Dr D Veerendra Heggade: ಬಹುನಿರೀಕ್ಷಿತ ‘ವೀರ ಕಂಬಳ’ ಚಿತ್ರದಲ್ಲಿ ನಟಿಸಿದ ಡಾ. ವೀರೇಂದ್ರ ಹೆಗ್ಗಡೆ; ಪಾತ್ರದ ಬಗ್ಗೆ ಇಲ್ಲಿದೆ ಮಾಹಿತಿ

Dr D Veerendra Heggade in Veera Kambala Movie: ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸಿನಿಮಾ ಪ್ರೀತಿ ಹೊಸತಲ್ಲ. ಡಾ. ರಾಜ್​ಕುಮಾರ್ ಅಭಿನಯದ ‘ಶ್ರಾವಣ ಬಂತು’ ಸಿನಿಮಾದಲ್ಲೂ ಕೂಡ ಡಾ. ವೀರೇಂದ್ರ ಹೆಗ್ಗಡೆಯವರು ಕಾಣಿಸಿಕೊಂಡಿದ್ದರು. ಅದರ ಶೂಟಿಂಗ್​ ಕೂಡ ಧರ್ಮಸ್ಥಳದಲ್ಲಿ ನಡೆದಿತ್ತು.

Dr D Veerendra Heggade: ಬಹುನಿರೀಕ್ಷಿತ ‘ವೀರ ಕಂಬಳ’ ಚಿತ್ರದಲ್ಲಿ ನಟಿಸಿದ ಡಾ. ವೀರೇಂದ್ರ ಹೆಗ್ಗಡೆ; ಪಾತ್ರದ ಬಗ್ಗೆ ಇಲ್ಲಿದೆ ಮಾಹಿತಿ
‘ವೀರ ಕಂಬಳ’ ಚಿತ್ರದಲ್ಲಿ ವೀರೇಂದ್ರ ಹೆಗ್ಗಡೆ ನಟನೆ
Follow us
TV9 Web
| Updated By: ಮದನ್​ ಕುಮಾರ್​

Updated on: Jan 03, 2023 | 9:21 PM

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆ (Veerendra Heggade) ಅವರು  ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಮಾತ್ರವಲ್ಲ ಅವರ ತಮ್ಮ ಹರ್ಷೇಂದ್ರ ಹೆಗ್ಗಡೆ ಅವರು ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು (SV Rajendra Singh Babu) ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ವೀರ ಕಂಬಳ’ ಸಿನಿಮಾದಲ್ಲಿ ಹೆಗ್ಗಡೆಯವರು ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವ ಫೋಟೋ ಫುಲ್ ವೈರಲ್ ಆಗಿದೆ. ಅರುಣ್ ರೈ ತೋಡಾರ್ ನಿರ್ಮಾಣದಲ್ಲಿ ‘ವೀರ ಕಂಬಳ’ (Veera Kambala Movie) ಸಿನಿಮಾ ಮೂಡಿಬರುತ್ತಿದೆ. ಕಂಬಳದ ಕೋಣ ಓಡಿಸುವುದರಲ್ಲಿ ಪರಿಣಿತರಾಗಿರುವ ಶ್ರೀನಿವಾಸ್ ಗೌಡ ಹಾಗೂ ರಂಗಭೂಮಿ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತುಳುನಾಡಿನ ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಗೆ ಪ್ರಕಾಶ್ ರಾಜ್, ಆರ್ಮುಗ ರವಿಶಂಕರ್ ಮುಖ್ಯ ಪಾತ್ರದಲ್ಲಿ‌ ನಟಿಸುತ್ತಿದ್ದಾರೆ. ಸುಮಾರು 7 ವರ್ಷಗಳ ಕಾಲ ಸಂಶೋಧನೆ ನಡೆಸಿ ನಿರ್ಮಿಸಲಾಗುತ್ತಿರುವ ‘ವೀರ ಕಂಬಳ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಕಂಬಳವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಸಿನಿಮಾ ತಯಾರಾಗುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಹಾಗೂ ತುಳು ಭಾಷೆಗಳಲ್ಲಿಯೂ ತೆರೆಗೆ ಬರಲಿದೆ. ತುಳು ಭಾಷೆಯಲ್ಲಿ ‘ಬಿರ್ದ್‌ದ ಕಂಬಳ’ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: ‘ಅವರು ಸಿನಿಮಾ ನೋಡಿದ್ರೆ, ದೇವರೇ ಸಿನಿಮಾ ನೋಡಿದಷ್ಟು ಖುಷಿ ಆಗುತ್ತೆ’; ವೀರೇಂದ್ರ ಹೆಗ್ಗಡೆ ಬಗ್ಗೆ ಪ್ರಗತಿ ಶೆಟ್ಟಿ ಮಾತು

ಇದನ್ನೂ ಓದಿ
Image
Veera Kambala: ‘ವೀರ ಕಂಬಳ’ ಸಿನಿಮಾದಲ್ಲಿ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ; ಯಾವ ಪಾತ್ರ
Image
Kantara: ‘ಕಾಂತಾರ 2’ ಚಿತ್ರಕ್ಕೆ ವೀರೇಂದ್ರ ಹೆಗ್ಗಡೆಯವರ ಅನುಮತಿಯೂ ಬೇಕು ಎಂದ ದೈವ
Image
‘ಅವರು ಸಿನಿಮಾ ನೋಡಿದ್ರೆ, ದೇವರೇ ಸಿನಿಮಾ ನೋಡಿದಷ್ಟು ಖುಷಿ ಆಗುತ್ತೆ’; ವೀರೇಂದ್ರ ಹೆಗ್ಗಡೆ ಬಗ್ಗೆ ಪ್ರಗತಿ ಶೆಟ್ಟಿ ಮಾತು
Image
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು

ಕಂಬಳದ ಜಗಳದ ಸಂಧಾನಕಾರರಾಗಿ ಹೆಗ್ಗಡೆ:

ಕಂಬಳ ಸಿನಿಮಾದಲ್ಲಿ ಹೆಗ್ಗಡೆಯವರು ಕಾಣಿಸಿಕೊಂಡಿರುವ ದೃಶ್ಯಗಳನ್ನು ಧರ್ಮಸ್ಥಳ ಮತ್ತು ಬೆಳ್ತಂಗಡಿ ತಾಲೂಕಿನ ಕೆಲ ಕಂಬಳದ ಗದ್ದೆಗಳಲ್ಲಿ ಚಿತ್ರಿಕರಣ ಮಾಡಲಾಗಿದೆ. ಕಂಬಳ ನಡೆಯುವಾಗ ಗಲಾಟೆ ನಡೆದು ವ್ಯಾಜ್ಯ ಬಂದಾಗ ಅದನ್ನು ಬಗೆಹರಿಸುವ ಪಾತ್ರ ಅಂತ ಹೇಳಲಾಗುತ್ತಿದೆ.

1984ರಲ್ಲೂ ನಟಿಸಿದ್ದ ಡಾ. ವೀರೇಂದ್ರ ಹೆಗ್ಗಡೆ‌:

1984ರಲ್ಲಿ ತೆರೆಕಂಡ ಡಾ. ರಾಜ್​ಕುಮಾರ್ ಅಭಿನಯದ ‘ಶ್ರಾವಣ ಬಂತು’ ಸಿನಿಮಾದಲ್ಲಿ ಡಾ. ವೀರೇಂದ್ರ ಹೆಗ್ಗಡೆ‌ ಕಾಣಿಸಿಕೊಂಡಿದ್ದರು. ಅಂದಿನ ಕಾಲಕ್ಕೆ ಸೂಪರ್ ಡೂಪರ್ ಹಿಟ್ ಆಗಿದ್ದ ಆ ಸಿನಿಮಾದ ಚಿತ್ರೀಕರಣ ಧರ್ಮಸ್ಥಳದಲ್ಲಿ ನಡೆದಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ಚಿತ್ರವಾಗಿತ್ತು. ಶ್ರೀನಾಥ್ ಕೂಡ ಪಾತ್ರವರ್ಗದಲ್ಲಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಈ ಚಿತ್ರೀಕರಣ ಮಾಡಲಾಗಿತ್ತು. ಅಂದು ಹೆಗ್ಗಡೆಯವರು ಕುಟುಂಬ ಸಮೇತ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Kantara: ‘ಕಾಂತಾರ 2’ ಚಿತ್ರಕ್ಕೆ ವೀರೇಂದ್ರ ಹೆಗ್ಗಡೆಯವರ ಅನುಮತಿಯೂ ಬೇಕು ಎಂದ ದೈವ

ಚಿತ್ರ ಪ್ರೇಮಿ ಹೆಗ್ಗಡೆ:

ಡಾ. ವೀರೇಂದ್ರ ಹೆಗ್ಡೆ ಅವರು ವಿಶೇಷವಾದ ಚಿತ್ರ ಪ್ರೇಮಿ. ಸ್ವಯಂ ಅವರೇ ಉತ್ತಮ ಫೋಟೋಗ್ರಾಫರ್. ಇತ್ತೀಚಿಗೆ ‘ಕಾಂತಾರ’ ಸಿನಿಮಾವನ್ನು ಕೂಡ ಮಂಗಳೂರಿನ ಚಿತ್ರಮಂದಿರದಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸಿದ್ದರು.

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಬಳಿಕ ರಾಜಕೀಯ ರಂಗಕ್ಕೆ ಆಗಮಿಸಿದ್ದ ಹೆಗ್ಗಡೆಯವರು, ಈಗ ಪಂಚಭಾಷ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷವಾಗಿದೆ. ಈ ಸಿನಿಮಾ ಬರಲಿರುವ ಚುನಾವಣೆ ಮುಗಿದ ಬಳಿಕ ತೆರೆಗೆ ಬರಲಿದ್ದು ಜನರಲ್ಲಿ ಬಹಳ ಕುತೂಹಲ ಮೂಡಿಸಿದೆ. ಅತಿಥಿ ಪಾತ್ರದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಕುಟುಂಬ ಕೂಡ ಕಾಣಿಸಿಕೊಂಡಿದೆ. ದೃಶ್ಯ ಟಿವಿ9 ಡಿಜಿಟಲ್​ಗೆ ಲಭ್ಯವಾಗಿದೆ.

ಪೃಥ್ವಿರಾಜ್ ಬೊಮನಕೆರೆ, ಟಿವಿ9 ಮಂಗಳೂರು

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.