Siddeshwar Swamiji: ಸಂತನೆಂದರೆ ಯಾರು ಹಾಡು ವೈರಲ್, ಸಿದ್ದೇಶ್ವರ ಶ್ರೀಗಾಗಿಯೇ ಬರೆದಿದ್ದ ಸಾಹಿತಿ ಯಾರು ಗೊತ್ತಾ? ಸ್ವಾಮೀಜಿ ಸಾಹಿತಿಗೂ ಇತ್ತು ಒಡನಾಟ

Siddeshwar Swamiji: ಸಂತನೆಂದರೆ ಯಾರು ಹಾಡು ವೈರಲ್, ಸಿದ್ದೇಶ್ವರ ಶ್ರೀಗಾಗಿಯೇ ಬರೆದಿದ್ದ ಸಾಹಿತಿ ಯಾರು ಗೊತ್ತಾ? ಸ್ವಾಮೀಜಿ ಸಾಹಿತಿಗೂ ಇತ್ತು ಒಡನಾಟ

TV9 Web
| Updated By: ವಿವೇಕ ಬಿರಾದಾರ

Updated on:Jan 03, 2023 | 11:56 PM

ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯರಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸಂತನೆಂದರೆ ಯಾರು ಹಾಡು ಬರೆದವರು ಯಾರು ಗೊತ್ತಾ?

ಮೈಸೂರು: ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯರಾದ ಮೇಲೆ ಶ್ರೀಗಳ ಭಾವಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತನೆಂದರೆ ಯಾರು ಹಾಡು ವೈರಲ್ ಆಗಿತ್ತು. ಅಷ್ಟಕ್ಕು ಈ ಹಾಡನ್ನು ಬರೆದವರು ಯಾರು? ಇಲ್ಲಿದೆ ಉತ್ತರ. ಸಂತನೆಂದರೆ ಯಾರು, ದಿವ್ಯತೆಯ ಅರಿತವನು, ಸರಳತೆಯ ಸೂತ್ರದಲಿ ಸುಖವ ಕಂಡವನು ಎಂಬ ಹಾಡು ಸಾಕಷ್ಟು ವೈರಲ್​ ಆಗಿತ್ತು. ಈ ಹಾಡು ಸಿದ್ದೇಶ್ವರ ಶ್ರೀಗಳಿಗೆ ಒಪ್ಪುವಂತಹ ಹಾಡು. ಸುಂದರವಾದ ಸಾಹಿತ್ಯವನ್ನು ಹೊಂದಿರುವ ಈ ಹಾಡನ್ನು ಬರೆದವರು ಮೈಸೂರಿನ ಸಾಹಿತಿ ಕೆ ಸಿ ಶಿವಪ್ಪ. 2002ರಲ್ಲಿ ಬರೆದಿದ್ದ ಹಾಡು ಈಗ ವೈರಲ್ ಆಗಿತ್ತಿದೆ.

ಸಾಹಿತಿ ಶಿವಪ್ಪ ಪ್ರೇಮ ಕವಿಯಾಗಿದ್ದರು. ನಂತರ ಇವರು ಸಿದ್ದೇಶ್ವರ ಶ್ರೀಗಳ ಒಡನಾಟಕ್ಕೆ ಬಂದರು. ಶ್ರೀಗಳ ಪರಿಚಯದ ನಂತರ ಶಿವಪ್ಪ ಸಂಪೂರ್ಣ ಬದಲಾದರು. ಪ್ರೇಮಕವಿಯಾಗಿದ್ದ ಸಾಹಿತಿ ಶಿವಪ್ಪ ಆಧ್ಯಾತ್ಮಕದ ಕಡೆಗೆ ಒಲವು ಬೆಳಸಿಕೊಂಡರು. ಹೀಗೆ ಶ್ರೀಗಳೊಂದಿಗೆ ಕಳೆದ 25 ವರ್ಷಗಳಿಂದ ಒಡನಾಟದಲ್ಲಿದ್ದರು. ಸಾಹಿತಿ ಶಿವಪ್ಪ ದೇಶ ವಿದೇಶಗಳಲ್ಲಿ ಅವರ ಜೊತೆ ಪ್ರವಚನದಲ್ಲಿ ಭಾಗಿಯಾಗಿದ್ದರು.

ಶ್ರೀ ಸಿದ್ದೇಶ್ವರ ಶ್ರೀಗಳಿಗಾಗಿ ಬರೆದ ಹಾಡು

ಹೌದು ಪ್ರೇಮಕವಿಯಾಗಿದ್ದ ಸಾಹಿತಿ ಶಿವಪ್ಪ ಶ್ರೀಗಳ ಒಡನಾಟಕ್ಕೆ ಬಂದ ನಂತರ ಶ್ರೀಗಳಿಗಾಗಿ ಸಂತನೆಂದರೆ ಯಾರು ಎಂದು ಹಾಡನ್ನು ಬರೆದರು. ಶಿವಪ್ಪ ಅದರ ಹಸ್ತಪ್ರತಿಯನ್ನು ಈಗಲೂ ಇಟ್ಟುಕೊಂಡಿದ್ದಾರೆ. ಈ ಹಾಡನ್ನು ಸಾಹಿತಿ ಶಿವಪ್ಪ 10 ದಿನದ ಹಿಂದೆ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಕೇಳಿಸಿದ್ದರು. ಸಂತನೆಂದರೆ ಯಾರು ? ಹಾಡು ಕೇಳಿದ ಸಿದ್ದೇಶ್ವರ ಶ್ರೀಗಳು, ಮಾತನಾಡಲು ಆಗದೆ ಸನ್ನೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತದನಂತರ ಸಾಹಿತಿ ಶಿವಪ್ಪ ಶ್ರೀಗಳ ಮುಂದೆ ಕಣ್ಣೀರಾಕಿದ್ದರು.

ನಂತರ ಸಾಹಿತಿ ಶಿವಪ್ಪ 30 ಸಾವಿರಕ್ಕೂ ಹೆಚ್ಚು ಚೌಪದಿ ಬರೆದಿದ್ದಾರೆ. ಇದೀಗ ಸಿದ್ದೇಶ್ವರ ಶ್ರೀಗಳ ಅಗಲಿಕೆ ಕಂಡು ತೀರ್ವ ದುಃಖಿತರಾಗಿದ್ದಾರೆ.

Published on: Jan 03, 2023 08:32 PM