Beach Cleaning Campaign: ಹೊಸವರ್ಷವನ್ನು ಅರ್ಥಪೂರ್ಣವಾಗಿ ಸ್ವಾಗತಿಸಿದ ವಿದ್ಯಾರ್ಥಿಗಳು

ಸ್ಟೂಡೆಂಟ್ಸ್ ಫಾರ್ ಡೆವಲಪ್‌ಮೆಂಟ್ ಮಂಗಳೂರು ಸದಸ್ಯರು ಭಾನುವಾರ 2023ರ ಆಗಮನವನ್ನು ಅರ್ಥಪೂರ್ಣವಾಗಿ ಸ್ವಾಗತಿಸಿದರು. ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ವಿದ್ಯಾರ್ಥಿ ಸಂಘಟನೆಯು ಭಾನುವಾರದಂದು ಮಂಗಳೂರಿನ ತಣ್ಣೀರ್ ಬಾವಿ ಬೀಚ್‌ನಲ್ಲಿ ಬೀಚ್ ಸ್ವಚ್ಛತಾ ಅಭಿಯಾನವನ್ನು ನಡೆಸಿತು.

Beach Cleaning Campaign: ಹೊಸವರ್ಷವನ್ನು ಅರ್ಥಪೂರ್ಣವಾಗಿ ಸ್ವಾಗತಿಸಿದ ವಿದ್ಯಾರ್ಥಿಗಳು
Beach Cleaning CampaignImage Credit source: TV9 kannada
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 02, 2023 | 12:16 PM

ಬಂಟ್ವಾಳ: ಸ್ಟೂಡೆಂಟ್ಸ್ ಫಾರ್ ಡೆವಲಪ್‌ಮೆಂಟ್ (SFD) ಮಂಗಳೂರು ಸದಸ್ಯರು ಭಾನುವಾರ 2023ರ ಆಗಮನವನ್ನು ಅರ್ಥಪೂರ್ಣವಾಗಿ ಸ್ವಾಗತಿಸಿದರು. ಮಂಗಳೂರು ಮಹಾನಗರ ಪಾಲಿಕೆ (MCC) ಸಹಯೋಗದಲ್ಲಿ ವಿದ್ಯಾರ್ಥಿ ಸಂಘಟನೆಯು 01/01/2023 (ಭಾನುವಾರ) ರಂದು ಮಂಗಳೂರಿನ ತಣ್ಣೀರ್ ಬಾವಿ ಬೀಚ್‌ನಲ್ಲಿ ಬೀಚ್ ಸ್ವಚ್ಛತಾ ಅಭಿಯಾನವನ್ನು ನಡೆಸಿತು. ನಗರದ ವಿವಿಧ ಕಾಲೇಜುಗಳ SFDಯ 100ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಬಾವಿ ಬೀಚ್‌ನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು. ಈ ಕಾರ್ಯದಲ್ಲಿ MCCಯ ನೌಕರರು ಕೂಡ ಸೇರಿಕೊಂಡರು.

ಬೆಳಗ್ಗೆ 9 ಗಂಟೆಗೆ ಸ್ವಚ್ಛತಾ ಅಭಿಯಾನ ಆರಂಭಗೊಂಡಿದ್ದು, ಮಧ್ಯಾಹ್ನ 12 ಗಂಟೆಯವರೆಗೆ 3 ಕಿಲೋ. ಗೋಣಿ ಚೀಲಗಳಂತೆ ಸುಮಾರು 30 ಜನರಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ ಸ್ವಚ್ಛ ಕಾರ್ಯದಲ್ಲಿ ತೋಡಗಿಕೊಂಡಿದ್ದಾರೆ. ಪ್ರತಿ ಗುಂಪಿಗೆ ನಿರ್ದಿಷ್ಟ ಕಸಗಳನ್ನು ಸಂಗ್ರಹಿಸುವ ಕಾರ್ಯವನ್ನು ನೀಡಲಾಯಿತು. ಒಂದು ಗುಂಪು ಗಾಜು ಮತ್ತು ಇತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಿದರೆ, ಇತರ ಗುಂಪುಗಳಿಗೆ ಪ್ಲಾಸ್ಟಿಕ್ ಮತ್ತು ಇತರ ಮರುಬಳಕೆ ಮಾಡಲಾಗದ ವಸ್ತುಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ನೀಡಲಾಯಿತು.

ಇದನ್ನು ಓದಿ: ಸುಳ್ಯದಲ್ಲಿ ಗುಂಡಿ ತೋಡುವಾಗ ಪತ್ತೆಯಾಯ್ತು ಪುರಾತನ ಕಾಲದ ಗುಹೆ

ಮಂಗಳೂರು ಮಹಾನಗರ ಪಾಲಿಕೆಯಿಂದ ಸ್ವಚ್ಛಗೊಳಿಸಿದ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಆಂಟೋನಿ ತ್ಯಾಜ್ಯ ನಿರ್ವಹಣಾ ಕೋಶದಿಂದ ಕಸ ಸಂಗ್ರಹಿಸುವ ವಾಹನಗಳು ತ್ಯಾಜ್ಯವನ್ನು ಹೆಚ್ಚಿನ ಸಂಸ್ಕರಣೆ ಮಾಡಲಾಗಿತ್ತು.

ವಿಭಾಗ ಸಂಚಾಲಕ ನಿಶಾನ್ ಆಳ್ವಾ ಕಾವೂರು, ಎಸ್‌ಎಫ್‌ಡಿ ಪ್ರಮುಖ್ ನಿಶ್ಚಿತ್ ಬಂಟ್ವಾಳ, ಎಬಿವಿಪಿ ಮಂಗಳೂರು ತಾಲೂಕು ಸಂಚಾಲಕ್ ಆದರ್ಶ್ ಉಪ್ಪಾರ್, ಎಬಿವಿಪಿ ಮಂಗಳೂರು ಪ್ರಮುಖರಾದ ಸ್ಕಂದ ಕಿರಣ್, ಭವನೀಶ್ ಶೆಟ್ಟಿ, ಅಭಿನಯ ಸೇರಿದಂತೆ ಎಸ್‌ಎಫ್‌ಡಿ ಮಂಗಳೂರು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ವರದಿ: ನಿಶ್ಚಿತ್ ಬಂಟ್ವಾಳ

ಫೋಟೋ: ಕಿರಣ್ ಕುಮಾರ್ ವಿ

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Mon, 2 January 23