AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಯುರೇನಿಯಂ ಪ್ಯಾಕೇಜ್ ನಮ್ಮದಲ್ಲ ಎಂದ ಪಾಕಿಸ್ತಾನ

ಈ ಬಗ್ಗೆ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಅಧಿಕೃತವಾಗಿ ಹಂಚಿಕೊಂಡಿಲ್ಲ. ವರದಿಗಳು ವಾಸ್ತವಿಕವಾಗಿಲ್ಲ ಎಂದು ನಮಗೆ ವಿಶ್ವಾಸವಿದೆ" ಎಂದು ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಹೇಳಿರುವುದಾಗಿ ಗುರುವಾರ ಡಾನ್ ಪತ್ರಿಕೆ ವರದಿ ಮಾಡಿದೆ

ಲಂಡನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಯುರೇನಿಯಂ ಪ್ಯಾಕೇಜ್ ನಮ್ಮದಲ್ಲ ಎಂದ ಪಾಕಿಸ್ತಾನ
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 12, 2023 | 4:02 PM

Share

ಇಸ್ಲಾಮಾಬಾದ್: ಕಳೆದ ತಿಂಗಳು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ (Heathrow Airport )ಬಂದಿಳಿದ ಯುರೇನಿಯಂ ಮಿಶ್ರಿತ ಸರಕು ಪ್ಯಾಕೇಜ್ ಕರಾಚಿಯಿಂದ ಬಂದಿದ್ದು ಎಂಬ ಬ್ರಿಟಿಷ್ ಮಾಧ್ಯಮಗಳಲ್ಲಿನ ವರದಿಗಳನ್ನು ಪಾಕಿಸ್ತಾನ (Pakistan)  ತಳ್ಳಿಹಾಕಿದ್ದು, ಸುದ್ದಿ ನಿಜವಲ್ಲ ಎಂದು ಹೇಳಿದೆ.ಕಳೆದ ತಿಂಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯುರೇನಿಯಂನಿಂದ (uranium) ಕಲುಷಿತಗೊಂಡ ಸರಕುಗಳನ್ನು ಗಡಿ ಅಧಿಕಾರಿಗಳು ವಶಪಡಿಸಿಕೊಂಡ ನಂತರ ಬ್ರಿಟಿಷ್ ಭಯೋತ್ಪಾದನಾ ನಿಗ್ರಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಬಿಸಿ ಬುಧವಾರ ವರದಿ ಮಾಡಿದೆ.ಈ ಸುದ್ದಿಯನ್ನು ಮೊದಲು ವರದಿ ಮಾಡಿದ ಸನ್ ಪತ್ರಿಕೆ, ಯುರೇನಿಯಂ ಪಾಕಿಸ್ತಾನದಿಂದ ಬಂದಿದೆ ಎಂದು ವರದಿ ಹೇಳಿದೆ.ವರದಿಗಳಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಉನ್ನತ ಅಧಿಕಾರಿಯೊಬ್ಬರು ಆ ವರದಿ “ನಿಜವಲ್ಲ” ಎಂದು ಹೇಳಿದ್ದು, ಯುಕೆ ಯಾವುದೇ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಅಧಿಕೃತವಾಗಿ ಹಂಚಿಕೊಂಡಿಲ್ಲ ಎಂದು ಹೇಳಿದರು.

“ಈ ಬಗ್ಗೆ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಅಧಿಕೃತವಾಗಿ ಹಂಚಿಕೊಂಡಿಲ್ಲ. ವರದಿಗಳು ವಾಸ್ತವಿಕವಾಗಿಲ್ಲ ಎಂದು ನಮಗೆ ವಿಶ್ವಾಸವಿದೆ” ಎಂದು ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಹೇಳಿರುವುದಾಗಿ ಗುರುವಾರ ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ ಸಾಗಣೆಯು ಪಾಕಿಸ್ತಾನದಿಂದ ಬಂದಿದ್ದಲ್ಲ. ಡಿಸೆಂಬರ್ 29 ರ ಸಂಜೆ ಆಗಮಿಸಿದ ಒಮಾನ್ ಏರ್ ಪ್ಯಾಸೆಂಜರ್ ಫ್ಲೈಟ್ WY 101 ಮೂಲಕ ಕಾರ್ಗೋ ಪ್ಯಾಕೇಜ್ ಹೀಥ್ರೂ ಏರ್‌ಪೋರ್ಟ್ ಟರ್ಮಿನಲ್ 4 ಅನ್ನು ತಲುಪಿದೆ ಎಂದು ತಿಳಿದುಬಂದಿದೆ. ವಿಮಾನವು ಪಾಕಿಸ್ತಾನದಿಂದ ಹೊರಟಿದ್ದು ಅಲ್ಲಿ UK ಅಧಿಕಾರಿಗಳು ಪ್ಯಾಕೇಜ್ ಅನ್ನು ಸರಕು ಎಂದು ಪರಿಶೀಲಿಸಿದ್ದಾರೆ. ಇದು ಒಮಾನ್ ನ ಮಸ್ಕತ್‌ನಲ್ಲಿ ನಿಲುಗಡೆಯಾಗಿತ್ತು ಎಂದು ಹೇಳಲಾಗಿದೆ.

ಆಗಮನದ ನಂತರ, ಸಾಮಾನ್ಯ ವಿಮಾನ ನಿಲ್ದಾಣದ ಸ್ಕ್ಯಾನರ್‌ಗಳಿಂದ ಪ್ಯಾಕೇಜ್ ಪತ್ತೆಯಾಗಿದೆ, ಇದು ವಿಷಯಗಳನ್ನು ವಿಶ್ಲೇಷಿಸಲು ಬಾರ್ಡರ್ ಫೋರ್ಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು. ಪ್ಯಾಕೇಜ್ ಗುಜರಿ ಲೋಹವನ್ನು ಒಳಗೊಂಡಿತ್ತು.ಯುರೇನಿಯಂ ಅನ್ನು “ಮೆಟಲ್ ಬಾರ್‌ಗಳಲ್ಲಿ ಅಳವಡಿಸಲಾಗಿದೆ” ಎಂದು ಹೇಳಲಾಗಿದೆ.

ಇದನ್ನೂ ಓದಿ: ತಾಲಿಬಾನ್ ಆದೇಶಕ್ಕೆ ವಿರೋಧ; ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ

ಈ ಪ್ಯಾಕೇಜ್ ಅನ್ನು ಯುಕೆ ಮೂಲದ ಇರಾನ್ ಪ್ರಜೆಗಳಿಗೆ ರವಾನಿಸಲಾಗುತ್ತಿದೆ ಎಂದು ಸನ್ ಪತ್ರಿಕೆ ವರದಿ ಮಾಡಿದೆ. ಇತರ ಮಾಧ್ಯಮಗಳು ಇದನ್ನು ಇರಾನಿಯನ್ನರ ಒಡೆತನದ ಲಂಡನ್ ಮೂಲದ ವ್ಯಾಪಾರಕ್ಕೆ ರವಾನಿಸಲಾಗಿದೆ ಎಂದು ಹೇಳಿವೆ.  ಯುಕೆಯಲ್ಲಿ, ಮೆಟ್ರೋಪಾಲಿಟನ್ ಪೋಲೀಸ್ ತನ್ನ ಭಯೋತ್ಪಾದನಾ ನಿಗ್ರಹ ಕಮಾಂಡ್ ಘಟಕಕ್ಕೆ ಬಾರ್ಡರ್ ಫೋರ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು ಎಂದಿದೆ.

ಬುಧವಾರ ಲಂಡನ್ ಅಸೆಂಬ್ಲಿ ಪೊಲೀಸ್ ಮತ್ತು ಕ್ರೈಮ್ ಕಮಿಟಿಯಲ್ಲಿ ಮಾತನಾಡುತ್ತಾ, ಮೆಟ್ ಪೋಲಿಸ್ ಭಯೋತ್ಪಾದನಾ ನಿಗ್ರಹ ಕಮಾಂಡ್ ಮುಖ್ಯಸ್ಥ ಕಮಾಂಡರ್ ರಿಚರ್ಡ್ ಸ್ಮಿತ್, ಈ ವಸ್ತು ಯುಕೆಗೆ ಆಗಮಿಸಿದ ಸಂದರ್ಭಗಳು ಮತ್ತು ಅದರ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು “ಪ್ರತಿ ಮಾರ್ಗವನ್ನು ಅನುಸರಿಸುತ್ತಾರೆ” ಎಂದು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ. ಗುರುತಿಸಲಾದ ರವಾನೆಗಳಲ್ಲಿ ಬಹಳ ಕಡಿಮೆ ಪ್ರಮಾಣದ ಕಲುಷಿತ ವಸ್ತುಗಳು ಸೇರಿವೆ ಎಂದು ಅವರು ಹೇಳಿದ್ದಾರೆ.

ಸ್ಕೈ ನ್ಯೂಸ್‌ನೊಂದಿಗೆ ಮಾತನಾಡಿದ ಬ್ರಿಟಿಷ್ ಸೇನೆಯ ರಾಸಾಯನಿಕ ಶಸ್ತ್ರಾಸ್ತ್ರಗಳ ಘಟಕದ ಮಾಜಿ ಮುಖ್ಯಸ್ಥ ಹ್ಯಾಮಿಶ್ ಡಿ ಬ್ರೆಟ್ಟನ್-ಗೋರ್ಡನ್, ಈ ವಸ್ತುವು ಪಾಕಿಸ್ತಾನದಿಂದ ಯುಕೆಗೆ ತಲುಪಿರುವುದು “ಕಳವಳಕಾರಿ” ಎಂದಿದ್ದಾರೆ. ಆದಾಗ್ಯೂ, ಮೂಲ ಏನೇ ಇರಲಿ, ಇಂಥಾ ವಸ್ತು ಸಂಪೂರ್ಣವಾಗಿ ವಾಣಿಜ್ಯ ವಿಮಾನದಲ್ಲಿ ಇರಬಾರದು” ಎಂದು ಅವರು ಹೇಳಿದರು.

ಯುರೇನಿಯಂ ಬಂಡೆಗಳಲ್ಲಿ ಕಂಡುಬರುವ ವಿಕಿರಣಶೀಲ ಲೋಹವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಪರಮಾಣು ಶಕ್ತಿ ಸ್ಥಾವರಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಇದನ್ನು ಪರಮಾಣು ಶಸ್ತ್ರಾಸ್ತ್ರಗಳಲ್ಲಿಯೂ ಬಳಸಬಹುದು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Thu, 12 January 23