- Kannada News Photo gallery Checkout the NetWorth of Jewels and Diamond Ornaments that's being wore by Ambani Family Members
Expensive Jewels: ಅಬ್ಬಾಬ್ಬ ಅಂಬಾನಿ ಕುಟುಂಬದ ನಾರಿಮಣಿಯರು ಧರಿಸುವ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತಾ?
ಇತ್ತೀಚೆಗಷ್ಟೇ ನೀತಾ ಅಂಬಾನಿ ಮಾಲೀಕತ್ವದ NMACC ಉದ್ಘಾಟನಾ ಸಮಾರಂಭವೂ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಅಂಬಾನಿ ಕುಟುಂಬದ ನಾರಿಯರ ಆಭರಣಗಳು ಎಲ್ಲೆಡೆ ಗಮನಸೆಳೆದಿದೆ.
Updated on:Apr 21, 2023 | 6:08 PM

ಯಾವುದೇ ಸಮಾರಂಭಗಳಲ್ಲಿಯೂ ಕೂಡ ಅಂಬಾನಿ ಕುಟುಂಬದ ಮಹಿಳೆಯರೂ ಮಿಂಚಿವುದೇ ದೊಡ್ಡ ದೊಡ್ಡ ಗಾತ್ರದ ವಜ್ರದ ಆಭರಣಗಳಿಂದ. ಅವರು ಧರಿಸುವ ಆಭರಣಗಳು ಪ್ರತೀ ಬಾರೀ ಕಣ್ಣು ಕುಕ್ಕುವಂತಿರುತ್ತದೆ.

ಇತ್ತೀಚೆಗಷ್ಟೇ ನೀತಾ ಅಂಬಾನಿ ಮಾಲೀಕತ್ವದ NMACC ಉದ್ಘಾಟನಾ ಸಮಾರಂಭವೂ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಅಂಬಾನಿ ಕುಟುಂಬದ ನಾರಿಯರ ಆಭರಣಗಳು ಎಲ್ಲೆಡೆ ಗಮನಸೆಳೆದಿದೆ.

ಈ ಸಮಾರಂಭದಲ್ಲಿ ಮುಕೇಶ್ ಅಂಬಾನಿ ಮಡದಿ ನೀತಾ ಅಂಬಾನಿ ಧರಿಸಿರುವ ವಜ್ರದ ಉಂಗುರದ ಬೆಲೆ ಬರೋಬ್ಬರೀ 40 ಕೋಟಿ ರೂಪಾಯಿ. ಇದು ಸುಮಾರು 80ರಿಂದ 90 ಕ್ಯಾರೆಟ್ಗಳು ಎಂದು ಅಂದಾಜಿಸಲಾಗಿಸಲಾಗಿದೆ

ಮುಕೇಶ್ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ NMACC ಉದ್ಘಾಟನಾ ಸಮಾರಂಭದಲ್ಲಿ ಧರಿಸಿರುವ ವಜ್ರದ ನೆಕ್ಲೇಸ್ನ ಬೆಲೆ ಬರೋಬ್ಬರೀ 200 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ನೆಕ್ಲೇಸ್ ಇಶಾ ನಿಶ್ಚಿತಾರ್ಥ ಸಮಾರಂಭದಲ್ಲಿ ಉಡುಗೊರೆಯಾಗಿ ನೀಡಲಾಗಿದ್ದ ಆಭರಣ.

ಇತೀಚೆಗಷ್ಟೇ ನೀತಾ ಅಂಬಾನಿ ತನ್ನ ಸೊಸೆ ಶೋಕ್ಲಾ ಮೆಹ್ತಾ ಅವರಿಗೆ ವಿಶ್ವದ ಅತ್ಯಂತ ದುಬಾರಿ ವಜ್ರದ ನೆಕ್ಲೇಸ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಜ್ರದ ನೆಕ್ಲೇಸ್ನ ಬೆಲೆ ಬರೋಬ್ಬರೀ 450 ಕೋಟಿ ರೂಪಾಯಿ.

ಈ ವಜ್ರದ ನೆಕ್ಲೇಸ್ನ ಪೆಡೆಂಟ್ ಹಳದಿ ಬಣ್ಣದಿಂದ ಕೂಡಿದ್ದು, ಇದು ಪರಿಶುದ್ಧವಾದ ಅಂದರೆ ವಿಶ್ವದ ಆಂತರಿಕವಾಗಿ ದೋಷರಹಿತವಾದ ವಜ್ರವಾಗಿದೆ.
Published On - 6:08 pm, Fri, 21 April 23



















