್ ಜಿಹಾದ್ ತಡೆಯಲು ಪೊಲೀಸ್ ಪಡೆ ತನ್ನಿ. ಇಲ್ಲದೆ ಇದ್ದರೇ ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ವಿರುದ್ಧವೇ ಕೆಲ್ಸ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಸಿನಿಮಾ ವೀಕ್ಷಿಸಿಲು ಬಂದಿದ್ದ ಅನ್ಯಕೋಮಿನ ಜೋಡಿಗೆ ಎದುರಾದ ಬಜರಂಗದಳ

ಹಾಲಾಲ್ ಸರ್ಟಿಫಿಕೇಟ್ ನಿಷೇಧ ಮಾಡಬೇಕು

ಚಳಿಗಾಲ ಅಧಿವೇಶ ನಡೆಯಲಿದೆ ಹೀಗಾಗಿ ನಮ್ಮ ಸಂಘಟನೆಯಿಂದ ಕೆಲ ಬೇಡಿಕೆ ಇಟ್ಟಿದ್ದೇವೆ. ಹಿಂದೂ ಯುವತಿಯರನ್ನು ಚಿತ್ರಹಿಂಸೆ ಕೊಟ್ಟು ಸಾಯಿಸಲಾಗುತ್ತಿದೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರು ಮೋಸ ಹೋಗುತ್ತಿದ್ದಾರೆ. ಮತಾಂತರ ತಡೆ ಕಾನೂನು ಅಡಿಯಲ್ಲಿ ಈವರೆಗೆ ಯಾರಿಗೂ ಶಿಕ್ಷೆ ನೀಡಿಲ್ಲ. ಯಾವ ಕಾರಣಕ್ಕೆ ಲವ್ ಜಿಹಾದ್ ನಡೆಯುತ್ತಿದೆ ಅಂತ ಅರಿಯಬೇಕು. ಹಾಲಾಲ್ ಸರ್ಟಿಫಿಕೇಟ್ ನಿಷೇಧ ಮಾಡಬೇಕು. ಇದರಿಂದ ಬರುವ ಹಣ ಭಯೋತ್ಪಾದನೆಗೆ ಬಳಕೆ ಆಗುತ್ತಿದೆ. ಹೀಗಾಗಿ ಒಂದು ಧರ್ಮಕ್ಕೆ ಸೀಮಿತವಾದ ಸರ್ಟಿಫಿಕೇಟ್ ಹಂಚಿಕೆ ನಿಲ್ಲಿಸಬೇಕು. ಗೃಹ ಸಚಿವರು ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಕು ಎಂದು ರಣ ರಾಗಿಣಿ ಬ್ರಿಗೇಡ್​ನ ಭವ್ಯ ಗೌಡ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Sat, 17 December 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ