AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veera Kambala: ‘ವೀರ ಕಂಬಳ’ ಸಿನಿಮಾದಲ್ಲಿ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ; ಯಾವ ಪಾತ್ರ

ಡಾ.ವೀರೇಂದ್ರ ಹೆಗ್ಗಡೆ ಅವರು ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಚಿತ್ರತಂಡದವರು ಅಧಿಕೃತ ಮಾಡಿದ್ದಾರೆ. ಈ ವಿಚಾರ ಕೇಳಿ ಸಿನಿಪ್ರಿಯರು​ ಖುಷಿಪಟ್ಟಿದ್ದಾರೆ. 

Veera Kambala: ‘ವೀರ ಕಂಬಳ’ ಸಿನಿಮಾದಲ್ಲಿ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ; ಯಾವ ಪಾತ್ರ
ಡಾ.ವೀರೇಂದ್ರ ಹೆಗ್ಗಡೆ
TV9 Web
| Edited By: |

Updated on: Jan 03, 2023 | 1:08 PM

Share

ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್ ಬಾಬು (S. V. Rajendra Singh Babu ) ಅವರು ‘ವೀರ ಕಂಬಳ’ ಸಿನಿಮಾ (Veera Kambala) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ರವಿಶಂಕರ್​ ಸೇರಿ ಅನೇಕ ಅನುಭವಿ ಕಲಾವಿದರು ನಟಿಸುತ್ತಿದ್ದಾರೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಬಗ್ಗೆ ಈ ಸಿನಿಮಾ ಇದೆ. ಈ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕೂಡ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಮೇಕಪ್​ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಾ. ವೀರೇಂದ್ರ ಹೆಗ್ಗಡೆ ಅವರು ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಚಿತ್ರತಂಡದವರು ಅಧಿಕೃತ ಮಾಡಿದ್ದಾರೆ. ಈ ವಿಚಾರ ಕೇಳಿ ಸಿನಿಪ್ರಿಯರು​ ಖುಷಿಪಟ್ಟಿದ್ದಾರೆ.  ತುಳುನಾಡಿನ ಸಂಸ್ಕೃತಿಯ ಏಳ್ಗೆಗೆ ಡಾ.ವೀರೇಂದ್ರ ಹೆಗ್ಗಡೆಯವರು ಶ್ರಮಿಸುತ್ತಲೇ ಬಂದಿದ್ದಾರೆ. ‘ವೀರ ಕಂಬಳ’ ಕೂಡ ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.

ಡಾ.ವೀರೇಂದ್ರ ಹೆಗ್ಗಡೆಯವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎಂಬ ಬಗ್ಗೆ ಚಿತ್ರತಂಡದಿಂದ ಮಾಹಿತಿ ಲಭ್ಯವಾಗಿಲ್ಲ. ಸಿನಿಮಾ ತುಳುನಾಡಿಗೆ ಸಂಬಂಧಿಸಿದ್ದಾಗಿದ್ದರಿಂದ ಅವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿಯೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಸಿನಿಮಾ

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದಿಂದ ತುಳು ನಾಡಿನ ಸಂಸ್ಕೃತಿ ಜಗತ್ತಿಗೆ ಪರಿಚಯ ಆಗಿದೆ. ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿ ಸಿನಿಮಾ ಬರುತ್ತದೆ ಎಂದಾದರೆ ಹೊರ ಜಗತ್ತಿಗೆ ಒಂದು ಕುತೂಹಲ ಇದ್ದೇ ಇರುತ್ತದೆ. ‘ವೀರ ಕಂಬಳ’ ಕೂಡ ತುಳು, ಕನ್ನಡ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಮೂಲಕ ಹೆಚ್ಚು ಜನರಿಗೆ ಸಿನಿಮಾ ತಲುಪಲಿದೆ.

ದೊಡ್ಡ ತಾರಾ ಬಳಗ

‘ವೀರ ಕಂಬಳ’ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ. ಪ್ರಕಾಶ್‌ ರಾಜ್​, ರವಿಶಂಕರ್‌ ಕೋರ್ಟ್​​​ನಲ್ಲಿ ಕರಿ ಕೋಟ್ ಹಾಕಿ ನಿಂತಿರುವ ಫೋಟೋ ಈ ಮೊದಲು ವೈರಲ್ ಆಗಿತ್ತು. ಕಂಬಳ ಓಟಗಾರ ಶ್ರೀನಿವಾಸ್‌ ಗೌಡ, ‘ಕಾಂತಾರ’ ಚಿತ್ರದಲ್ಲಿ ಗುರುವ ಪಾತ್ರ ಮಾಡಿದ್ದ ಸ್ವರಾಜ್‌ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ತುಳುವಿನಲ್ಲಿ ಈ ಚಿತ್ರಕ್ಕೆ ‘ಬಿರ್ದ್​ದ ಕಂಬುಲ’ ಎಂದು ಹೆಸರು ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ