AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಅಡಿ ಮೊಸಳೆಯನ್ನು ನುಂಗಿದ್ದ ಹೆಬ್ಬಾವಿನ ವಿಡಿಯೋ ವೈರಲ್

Python : ಹೆಬ್ಬಾವು ತಿಂದ ಆಹಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೆ ಉಗಿಯುತ್ತವೆ. ಆದರೆ ಇಲ್ಲಿ ನಡೆದಿದ್ದು ಏನು? ಮೊಸಳೆಚರ್ಮದ ದುರಾಸೆಗೆ ಹೀಗೆ ಮಾಡಲಾಯಿತೆ? ಒಟ್ಟು ಎರಡು ಜೀವಿಗಳ ಮಾರಣಹೋಮ! ನೆಟ್ಟಿಗರು ಚರ್ಚಿಸುತ್ತಿದ್ದಾರೆ.

5 ಅಡಿ ಮೊಸಳೆಯನ್ನು ನುಂಗಿದ್ದ ಹೆಬ್ಬಾವಿನ ವಿಡಿಯೋ ವೈರಲ್
ಹೆಬ್ಬಾವಿನ ಹೊಟ್ಟೆ ಸೀಳಿ ಮೊಸಳೆಯನ್ನು ಹೊರತೆಗೆಯುತ್ತಿರುವುದು
ಶ್ರೀದೇವಿ ಕಳಸದ
|

Updated on:May 10, 2023 | 1:31 PM

Share

Viral Video : ಮನುಷ್ಯನನ್ನು, ಹಸುಗಳನ್ನು, ಹಸುಳೆಗಳನ್ನು, ಅನೇಕ ಜೀವಿಗಳನ್ನು ಹೆಬ್ಬಾವು ನುಂಗಿರುವ ಸಾಕಷ್ಟು ವಿಡಿಯೋಗಳನ್ನು ಈಗಾಗಲೇ ನೋಡಿದ್ದೀರಿ. ಇದೀಗ ಈ ಬರ್ಮೀಸ್ ಹೆಬ್ಬಾವು ಐದು ಅಡಿ ಉದ್ದದ ಮೊಸಳೆಯನ್ನೇ ನುಂಗಿಬಿಟ್ಟಿದೆ! ನುಂಗಿದ ನಂತರ ಯಾಕಾದರೂ ನುಂಗಿದೆನೋ ಎಂದು ಅದು ಪಶ್ಚಾತ್ತಾಪ ಪಟ್ಟಿರಲು ಸಾಕು! ಈ ಕೆಳಗಿನ ವಿಡಿಯೋ ನೋಡಿ.

ಹೆಬ್ಬಾವುಗಳ ಜಾತಿಯಲ್ಲಿ ಬರ್ಮೀಸ್ ಹೆಬ್ಬಾವು ದೈತ್ಯಜೀವಿ. ಸಾಮಾನ್ಯವಾಗಿ ಇವುಗಳು 25 ಅಡಿಯಷ್ಟು ಉದ್ದವಿರುತ್ತವೆ. ಹಾಗಾಗಿ ದೊಡ್ಡ ಹೊಟ್ಟೆಗೆ ದೊಡ್ಡದೊಡ್ಡ ಜೀವಿಗಳನ್ನೇ ಬೇಟೆಯಾಡುವತ್ತಲೇ ಇವುಗಳ ಗಮನ. ಈಗ ನೋಡಿದಿರಲ್ಲ ಮೇಲಿನ ವಿಡಿಯೋ, ಇದೇ ಇವುಗಳ ಬೇಟೆತನಕ್ಕೆ ಸಾಕ್ಷಿ.

ಇದನ್ನೂ ಓದಿ : ಇದು ಜಗತ್ತಿನ ಅತೀ ಉದ್ದನೆಯ ಹೆಬ್ಬಾವು, ಮರವೇರುವ ಇದರ ತಂತ್ರ ನೋಡಿ

ಹಲವಾರು ಜನ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಯಾಕೆ ಇವರು ಹೆಬ್ಬಾವನ್ನು ಕೊಯ್ದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಏಕೆಂದರೆ ಮೊಸಳೆ ಈಗಾಗಲೇ ಪ್ರಾಣ ಕಳೆದುಕೊಂಡಾಗಿದೆ. ಅದನ್ನ ಉಳಿಸುವ ಉದ್ದೇಶವಿದ್ದಲ್ಲಿ ಅವರ ಈ ಕ್ರಮ ಸಮಂಜಸವಾಗಿರುತ್ತಿತ್ತು. ಬಹುಶಃ ಇವರ ಹಕೀಕತ್ತು ಬೇರೆಯೇ ಇದೆ. ಮೊಸಳೆಯ ಚರ್ಮವನ್ನು ಅವರು ಪರ್ಸ್​ ತಯಾರಿಕರಿಗೆ ಮಾರಬಹುದೇನೋ… ಹೀಗೆಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?

ಸಾಮಾನ್ಯವಾಗಿ ಹೆಬ್ಬಾವುಗಳು ದೊಡ್ಡಜೀವಿಯನ್ನು ನುಂಗಿದಾಗ ತಿನ್ನಲು ಸಾಧ್ಯವಾಗದೆ ಉಗಿಯುತ್ತವೆ. ಆದರೆ ಇಲ್ಲಿ ಹೆಬ್ಬಾವಿಗೆ ಯಾಕೆ ಈ ಅವಸ್ಥೆಗೆ ತರಲಾಗಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಹಾವು ಮೊದಲೇ ಸತ್ತಿತ್ತೇ ಅಥವಾ ಮೊಸಳೆಗಾಗಿ ಅದರ ಹೊಟ್ಟೆ ಕತ್ತರಿಸಲಾಯಿತೆ? ಎಂಬ ಅನುಮಾನವನ್ನು ಸಾಕಷ್ಟು ಜನರು ವ್ಯಕ್ತಪಡಿಸಿದ್ಧಾರೆ.

ಉತ್ತರ ಬಹಳ ಸ್ಪಷ್ಟವಿದೆ, ಮೊಸಳೆ ಚರ್ಮವನ್ನು ಮಾರಲೆಂದೇ ಅವರು ಹೀಗೆ ಮಾಡಿರುವ ಸಾಧ್ಯತೆ ಇದೆ ಅನೇಕರು ಅಭಿಪ್ರಾಯಿಸಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್​ ಮಾಡಿ

Published On - 1:24 pm, Wed, 10 May 23