ನಟ ಶರಣ್ (Sharan) ಅವರು ‘ಛೂ ಮಂತರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ‘ಕರ್ವ’ ಖ್ಯಾತಿಯ ನವನೀತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಯಾವಾಗಲೂ ಕಾಮಿಡಿ ಮಾಡುವ ಶರಣ್ ಅವರು ‘ಛೂ ಮಂತರ್’ (Choo Mantar) ಮೂಲಕ ಹಾರರ್ ಕಥಾವಸ್ತು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅನೇಕ ವಿಶೇಷತೆಗಳು ಇವೆ ಎಂದು ಅವರು ಹೇಳಿದ್ದಾರೆ. ಶರಣ್ ಜೊತೆ ಚಿಕ್ಕಣ್ಣ (Chikkanna) ಕೂಡ ನಟಿಸಿರುವುದು ನಿರೀಕ್ಷೆ ಹೆಚ್ಚಿಸಲು ಕಾರಣ ಆಗಿದೆ. ಆ ಬಗ್ಗೆ ಶರಣ್ ಅವರು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.