ಸ್ಪೈಸ್​ಜೆಟ್​ನ​ ಬ್ಯಾಂಕಾಕ್​ ವಿಮಾನದಲ್ಲಿ ಪೈಲಟ್​ನ​ ತಮಾಷೆ ವಿಡಿಯೋ ವೈರಲ್

Pilot : ನಿಮ್ಮ ಮುಂದಿನ ಬ್ಯಾಂಕಾಕ್​ ಪ್ರಯಾಣ ಮತ್ತೆ ಯಾವಾಗ, ನಾನೂ ನಿಮ್ಮೊಂದಿಗೆ ಪ್ರಯಾಣಿಸಲಿಚ್ಛಿಸುತ್ತೇನೆ ಎಂದು ಒಬ್ಬರು. ಕುಸಿಯುತ್ತಿದ್ದೇನೆ ಎನ್ನಿಸುತ್ತಿತ್ತು, ನಿಮ್ಮ ರೀಲ್​ ನೋಡಿ ಉತ್ಸಾಹ ಬಂದಿತು ಎಂದು ಮತ್ತೊಬ್ಬರು. ನೋಡಿ ವಿಡಿಯೋ.

ಸ್ಪೈಸ್​ಜೆಟ್​ನ​ ಬ್ಯಾಂಕಾಕ್​ ವಿಮಾನದಲ್ಲಿ ಪೈಲಟ್​ನ​ ತಮಾಷೆ ವಿಡಿಯೋ ವೈರಲ್
ಸ್ಪೈಸ್​ಜೆಟ್​​ನ ಮೋಹಿತ್​ ಟಿಯೋಟಿಯಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 09, 2023 | 10:36 AM

Viral Video : ನಿತ್ಯಜೀವನದ ಏಕತಾನತೆಯನ್ನು ಮುರಿಯಲು ಆಗಾಗ ಪೈಲಟ್, ಗಗನಸಖಿಯರು ಇಂಥ ಸಣ್ಣಪುಟ್ಟ ತಮಾಷೆಗಳೊಂದಿಗೆ ವಿಮಾನಯಾನದ ಪ್ರಯಾಣವನ್ನು ಹಗೂರಗೊಳಿಸಲು ನೋಡುತ್ತಿರುತ್ತಾರೆ. ಈಗಾಗಲೇ ಇಂಥ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಹಿಂದೆ ಒಬ್ಬ ಪೈಲಟ್​ ಕವಿತೆಯನ್ನು ಓದುವ ಮೂಲಕ ಪ್ರಯಾಣಿಕರನ್ನು ಸ್ವಾಗತಿಸಿದ್ದರು. ಇದೀಗ ಈ ಪೈಲಟ್​ ತನ್ನ ಪ್ರಯಾಣಿಕರನ್ನು ನಗೆಗಡಲಲ್ಲಿ ತೇಲಿಸಿದ್ದು ಹೇಗೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mohit Teotia (@poeticpilot_)

ವಿಮಾನವು ಬ್ಯಾಂಕಾಕ್​ಗೆ ಹಾರುವ ಮೊದಲು ಪೈಲಟ್ ಮೋಹಿತ್ ಟಿಯೋಟಿಯಾ​ ಕಾವ್ಯಸ್ಪರ್ಶ ಮತ್ತು ಒಂಚೂರು ತಮಾಷೆಯ ಮಿಳಿತಗೊಳಿಸಿ ಪ್ರಯಾಣಿಕರಲ್ಲಿ ಉತ್ಸಾಹ ತುಂಬಿದ್ದಾರೆ. ನನ್ನ ಪ್ರಯಾಣಿಕರ ಖುಷಿಯೇ ನನ್ನ ಖುಷಿ ಎಂದು ತಮ್ಮ ಇನ್​ಸ್ಟ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಓಡಾಡುತ್ತಿದೆ.

ಇದನ್ನೂ ಓದಿ : ಪ್ರಯಾಣಿಕರೊಬ್ಬರು ವಿಮಾನದಲ್ಲಿ ಗಗನಸಖಿಯ ಪೋರ್ಟ್ರೇಟ್ ಚಿತ್ರಿಸಿ ಕೊಟ್ಟಾಗ

‘ಈ ವಿಮಾನ ಪ್ರಯಾಣದಲ್ಲಿ ಗುಟಕಾ, ಪಾನ್​ ನಿಷೇಧಿಸಲಾಗಿದೆ ಏಕೆಂದರೆ ಕಿಟಕಿಗಳನ್ನು ತೆರೆಯಲು ಬರುವುದಿಲ್ಲ. ಹಾಗೆಯೇ ಬ್ಯಾಂಕಾಕ್​ಗೆ ಹೊರಟಿರುವ ಈ ವಿಮಾನದಲ್ಲಿ ಯಾರೆಲ್ಲ ಸುಳ್ಳು ಹೇಳಿ ಬಂದಿದ್ದೀರಿ ಅವರಿಗೆ ಅತ್ತಿಗೆ ಕಿವಿ ಹಿಂಡುವ ಸಾಧ್ಯತೆ ಇದೆ!’ ಇದು ಮೋಹಿತ್​ ಸ್ವಾಗತದ ಸಾರ.

ಇದನ್ನೂ ಓದಿ : ಕಾವ್ಯಾತ್ಮಕ ಶೈಲಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ ಪೈಲಟ್ ವಿಡಿಯೊ ವೈರಲ್

ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಮಿಲಿಯನ್​ಗಿಂತಲು ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು 1,36,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ಧಾರೆ. ಸರ್, ಬ್ಯಾಂಕಾಕ್​ಗೆ ನಿಮ್ಮ ಪ್ರಯಾಣ ಮತ್ತೆ ಯಾವಾಗ ಇರುತ್ತದೆ, ನಾನ ಇದೇ ವಿಮಾನದಲ್ಲಿ ಪ್ರಯಾಣಿಸಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ಮಗಳೇ ಪೈಲಟ್​; ಅಪ್ಪ ಮಗಳು ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಹೃದಯಸ್ಪರ್ಶಿ ಗಳಿಗೆಗಳು

ಇದು ಅದ್ಭುತವಾಗಿದೆ. ಹಾಸ್ಯ ಮತ್ತು ನಗುವಿನೊಂದಿಗೆ ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕತೆಯನ್ನು ಪಸರಿಸುತ್ತಿದ್ದೀರಿ, ಇದು ಮುಂದುವರಿಯಲಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಮತ್ತೊಬ್ಬರು ಹೇಳಿದ್ಧಾರೆ. ಯಾಕೋ ಕುಸಿಯುತ್ತಿದ್ದೇನೆ ಎಂದೆನ್ನಿಸುತ್ತಿತ್ತು, ಆದರೆ ನಿಮ್ಮ ಈ ರೀಲ್ ನೋಡಿದ ಮೇಲೆ ಉತ್ಸಾಹ ಬಂದಿತು ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:35 am, Tue, 9 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ