ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಸಿನಿಮಾ ವೀಕ್ಷಿಸಿಲು ಬಂದಿದ್ದ ಅನ್ಯಕೋಮಿನ ಜೋಡಿಗೆ ಎದುರಾದ ಬಜರಂಗದಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಜರಂಗದಳದ ಕಾರ್ಯಕರ್ತರು ಸಕ್ರಿಯರಾಗಿದ್ದು, ಮುಸ್ಲಿಂ ಯುವಕರೊಂದಿಗೆ ಹೋಗುವ ಹಿಂದೂ ಯುವತಿಯರನ್ನು ತಡೆದು ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಅಲ್ಲದೆ ಸಾಫ್ಟ್ ಹಿಂದುತ್ವ ಬಿಡುವಂತೆ ವಿಶ್ವ ಸನಾತನ ಪರಿಷತ್ ಅಧ್ಯಕ್ಷರು ಹೇಳಿದ್ದಾರೆ.

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಸಿನಿಮಾ ವೀಕ್ಷಿಸಿಲು ಬಂದಿದ್ದ ಅನ್ಯಕೋಮಿನ ಜೋಡಿಗೆ ಎದುರಾದ ಬಜರಂಗದಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Dec 17, 2022 | 12:48 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನೈತಿಕ ಪೊಲೀಸ್​ಗಿರಿ (Moral policing) ನಡೆಯುತ್ತಿದೆ. ಸಿನಿಮಾ ವೀಕ್ಷಿಸಿಲು ಬಂದಿದ್ದ ಅನ್ಯಕೋಮಿನ ಜೋಡಿಗೆ ಎದುರಾದ ಬಜರಂಗದಳದ (Bajrang Dal) ಕಾರ್ಯಕರ್ತರು ಪ್ರಶ್ನಿಸಿದ ಘಟನೆ ಮಂಗಳೂರಿನ ಬಿಜೈ ಬಳಿಯ ಭಾರತ್ ಚಿತ್ರಮಂದಿರ (Bharat Theatre) ಬಳಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಉರ್ವಾ ಠಾಣಾ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಯುವಕ-ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಟ್ಟು ಕಳುಹಿಸಿದ್ದಾರೆ. ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿಶ್ವ ಸನಾತನ ಪರಿಷತ್ ಆಗ್ರಹಿಸಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಹೆಚ್ಚಾದ ನೈತಿಕ ಪೊಲೀಸ್ ಗಿರಿ: ಹಿಂದೂ ಯುವತಿ- ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್ ತಡೆದು ಭಜರಂಗದಳ ಕಾರ್ಯಕರ್ತರ ಗಲಾಟೆ

ಬಿಜೆಪಿಯ ಸಾಫ್ಟ್ ಹಿಂದುತ್ವದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಭಾಸ್ಕರನ್, ನಿಮಗೆ ವೋಟು ಹಾಕಿ ಅಧಿಕಾರಕ್ಕೆ ತಂದಿರೋದು ಹಿಂದೂ ಸಂಘಟನೆಗಳು. ಆದರೆ ಬೇರೆ ಧರ್ಮದ ಮೇಲೆ ಯಾಕೆ ಇಷ್ಟೊಂದು ವಾತ್ಸಲ್ಯ ಎಂದು ಪ್ರಶ್ನಿಸಿದರು. ಅಲ್ಲದೆ, ಚುನಾವಣೆ ಸಮಯದಲ್ಲಿ ಯಾರಿಗೆ ಮಣ್ಣು ಹಾಗಬೇಕು ಅನ್ನೋದು ನಮಗೆ ಗೊತ್ತು. ಸಾಫ್ಟ್ ಹಿಂದುತ್ವ ಬೇಕಾಗಿಲ್ಲ. ಮೊದಲು ಜಿಹಾದಿ ಪೋರ್ಸ್​​ಗಳನ್ನು ತಡೆಯಿರಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: Moral Policing: ಕಾಂತಾರ ವೀಕ್ಷಿಸಲು ಥಿಯೇಟರ್​ಗೆ ಬಂದ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್​ಗಿರಿ, ಹಲ್ಲೆಗೆ ಯತ್ನಿಸಿದ್ದ ವಿಡಿಯೊ ವೈರಲ್

ಹಿಂದೂ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ಬಲೆಗೆ ಕೆಡವಿಕೊಳ್ಳಲು ಮುಸ್ಲಿಂ ಯುವಕರ ಗ್ಯಾಂಗ್ ತಯಾರಿಸಲಾಗಿದೆ. ನಿರಂತರವಾಗಿ ಹಿಂದೂ ಯುವತಿಯರ ಬ್ರೈನ್ ವಾಷ್ ಮಾಡಲಾಗುತ್ತಿದೆ. ನಾವೇನಾದರು ಅವರನ್ನು ತಡೆದರೆ ನೈತಿಕ ಪೊಲೀಸ್ ಗಿರಿ ಅಂತಾ ಆಗುತ್ತದೆ. ಇದೆಲ್ಲವೂ ಬೇಡ‌ ಮೊದಲು ಲವ್ ಜಿಹಾದ್ ತಡೆಯಲು ಪೊಲೀಸ್ ಪಡೆ ತನ್ನಿ. ಇಲ್ಲದೇ ಇದ್ದರೆ ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ವಿರುದ್ಧವೇ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Sat, 17 December 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್