ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?

Cat Rescue : ಟವರ್​ನ ತುತ್ತತುದಿಯಲ್ಲಿ ಕುಳಿತ ಬೆಕ್ಕನ್ನು ರಕ್ಷಿಸುವುದು ಈ ತಂಡಕ್ಕೆ ಸುಲಭವಾಗಿರಲಿಲ್ಲ. ಈ ವಿಡಿಯೋ ನೋಡಿ ಕಾರಣ ಗೊತ್ತಾಗುತ್ತದೆ.

ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?
ಮೊಬೈಲ್​ ಟವರ್ ಏರಿ ಕುಳಿತ ಬೆಕ್ಕನ್ನು ರಕ್ಷಿಸಿದಾಗ...
Follow us
ಶ್ರೀದೇವಿ ಕಳಸದ
|

Updated on:May 10, 2023 | 11:51 AM

Viral Video : ಮನುಷ್ಯರು ಕಟ್ಟಡಗಳನ್ನು, ಕಂಬಗಳನ್ನು, ಗೋಪುರಗಳನ್ನು, ಮರಗಳನ್ನು ಏರಿ ಪ್ರತಿಭಟನೆಗೆ ತೊಡಗಿರುವುದನ್ನು ನೋಡಿದ್ದೇವೆ. ಆದರೆ ಬೆಂಗಳೂರಿನಲ್ಲಿ ಬೆಕ್ಕೊಂದು ಮೊಬೈಲ್​ ಗೋಪುರ ಏರಿ ಕುಳಿತಿದೆ. ಎಲ್ಲ ಬಿಟ್ಟು ಇದನ್ನು ಏರಿ ಕುಳಿತಿದ್ದು ಯಾಕೆ ಮತ್ತು ಹೇಗೆ? ಅದರಲ್ಲೂ ಇಷ್ಟೊಂದು ಯಂತ್ರ ಮತ್ತು ವಯರುಗಳ ಕೊಂಪೆಯೊಳಗೆ ನುಗ್ಗಿ ತುತ್ತತುದಿಗೆ ಕುಳಿತುಕೊಳ್ಳಬೇಕೆಂದರೆ! ಮುಂದೇನಾಯಿತು ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by CARE (@charliesanimalrescuecentre)

ಬೆಂಗಳೂರಿನ ಈ ಬೆಕ್ಕೊಂದು ಹೀಗೆ ಮೊಬೈಲ್​ ಟವರ್ ಏರಿ ಕುಳಿತಾಗ ಏನು ಮಾಡಬೇಕೆಂದು ತೋಚದೆ ಮನೆಯವರು ಕಂಗಾಲಾಗಿದ್ದಾರೆ. ಹಕ್ಕಿ ಹಿಡಿಯಲು ಅಲ್ಲಿಗೆ ಹೋಯಿತೋ, ಅಥವಾ ಇನ್ನೇನು ಅದನ್ನು ಆಕರ್ಷಿಸಿತೋ. ಅಂತೂ ಚಾರ್ಲೀಸ್​ ಅನಿಮಲ್​ ರೆಸ್ಕ್ಯೂ ಸೆಂಟರ್​ಗೆ ಕರೆ ಹೋಗುತ್ತಿದ್ದಂತೆ ಮೊಬೈಲ್​ ಟವರ್​ ಬಳಿ ಅವರ ತಂಡ ಬಂದಿಳಿದಿದೆ.

ಇದನ್ನೂ ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ಟವರ್​ನ ತುತ್ತತುದಿಯಲ್ಲಿ ಕುಳಿತ ಬೆಕ್ಕನ್ನು ರಕ್ಷಿಸುವುದು ಸುಲಭಸಾಧ್ಯವಾಗಿರಲಿಲ್ಲ. ಬೆಕ್ಕು ಗಾಬರಿಯಿಂದ ಕೆಳಕ್ಕೆ ನೆಗೆಯುವ ಸಾಧ್ಯತೆ ಇರುತ್ತದೆ. ತನ್ನೆಡೆ ಬರುತ್ತಿರುವ ಮನುಷ್ಯರು ತನ್ನನ್ನು ರಕ್ಷಿಸಲು ಬರುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ಹೆಚ್ಚಿನ ಪಾಲು ಪ್ರಾಣಿಗಳಿಗೆ ಇರಲಾರದು. ಆದರೆ ಈ ಪ್ರಕರಣದಲ್ಲಿ ಹಾಗಾಗದಂತೆ ತಂಡ ಎಚ್ಚರವಹಿಸಿದೆ.

ಇದನ್ನೂ ಓದಿ : ಲಿಪ್​ಸ್ಟಿಕ್​ ಓಕೆ ಬ್ಯಾಂಡ್​ಏಡ್​ಗೆಲ್ಲ ಏಕೆ? ನೆಟ್ಟಿಗರಲ್ಲಿ ಭಾರೀ ಚರ್ಚೆ

ಅತೀ ಸವಾಲಿನಿಂದ ಕೂಡಿದ ಈ ರಕ್ಷಣೆಯನ್ನು ತಂಡ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದೆ. ಜಾಳಿಗೆಯಲ್ಲಿ ಬೆಕ್ಕನ್ನು ಇಳಿಸಿಕೊಂಡ ನಂತರ ಬೆಕ್ಕನ್ನು ಮರಳಿ ಪೋಷಕರ ಮಡಿಲಿಗೆ ಸೇರಿಸಲಾಗಿದೆ. ಇನ್​ಸ್ಟಾನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಅನೇಕರು ಮೆಚ್ಚಿದ್ದಾರೆ. ತಂಡದ ಶ್ರಮಕ್ಕೆ ಶಭಾಷ್​ ಎಂದಿದ್ದಾರೆ. ಬೆಕ್ಕಿನ ರಕ್ಷಣೆಯಷ್ಟೇ ನಿಮ್ಮ ರಕ್ಷಣೆಯೂ ಅಗತ್ಯ, ಸುರಕ್ಷಾ ಕವಚಗಳನ್ನು ಧರಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:50 am, Wed, 10 May 23

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ