AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಪ್ರಧಾನಿಯಾದಾಗ ನೀನು ಹುಟ್ಟಿರಲೇ ಇಲ್ಲ: ಪಾಕ್ ಸೇನಾಧಿಕಾರಿ ಮೇಲೆ ಗುಡುಗಿದ ಇಮ್ರಾನ್ ಖಾನ್

Imran Khan ತನ್ನನ್ನು ಕಪಟ ವ್ಯಕ್ತಿ ಎಂದು ಕರೆದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಡೈರೆಕ್ಟರ್-ಜನರಲ್ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿನ್ನು ಟೀಕಿಸಿದ ಇಮ್ರಾನ್ ಖಾನ್,  ಮಿಸ್ಟರ್ ಡಿಜಿ ಐಎಸ್​​ಪಿಆರ್,​​ ನಾನು ನನ್ನ ದೇಶವನ್ನು ಪ್ರತಿನಿಧಿಸುವಾಗ ಮತ್ತು ಅದಕ್ಕೆ ಒಳ್ಳೆಯ ಹೆಸರನ್ನು ಗಳಿಸಿದಾಗ ನೀವು ಹುಟ್ಟಿರಲಿಲ್ಲ

ನಾನು ಪ್ರಧಾನಿಯಾದಾಗ ನೀನು ಹುಟ್ಟಿರಲೇ ಇಲ್ಲ: ಪಾಕ್ ಸೇನಾಧಿಕಾರಿ ಮೇಲೆ ಗುಡುಗಿದ ಇಮ್ರಾನ್ ಖಾನ್
ಇಮ್ರಾನ್ ಖಾನ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 14, 2023 | 2:06 PM

Share

ಲಾಹೋರ್: ಸುಪ್ರೀಂಕೋರ್ಟ್‌ನ (Supreme Court) ಆದೇಶದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಬಂಧನದಿಂದ ಬಿಡುಗಡೆಯಾದ ನಂತರ ಶನಿವಾರ ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ, ಪಾಕಿಸ್ತಾನದ (Pakistan) ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ರಾಜಕೀಯಕ್ಕೆ ಧುಮುಕಲು ತನ್ನದೇ ಆದ ರಾಜಕೀಯ ಪಕ್ಷವನ್ನು ರಚಿಸುವಂತೆ ಮಿಲಿಟರಿ ಅಧಿಕಾರಿಗೆ ಸಲಹೆ ನೀಡಿದ್ದಾರೆ. ಅದೇ ವೇಳೆ ದೇಶವನ್ನು ಸಂಪೂರ್ಣ ಅವ್ಯವಸ್ಥೆಯಿಂದ ರಕ್ಷಿಸಲು ಹೆಚ್ಚಿನದ್ದು ಯೋಚಿಸಿ ಎಂದಿದ್ದಾರೆ. ರಾತ್ರಿ 8 ಗಂಟೆಗೆ ತಮ್ಮ ಜಮಾನ್ ಪಾರ್ಕ್ ನಿವಾಸದಿಂದ ಭಾಷಣ ಮಾಡಿದ ಖಾನ್, ತನ್ನ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅನ್ನು ಹತ್ತಿಕ್ಕಲು ಮಿಲಿಟರಿ  ಕೈಗೊಂಡಿರುವ ವರ್ತನೆ ಬಗ್ಗೆ ಕೋಪಗೊಂಡಿದ್ದಾರೆ. ಪಿಟಿಐ ವಿರೋಧಿ ನೀತಿ ಯಾಕೆ? ಅದನ್ನು ಪರಿಶೀಲಿಸಿ ಎಂದು ಮಿಲಿಟರಿ ನಾಯಕತ್ವಕ್ಕೆ ಖಾನ್ ಹೇಳಿದ್ದಾರೆ. ಈ ನಿಲುವುಗೆ ಈಗಾಗಲೇ ದೇಶವನ್ನು ದುರಂತದ ಅಂಚಿಗೆ ತಂದಿವೆ ಎಂದು ಖಾನ್ ಹೇಳಿದ್ದಾರೆ. ಶುಕ್ರವಾರ ಜಾಮೀನು ದೊರೆತರೂ ಮರು ಬಂಧನದ ಭಯದಿಂದ ಇಸ್ಲಾಮಾಬಾದ್ ಹೈಕೋರ್ಟ್ (Islamabad High Court) ಆವರಣದಲ್ಲಿ ಗಂಟೆಗಳ ಕಾಲ ಬಂಧಿತರಂತಿದ್ದ ಖಾನ್, ಶನಿವಾರ ಲಾಹೋರ್ ಗೆ ಮರಳಿದ್ದರು.

ಲಾಹೋರ್‌ಗೆ ಹೊರಡುವ ಮೊದಲು, 70 ವರ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರು ಎಲ್ಲಾ ಪ್ರಕರಣಗಳಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ ನಂತರ ತನ್ನನ್ನು ಅಪಹರಣ ಮಾಡಿದ ಸರ್ಕಾರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ತನ್ನನ್ನು ಕಪಟ ವ್ಯಕ್ತಿ ಎಂದು ಕರೆದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಡೈರೆಕ್ಟರ್-ಜನರಲ್ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿನ್ನು ಟೀಕಿಸಿದ ಇಮ್ರಾನ್ ಖಾನ್,  ಮಿಸ್ಟರ್ ಡಿಜಿ ಐಎಸ್​​ಪಿಆರ್,​​ ನಾನು ನನ್ನ ದೇಶವನ್ನು ಪ್ರತಿನಿಧಿಸುವಾಗ ಮತ್ತು ಅದಕ್ಕೆ ಒಳ್ಳೆಯ ಹೆಸರನ್ನು ಗಳಿಸಿದಾಗ ನೀವು ಹುಟ್ಟಿರಲಿಲ್ಲ. ನನ್ನನ್ನು ಕಪಟ ವ್ಯಕ್ತಿ ಮತ್ತು ಸೇನೆಯ ವಿರೋಧಿ ಎಂದು ಕರೆದಿದ್ದಕ್ಕಾಗಿ ನೀವು ನಾಚಿಕೆಪಡಬೇಕು. ಮಿಲಿಟರಿಯ ಮಾಧ್ಯಮ ವಿಭಾಗವಾದ ISPR ಅಂತಹ ವಿಷಯಗಳನ್ನು (ರಾಜಕಾರಣಿಯ ಬಗ್ಗೆ) ಎಂದಿಗೂ ಹೇಳಿಲ್ಲ.

ನೀವು ರಾಜಕೀಯಕ್ಕೆ ಧುಮುಕಿದ್ದೀರಿ, ನೀವೇಕೆ ನಿಮ್ಮ ಸ್ವಂತ ಪಕ್ಷವನ್ನು ರಚಿಸಬಾರದು?. ಇಂತಹ ಕ್ಷುಲ್ಲಕ ಆರೋಪಗಳನ್ನು ಮಾಡುವ ಹಕ್ಕು ನಿಮಗೆ ಯಾರು ನೀಡಿದ್ದಾರೆ. ನಾನು ಮಾಡಿದಷ್ಟು ಸೇನೆಗೆ ಬೇರೆ ಯಾರೂ ಹಾನಿ ಮಾಡಿಲ್ಲ ಎಂದು ಹೇಳಲು ಸ್ವಲ್ಪ ನಾಚಿಕೆಪಡಬೇಕು. ನೀವು ನಮ್ಮನ್ನು ತುಳಿಯುತ್ತೀರಿ ಎಂದಿದ್ದಾರೆ ಖಾನ್.

ನಾನು ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಸೇನೆಯ ಇಮೇಜ್ ಚೆನ್ನಾಗಿತ್ತೇ ಅಥವಾ ಈಗ ಚೆನ್ನಾಗಿದೆಯೇ? ಆಗ ಜನರು ಸೇನೆಯನ್ನು ಇಷ್ಟಪಟ್ಟಿದ್ದರು. ಸೇನಾ ಮುಖ್ಯಸ್ಥ (ಮಾಜಿ ಜನರಲ್ ಕಮರ್ ಜಾವೇದ್ ಬಾಜ್ವಾ) ನನ್ನ ಬೆನ್ನಿಗೆ ಚೂರಿ ಹಾಕಿ ಪಾಕಿಸ್ತಾನದ ಅತ್ಯಂತ ಕುಖ್ಯಾತ ಮತ್ತು ಭ್ರಷ್ಟ ಕ್ರಿಮಿನಲ್‌ಗಳನ್ನು ಅಧಿಕಾರಕ್ಕೆ ತಂದಾಗ, ಜನಸಾಮಾನ್ಯರು ಸೇನೆಯನ್ನು ಟೀಕಿಸಲು ಪ್ರಾರಂಭಿಸಿದರು. ಅದು ನನ್ನಿಂದಲ್ಲ. ಸೇನಾ ಮುಖ್ಯಸ್ಥರ ಕ್ರಮಗಳು ಸೇನೆಯನ್ನು ಗುರಿಯಾಗಿಸಿಕೊಂಡು ಟೀಕೆಗೆ ಗುರಿಯಾಗುತ್ತಿವೆ. ಜನರು ತನ್ನನ್ನು ನಂಬಿರುವುದರಿಂದ ಜಗತ್ತಿನಾದ್ಯಂತ ಸಹಾಯ ಸಿಕ್ಕಿತು ಎಂದು ಖಾನ್ ಹೇಳಿದ್ದಾರೆ.

ಇದನ್ನೂ ಓದಿ: Operation Samudragupta: ಹಡಗಿನ ಮೂಲಕ ಭಾರತಕ್ಕೆ ಬರುತ್ತಿತ್ತು 12 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್, ಪಾಕಿಸ್ತಾನದೊಂದಿಗೆ ನೇರ ಸಂಪರ್ಕ

ನೀವು ಇಮ್ರಾನ್ ಖಾನ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ. ಅವರು ನನ್ನನ್ನು ನಂಬಿ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ಪರಿಗಣಿಸಿದ್ದರಿಂದ ನನಗೆ ಹೆಚ್ಚಿನ ಸಹಾಯ ನೀಡಿದರು. ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕೂಡ ನನ್ನನ್ನು ಪ್ರಾಮಾಣಿಕ (ಸಾದಿಕ್ ಔರ್ ಅಮೀನ್) ಎಂದು ಘೋಷಿಸಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ