3ನೇ ತರಗತಿ ವಿದ್ಯಾರ್ಥಿನಿಯಿಂದ ಮತದಾನದ ಜಾಗೃತಿ ಅಭಿಯಾನ; ವಿಡಿಯೋ ವೈರಲ್​

3ನೇ ತರಗತಿ ವಿದ್ಯಾರ್ಥಿನಿಯಿಂದ ಮತದಾನದ ಜಾಗೃತಿ ಅಭಿಯಾನ; ವಿಡಿಯೋ ವೈರಲ್​

ಕಿರಣ್ ಹನುಮಂತ್​ ಮಾದಾರ್
|

Updated on: May 08, 2023 | 7:09 AM

ವಿಧಾನಸಭೆ ಚುನಾವಣೆಗೆ ಇನ್ನು ಮೂರು ದಿನವಷ್ಟೇ ಬಾಕಿಯಿದೆ. ರಾಜ್ಯದಲ್ಲಿ ಗರಿಷ್ಟ ಮತದಾನವಾಗುವಂತೆ ಮಾಡಲು ಆಡಳಿತ ಯಂತ್ರ, ಅಲ್ಲಲ್ಲಿ ಮತದಾನ ಜಾಗೃತಿಯನ್ನು ನಡೆಸುತ್ತಿದೆ. ಆದ್ರೆ, ಇಲ್ಲೊಬ್ಬಳು ಪುಟ್ಟ ಬಾಲಕಿ ಮನೆ ಮನೆಗೆ ಅಂಗಡಿಗಳಿಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ.

ದಕ್ಷಿಣ ಕನ್ನಡ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನು ಮೂರು ದಿನವಷ್ಟೇ ಬಾಕಿಯಿದೆ. ರಾಜ್ಯದಲ್ಲಿ ಗರಿಷ್ಟ ಮತದಾನವಾಗುವಂತೆ ಮಾಡಲು ಆಡಳಿತ ಯಂತ್ರ, ಅಲ್ಲಲ್ಲಿ ಮತದಾನ ಜಾಗೃತಿಯನ್ನು ನಡೆಸುತ್ತಿದೆ. ಆದ್ರೆ, ಇಲ್ಲೊಬ್ಬಳು ಪುಟ್ಟ ಬಾಲಕಿ ಮನೆ ಮನೆಗೆ ಅಂಗಡಿಗಳಿಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ. ಹೌದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಶೇಕೋಡಿ ನಿವಾಸಿ ಸನ್ನಿಧಿ ಎಂಬ ಬಾಲಕಿ, ಕಶೇಕೋಡಿ ಮಾಣಿ ಬಾಲ ವಿಕಾಸ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ. ಸದ್ಯ ಬೇಸಿಗೆ ರಜೆಯಲ್ಲಿ ಆಟವಾಡುತ್ತಾ ಸಮಯ ಕಳೆಯದೆ, ಮನೆ ಮನೆಗೆ ಹೋಗಿ ತನ್ನಿಂದ ಸಾಧ್ಯವಾದಷ್ಟು ಮತದಾನ ಜಾಗೃತಿ ಮೂಡಿಸುತ್ತಿದ್ದಾಳೆ. ಈಕೆಯ ಜೊತೆ ಕೆಲ ಮಕ್ಕಳು ಸೇರಿಕೊಂಡಿದ್ದು, ಇವರ ಕಾರ್ಯಕ್ಕೆ ಊರಿನ ಗ್ರಾಮಸ್ಥರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತದಾನ ನಮ್ಮ ಕರ್ತವ್ಯ ಎಂದು ಹೋಗಿ ಹೇಳುವ ಈ ಬಾಲಕಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಜಾಗೃತಿ ಮಾತನ್ನು ಹೇಳುತ್ತಿದ್ದಾಳೆ.

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ