AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rs 30 Down: ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್​ಗೆ 30 ರೂವರೆಗೂ ಕಡಿತ; ಪಾಕಿಸ್ತಾನ ಜನತೆಗೆ ಬಂಪರ್ ಗಿಫ್ಟ್

Pakistan Cuts Down Petrol Prices: ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು 12 ರೂನಷ್ಟು ಇಳಿಸಲಾಗಿದೆ. ಸೀಮೆ ಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್​ಗಳ ಬೆಲೆಯನ್ನೂ 12 ರೂನಷ್ಟು ಕಡಿಮೆ ಮಾಡಲಾಗಿದೆ. ಆದರೆ, ಹೈಸ್ಪೀಡ್ ಡೀಸೆಲ್​ನ ದರಗಳನ್ನು ಲೀಟರ್​ಗೆ 30 ರುಪಾಯಿಯಷ್ಟು ತಗ್ಗಿಸಲಾಗಿದೆ.

Rs 30 Down: ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್​ಗೆ 30 ರೂವರೆಗೂ ಕಡಿತ; ಪಾಕಿಸ್ತಾನ ಜನತೆಗೆ ಬಂಪರ್ ಗಿಫ್ಟ್
ಪೆಟ್ರೋಲ್ ಬಂಕ್ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2023 | 1:53 PM

Share

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ (Pakistan) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು (Petrol and Diesel Prices) ಭರ್ಜರಿಯಾಗಿ ಇಳಿಸಿದೆ. ಜನಸಾಮಾನ್ಯರಿಗೆ ಬಹಳ ಅಗತ್ಯವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್​ಗೆ ಬರೋಬ್ಬರಿ 30 ರುಪಾಯಿಯಷ್ಟು ಇಳಿಕೆ ಮಾಡಲಾಗಿದೆ. ಮೇ 16, ಅಂದರೆ ಇಂದು ಮಂಗಳವಾರದಿಂದಲೇ ಹೊಸ ಬೆಲೆಗಳು ಅನ್ವಯ ಆಗಲಿದೆ. ಅಂತರರಾಷ್ಟ್ರೀಯವಾಗಿ ತೈಲ ಬೆಲೆಗಳು ಸತತವಾಗಿ ಇಳಿಕೆ ಆಗುತ್ತಿರುವುದರಿಂದ, ಈ ಬೆಲೆ ಇಳಿಕೆ ಲಾಭ ಸಾಮಾನ್ಯ ಜನರಿಗೂ ಆಗಲಿ ಎಂದು ಪೆಟ್ರೋಲ್ ಬೆಲೆ ಇಳಿಸುತ್ತಿದ್ದೇವೆ ಎಂದು ಶಹಾಬಾಜ್ ಷರೀಫ್ ನೇತೃತ್ವದ ಅಲ್ಲಿನ ಸರ್ಕಾರ ಹೇಳಿದೆ.

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು 12 ರೂನಷ್ಟು ಇಳಿಸಲಾಗಿದೆ. ಸೀಮೆ ಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್​ಗಳ ಬೆಲೆಯನ್ನೂ 12 ರೂನಷ್ಟು ಕಡಿಮೆ ಮಾಡಲಾಗಿದೆ. ಆದರೆ, ಹೈಸ್ಪೀಡ್ ಡೀಸೆಲ್​ನ ದರಗಳನ್ನು ಲೀಟರ್​ಗೆ 30 ರುಪಾಯಿಯಷ್ಟು ತಗ್ಗಿಸಲಾಗಿದೆ.

ಇದನ್ನೂ ಓದಿ: ನಾನು ದೇಶ ಪ್ರತಿನಿಧಿಸುವಾಗ ನೀನು ಹುಟ್ಟಿರಲೇ ಇಲ್ಲ: ಪಾಕ್ ಸೇನಾಧಿಕಾರಿ ಮೇಲೆ ಗುಡುಗಿದ ಇಮ್ರಾನ್ ಖಾನ್

ಸಾಲದ ಬಾಧೆಯಿಂದ ಪರಿತಪಿಸುತ್ತಿರುವ ಪಾಕಿಸ್ತಾನ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಪಾಕಿಸ್ತಾನಕ್ಕೆ ಸಾಲ ನೀಡಬೇಕೆಂದಿರುವ ಐಎಂಎಫ್ ಇಂಥ ಸಬ್ಸಿಡಿಗಳನ್ನು ವಿರೋಧಿಸುತ್ತದೆ. ಆದಾಯ ತಪ್ಪುವಂತಹ ನೀತಿಗಳನ್ನು ಸರ್ಕಾರ ಕೈಗೊಳ್ಳಬಾರದು ಎಂಬುದು ಐಎಂಎಫ್ ಪರೋಕ್ಷವಾಗಿ ಹಾಕಿರುವ ಷರುತ್ತುಗಳು. ಆದರೂ ಪಾಕಿಸ್ತಾನ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಧೈರ್ಯ ತೋರಿದೆ.

ಈ ತಿಂಗಳಲ್ಲಿ ಎರಡನೇ ಬಾರಿ ಪೆಟ್ರೋಲ್ ಬೆಲೆ ಇಳಿಕೆ

ಮೇ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಸರ್ಕಾರ ವಿವಿಧ ಪೆಟ್ರೋಲ್ ಬೆಲೆ ಇಳಿಸಿತ್ತು. ಈಗ 30 ರೂ ಇಳಿದಿರುವ ಹೈ ಸ್ಪೀಡ್ ಡೀಸೆಲ್ ಬೆಲೆ ಈ ಹಿಂದೆ 5 ರೂನಷ್ಟು ಇಳಿಕೆಯಾಗಿತ್ತು. ಲೈಟ್ ಡೀಸೆಲ್ ಆಯಿಲ್ ಮತ್ತು ಕೆರೋಸಿನ್ (ಸೀಮೆ ಎಣ್ಣೆ) ಬೆಲೆ ಲೀಟರ್​ಗೆ 10 ರೂನಷ್ಟು ಕಡಿಮೆ ಆಗಿದ್ದವು. ಇದರ ಬೆನ್ನಲ್ಲೇ ಅಲ್ಲಿ ಸರ್ಕಾರ ಇನ್ನೊಂದು ಸುತ್ತು ಬೆಲೆ ಇಳಿಕೆ ಮಾಡಿದೆ.

ಇದನ್ನೂ ಓದಿ: PVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?

ಪಾಕಿಸ್ತಾನದಲ್ಲಿ ಈಗೆಷ್ಟಿದೆ ಪೆಟ್ರೋಲ್, ಡೀಸೆಲ್ ಬೆಲೆ?

ಪೆಟ್ರೋಲ್ 1 ಲೀಟರ್​ಗೆ 270 ರೂ

ಹೈಸ್ಪೀಡ್ ಡೀಸೆಲ್ 1 ಲೀಟರ್​ಗೆ 258 ರೂ

ಸೀಮೆ ಎಣ್ಣೆ 1 ಲೀಟರ್​ಗೆ 164.07 ರೂ

ಲೈಟ್ ಡೀಸೆಲ್ ಆಯಿಲ್ 1 ಲೀಟರ್​ಗೆ 152.65 ರೂ

ಇಲ್ಲಿ ಮೇಲೆ ತಿಳಿಸಿರುವ ದರ ಪಾಕಿಸ್ತಾನೀ ರುಪಾಯಿ ಕರೆನ್ಸಿಯದ್ದು. ಭಾರತದ ರುಪಾಯಿ ಕರೆನ್ಸಿಯಲ್ಲಿ ಬೆಲೆ ನೋಡುವುದಾದರೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 77.97 ರುಪಾಯಿ ಆಗುತ್ತದೆ. ಒಂದು ಯುಎಸ್ ಡಾಲರ್​ಗೆ 82.21 ಭಾರತೀಯ ರುಪಾಯಿಯಷ್ಟು ಬೆಲೆ ಇದೆ. ಹಾಗೆಯೇ, 284.70 ಪಾಕಿಸ್ತಾನೀ ರುಪಾಯಿ ಆಗುತ್ತದೆ. ಒಂದು ಭಾರತೀಯ ರುಪಾಯಿಯು 3.46 ಪಾಕಿಸ್ತಾನೀ ರುಪಾಯಿಗೆ ಸಮವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್