ಲಿಪ್​ಸ್ಟಿಕ್​ ಓಕೆ ಬ್ಯಾಂಡ್​ಏಡ್​ಗೆಲ್ಲ ಏಕೆ? ನೆಟ್ಟಿಗರಲ್ಲಿ ಭಾರೀ ಚರ್ಚೆ

Band-Aid : ಒಂದು ಸಣ್ಣ ಗಾಯದ ಪಟ್ಟಿಗೆ ಇಷ್ಟೆಲ್ಲ ಯೋಚಿಸಬೇಕಾ ಎಂದು ಕೆಲವರು. ಮೈಬಣ್ಣದ ವಿಷಯವಾಗಿ ನೊಂದುಕೊಳ್ಳುವವರ ಸಂಕಟದ ಬಗ್ಗೆ ನಿಮಗೇನು ಗೊತ್ತು ಎಂದು ಕೆಲವರು. ನೀವೇನಂತೀರಿ?

ಲಿಪ್​ಸ್ಟಿಕ್​ ಓಕೆ ಬ್ಯಾಂಡ್​ಏಡ್​ಗೆಲ್ಲ ಏಕೆ? ನೆಟ್ಟಿಗರಲ್ಲಿ ಭಾರೀ ಚರ್ಚೆ
ಬಣ್ಣಬಣ್ಣದ ಬ್ಯಾಂಡ್​ಏಡ್
Follow us
ಶ್ರೀದೇವಿ ಕಳಸದ
|

Updated on:May 10, 2023 | 11:02 AM

Viral News : ಒಂದು ಬ್ಯಾಂಡ್​ಕೊಡಿ ಎಂದರೆ ಅಂಗಡಿಯವ ನಿಮ್ಮೆದುರು ಈವತ್ತು ನಾಲ್ಕೈದು ಬ್ಯಾಂಡ್​ಏಡ್​ಗಳನ್ನು ನಿಮ್ಮೆದುರು ಹರವಿಟ್ಟರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ನಿಮ್ಮ ಮೈಬಣ್ಣಕ್ಕೆ ಒಪ್ಪುವಂಥ ವಿವಿಧ ಛಾಯೆಯ ಬ್ಯಾಂಡ್​ಏಡ್​ಗಳು ಮಾರುಕಟ್ಟಗೆ ಬಂದಿವೆ. ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ಉದ್ಯಮಿ ಹರ್ಷ ಗೋಯೆಂಕಾ ಹಂಚಿಕೊಂಡಿದ್ದಾರೆ. ನೆಟ್ಟಿಗರೂ ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ.

ಮೈಬಣ್ಣಕ್ಕೆ ಒಪ್ಪುವಂಥ ಬ್ಯಾಂಡ್​ಏಡ್​ ಅವಶ್ಯಕತೆ ನಿಜಕ್ಕೂ ಇದೆಯಾ? ಕೆಲ ಆವಿಷ್ಕಾರಗಳು ನಿಜಕ್ಕೂ ಅರ್ಥಹೀನ! ಎಂದು ಹರ್ಷ ಗೋಯೆಂಕಾ ಕೇಳಿದ್ಧಾರೆ. ಅದಕ್ಕೆ ಪ್ರತಿಯಾಗಿ ನೆಟ್ಟಿಗರು ಪರವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಗೂಳಿಸವಾರಿ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವಕ

ಒಂದು ಸಣ್ಣಗಾಯಕ್ಕೆ ಅಂಟಿಸುವ ಪಟ್ಟಿಯ ಬಗ್ಗೆ ಇಷ್ಟೊಂದು ಯೋಚಿಸಿ ತೊಗಿಕೊಳ್ಳಬೇಕಾದ ಅವಶ್ಯಕತೆ ಇದೆಯಾ? ಇದೆಲ್ಲ ಮಾರಾಟದ ಗಿಮಿಕ್​ ಎಂದು ಕೆಲವರು ಹೇಳಿದ್ಧಾರೆ. ಅದಕ್ಕೆ ಪ್ರತಿಯಾಗಿ ಇನ್ನೂ ಕೆಲವರು, ಚರ್ಮದ ಬಣ್ಣಕ್ಕಾಗಿ ಜೀವಮಾನವಿಡೀ ನೊಂದುಕೊಳ್ಳುವವರ ಸಂಕಟ ನಿಮಗೇನು ಅರ್ಥವಾಗುತ್ತೆ? ಎಂದು ಕೇಳಿದ್ಧಾರೆ.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಲಿಪ್​ಸ್ಟಿಕ್ ಅಲ್ಲವಲ್ಲ? ಇದು ಗಾಯಕ್ಕೆ ಹಚ್ಚಿಕೊಳ್ಳುವ ಪಟ್ಟಿ, ಯಾವ ಬಣ್ಣವಾದರೆ ಏನು? ಗಾಯ ಮಾಗಿದ ಮೇಲೆ ಕಿತ್ತೊಗೆಯುವುದೇ ಅಲ್ಲವೇ ಎಂದು ಕೇಳಿದ್ಧಾರೆ ಒಬ್ಬರು. ನಿಮಗಿದೆಲ್ಲ ಅರ್ಥವಾಗಲ್ಲ, ಅವರವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಆ ಪ್ರಕಾರ ಅವರು ಖರೀದಿಸುತ್ತಾರೆ ನಿಮಗೆ ಬೇಡವಾದರೆ ನೀವು ಸುಮ್ಮನಿರಿ ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ದೇವರೇ ನಿಮ್ಮ ವಾದಗಳೆಲ್ಲ ಸರಿಯೇ. ಈಗ ಮುಂದೇನು ಮಾಡುವುದು? ಎಂದು ಮತ್ತೊಬ್ಬರು ಕೇಳಿದ್ದಾರೆ.

ನೀವೇನಂತೀರಿ? ಬಣ್ಣಬಣ್ಣದ ಬ್ಯಾಂಡ್​ಏಡ್ ಮಾರುಕಟ್ಟೆಯಲ್ಲಿರುವುದು ಅನುಕೂಲವೇ ಅನಾನುಕೂಲವೇ? ಏನೇ ಆದರೂ ಆಗುವ ಗಾಯ ಮತ್ತು ಮಾಗುವ ಪ್ರಕ್ರಿಯೆ ಒಂದೇ ಅಲ್ಲವೇ?

 ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:49 am, Wed, 10 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ