ಇಷ್ಟ ಪಟ್ಟು 3 ಖಾಸಗಿ ವಿಮಾನಗಳ ಖರೀದಿ: ತನ್ನ ತಪ್ಪಿನ ಅರಿವಾಗಿ ಮಾರಾಟ ಮಾಡಲು ಮುಂದಾದ ಉದ್ಯಮಿ

ಜನರ ಬಳಿ ಅಲ್ಪ ಸ್ವಲ್ಪ ಹಣವಿದ್ದರೂ ದುಬಾರಿ ಮತ್ತು ಐಷಾರಾಮಿ ವಾಹನಗಳನ್ನು ಖರೀದಿಸುತ್ತಾರೆ, ಅನೇಕರು ಸಾಲ ಮಾಡಿ ತಮ್ಮ ಇಷ್ಟವನ್ನು ಪೂರೈಸಿಕೊಳ್ಳುತ್ತಾರೆ.

ಇಷ್ಟ ಪಟ್ಟು 3 ಖಾಸಗಿ ವಿಮಾನಗಳ ಖರೀದಿ: ತನ್ನ ತಪ್ಪಿನ ಅರಿವಾಗಿ ಮಾರಾಟ ಮಾಡಲು ಮುಂದಾದ ಉದ್ಯಮಿ
ಖಾಸಗಿ ವಿಮಾನImage Credit source: News18
Follow us
ನಯನಾ ರಾಜೀವ್
|

Updated on: May 10, 2023 | 12:27 PM

ಜನರ ಬಳಿ ಅಲ್ಪ ಸ್ವಲ್ಪ ಹಣವಿದ್ದರೂ ದುಬಾರಿ ಮತ್ತು ಐಷಾರಾಮಿ ವಾಹನಗಳನ್ನು ಖರೀದಿಸುತ್ತಾರೆ, ಅನೇಕರು ಸಾಲ ಮಾಡಿ ತಮ್ಮ ಇಷ್ಟವನ್ನು ಪೂರೈಸಿಕೊಳ್ಳುತ್ತಾರೆ. ಈಗ ಖಾಸಗಿ ಜೆಟ್​ ರೈಡ್​ನಿಂದ ಬೇಸತ್ತು ಅದನ್ನು ಮಾರಾಟ ಮಾಡಲು ಮುಂದಾಗಿರುವ ಉದ್ಯಮಿ ಬಗ್ಗೆ ನಾವು ತಿಳಿದುಕೊಳ್ಳೋಣ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಪ್ರಪಂಚದಾದ್ಯಂತ ವಿಮಾನಗಳ ಹಾರಾಟ ನಿಷೇಧಿಸಲಾಗಿದ್ದ ಸಮಯದಲ್ಲಿ ಹಲವು ಉದ್ಯಮಿಗಳು ಕೆಲವು ಖಾಸಗಿ ಚಾರ್ಟರ್ಡ್​ ವಿಮಾನಗಳನ್ನು ಖರೀದಿಸಿದ್ದರು. ಏಕೆಂದರೆ ಬೇರೆ ಬೇರೆ ದೇಶಗಳಿಗೆ ಮೀಟಿಂಗ್​ಗಳಿಗೆ ತೆರಳಬೇಕಿತ್ತು. ಇವರಲ್ಲಿ ಒಬ್ಬರು ಅಮೆರಿಕದ ಉದ್ಯಮಿ ಸ್ಟೀಫನ್ ಪ್ರಿನ್ಸ್.

ಅವರು ಮೂರು ಜೆಟ್​ಗಳನ್ನು ಖರೀದಿಸಿದ್ದರು, ಆದರೆ ಈಗ ವಿಮಾನ ಪ್ರಯಾಣವೇ ಅವರಿಗೆ ಇಷ್ಟವಾಗುತ್ತಿಲ್ಲವಂತೆ, ಅದು ಕೊಕೇನ್​ ರೀತಿ ಒಂದು ರೀತಿಯ ಚಟ ಎಂದಿದ್ದಾರೆ. ಪ್ರಿನ್ಸ್​ ಅವರು 6 ವರ್ಷಗಳ ಹಿಂದೆ ಖಾಸಗಿ ಜೆಟ್​ಗಳ ಖರೀದಿ ಆರಂಭಿಸಿದರು, ಮೊದಲು ಮಿತ್ಸುಬಿಷಿ MU-2 ಖರೀದಿಸಿದರು. ಬಳಿಕ ಅದೇ ಮಾದರಿಯ ಜೆಟ್​ ಖರೀದಿಸಿದರು, ಸ್ವಲ್ಪ ದಿನಗಳ ನಂತರ ಮೂರನೇ ವಿಮಾನ ಸೆಸ್ನಾ 560 ಖರೀದಿ ಮಾಡಿದರು.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಈ ವಿಮಾನಗಳು ಪರಿಸರಕ್ಕೆ ಹೆಚ್ಚು ಹಾನಿಯುಂಟು ಮಾಡುತ್ತದೆ ಎಂಬುದು ತಿಳಿದ ಬಳಿಕ ಇಲ್ಲಿಯವರೆಗೆ ಎರಡು ಚಾರ್ಟರ್ಡ್​ ಮಾರಾಟ ಮಾಡಿದ್ದು, ಈಗ ಮೂರನೆಯ ಜೆಟ್​ ಅನ್ನು ಕೂಡ ಮಾರಾಟ ಮಾಡಲು ಮುಂದಾಗಿದ್ದಾರೆ. ಪ್ರಿನ್ಸ್ ತನ್ನ ಬಳಿ ಸೆಸ್ನಾ 650 ಜೆಟ್ ಮಾತ್ರ ಉಳಿದಿದೆ, ಇದು ಗಂಟೆಗೆ ಸರಾಸರಿ 241 ಗ್ಯಾಲನ್‌ಗಳಷ್ಟು ಇಂಧನವನ್ನು ಬಳಸುತ್ತದೆ, ಭಾರಿ ಮಾಲಿನ್ಯ ಉಂಟುಮಾಡುತ್ತದೆ.

ಏಕೆಂದರೆ ಖಾಸಗಿ ಜೆಟ್ ಸಾಮಾನ್ಯ ವಿಮಾನಗಳಿಗಿಂತ ಹತ್ತು ಪಟ್ಟು ಹೆಚ್ಚು ಇಂಗಾಲವನ್ನು ವಾತಾವರಣಕ್ಕೆ ಉಗುಳುತ್ತದೆ,ಇದನ್ನು ನೋಡಿದರೆ ನಾನು ಎಷ್ಟು ಸ್ವಾರ್ಥಿ ಎಂದು ಅನ್ನಿಸುತ್ತದೆ.

ಯುರೋಪಿಯನ್ ಎನ್‌ಜಿಒ ಟ್ರಾನ್ಸ್‌ಪೋರ್ಟ್ ಮತ್ತು ಎನರ್ಜಿ 2021 ರ ಅಧ್ಯಯನದ ಪ್ರಕಾರ, ಖಾಸಗಿ ವಿಮಾನಗಳು ವಾಣಿಜ್ಯ ವಿಮಾನಗಳಿಗಿಂತ ಪ್ರತಿ ಪ್ರಯಾಣಿಕರಿಗೆ 5 ರಿಂದ 14 ಪಟ್ಟು ಹೆಚ್ಚು ಮಾಲಿನ್ಯಕಾರಕಗಳನ್ನು ಉತ್ಪಾದಿಸುತ್ತವೆ ಮತ್ತು ಗಂಟೆಗೆ ಎರಡು ಮೆಟ್ರಿಕ್ ಟನ್ CO2 ಅನ್ನು ಹೊರಸೂಸುತ್ತವೆ. ಹೀಗಾಗಿ ತಾನು ಎಲ್ಲರಂತೆಯೇ ಪ್ಯಾಸೆಂಜರ್ ವಿಮಾನದಲ್ಲಿಯೇ ಓಡಾಡುತ್ತೇನೆ ಸ್ವಂತ್ ಜೆಟ್ ಬೇಡ ಎಂದಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ