Girl’s Emotional Post: ದಿಢೀರ್ ಕೆಲಸ ಹೋಯ್ತು, ಏನ್ ಮಾಡ್ಲಿ..! ಬೆಂಗಳೂರಿನ ಈ ಟೆಕ್ಕಿ ಹುಡುಗಿಯ ಸಂಕಟ ನೋಡಿ

Layoff Effect: ಅಮೇಜಾನ್​ನಿಂದ ಎರಡನೇ ಸುತ್ತಿನಲ್ಲಿ ಲೇಆಫ್ ಆದ 500 ಭಾರತೀಯ ಉದ್ಯೋಗಿಗಳ ಪೈಕಿ ಬೆಂಗಳೂರಿನ ಒಬ್ಬ ಯುವತಿ ಲಿಂಕ್ಡ್​ಇನ್​ನಲ್ಲಿ ಭಾವನಾತ್ಮಕವಾದ ಪೋಸ್ಟ್ ಬರೆದಿದ್ದಾರೆ.

Girl's Emotional Post: ದಿಢೀರ್ ಕೆಲಸ ಹೋಯ್ತು, ಏನ್ ಮಾಡ್ಲಿ..! ಬೆಂಗಳೂರಿನ ಈ ಟೆಕ್ಕಿ ಹುಡುಗಿಯ ಸಂಕಟ ನೋಡಿ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2023 | 4:06 PM

ಬೆಂಗಳೂರು: ಕೆಲವೇ ತಿಂಗಳ ಹಿಂದೆ 18,000 ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೇಜಾನ್ ಸಂಸ್ಥೆ (Amazon) ಇತ್ತೀಚೆಗೆ ಎರಡನೇ ಸುತ್ತಿನಲ್ಲಿ 11,000 ಮಂದಿಯನ್ನು ಕೆಲಸದಿಂದ ತೆಗೆದಿದೆ (Layoff). ಅದರಲ್ಲಿ 500 ಮಂದಿ ಭಾರತೀಯ ಉದ್ಯೋಗಿಗಳಿಗೆ ಏಪ್ರಿಲ್ ತಿಂಗಳಲ್ಲಿ ಕೆಲಸ ಹೋಗಿದೆ. ಬೆಂಗಳೂರಿನ ಅಮೇಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳಾ ಉದ್ಯೋಗಿಯೂ ಇದರಲ್ಲಿ ಇದ್ದಾರೆ. ಈಕೆ ಕೆಲಸಕ್ಕೆ ಸೇರಿ ಒಂದು ವರ್ಷ ಮಾತ್ರವೇ ಆಗಿದ್ದುದು. ಸೀನಿಯರ್ ಪ್ರಾಡಕ್ಟ್ ಕಾಂಪ್ಲಿಯನ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಇವರನ್ನು ಏಕಾಏಕಿ ಲೇ ಆಫ್ ಮಾಡಲಾಗಿದೆ. ಕಾಲೇಜು ಮುಗಿಸಿ ಈಕೆ ಸೇರಿದ ಮೊದಲ ಕೆಲಸ ಇದು. ದಿಢೀರ್ ವಿದ್ಯಮಾನದಿಂದ ಈ ಹುಡುಗಿ ಕಂಗೆಟ್ಟು ಹೋಗಿ ತನ್ನ ಮನದ ವ್ಯಾಕುಲವನ್ನು ಲಿಂಕ್ಡ್​ಇನ್​ನಲ್ಲಿ ಹಾಕಿಕೊಂಡಿದ್ದಾರೆ.

ಕೆಲಸ ಹೋಯ್ತೆಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ಯುವತಿ ಅಳಲು

ಅಮೇಜಾನ್​ನ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ದಿಢೀರ್ ಕೆಲಸ ಹೋಗಿದ್ದು ಭಾವೋದ್ವೇಗಗೊಳ್ಳುವಂತೆ ಮಾಡಿದೆ. ಸಂಕಟ, ಕೋಪ, ಅನಿಶ್ಚಿತತೆ ಇತ್ಯಾದಿ ಭಾವಾವೇಶಗಳಿಂದ ಆವರಿಸಿರುವ ಈ ಯುವತಿ, ತಾನು ನಿರುದ್ಯೋಗಿಯಾಗಿರುವ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಲಿಂಕ್ಡ್​ಇನ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿAmazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ

‘ನನ್ನ ಕೆಲಸ ಹೋಯಿತು. ನನ್ನ ಸಹೋದ್ಯೋಗಿಗಳ ಜೊತೆ ನಾನು ರೂಪಿಸಿಕೊಂಡ ಸಂಬಂಧ ಕಡಿತುಹೋಯಿತು. ನನ್ನ ಕೆಲಸದಲ್ಲಿ ನನಗಿದ್ದ ಅಭಿಲಾಷೆಯೂ ಹೋಯಿತು…. ಈ ಪರಿಸ್ಥಿತಿ ಬಗ್ಗೆ ನನಗೆ ಕೋಪ ಇದೆ. ಜೊತೆಗೆ ಭವಿಷ್ಯ ಏನಿದೆಯೋ ಎಂಬ ಅನಿಶ್ಚಿತತೆ ಕಾಡುತ್ತಿದೆ’ ಎಂದು ಈ ಮಾಜಿ ಅಮೇಜಾನ್ ಉದ್ಯೋಗಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

‘ಈ ಅನುಭವ ಆಗಿರುವುದು ನನಗೊಬ್ಬಳಿಗೆ ಮಾತ್ರ ಅಲ್ಲ ಎಂಬುದು ಗೊತ್ತು. ಪ್ರತೀ ವರ್ಷವೂ ಹಲವು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ಬಹಳ ಕಷ್ಟಕರ ಸಮಯ. ನನ್ನ ಸ್ನೇಹಿತರು ಮತ್ತು ಕುಟುಂಬ ವರ್ಗದವರ ಬೆಂಬಲಕ್ಕೆ ನಾನು ಋಣಿ. ಈ ಪರಿಸ್ಥಿತಿಯಿಂದ ಹೊರಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ’ ಎಂದು ತನ್ನ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಯೂನಿವರ್ಸಿಟಿಯಲ್ಲಿ ಓದಿದ ಈ ಯುವತಿ ಇದೀಗ ಬೇರೆ ಕೆಲಸಕ್ಕೆ ಹುಡುಕುತ್ತಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ