Bearer Cheque: ಬೇರರ್ ಚೆಕ್; ಎಷ್ಟು ಹಣ ಸ್ವೀಕರಿಸಬಹುದು? ಇನ್ಕಂ ಟ್ಯಾಕ್ಸ್ ನಿಯಮವೇನಿದೆ?

Limit Of Amount In Bearer Cheque: ಬೇರರ್ ಚೆಕ್​ನಲ್ಲಿ 2 ಲಕ್ಷ ರೂಗಿಂತ ಹೆಚ್ಚು ಮೊತ್ತ ಹಾಕಲಾಗಿದ್ದರೆ ಆಗ ಆದಾಯ ತೆರಿಗೆ ಕಾನೂನು ಅಡ್ಡಿ ಬರುತ್ತದೆ. ಐಟಿ ಸೆಕ್ಷನ್ 269ಎಸ್​ಟಿ ಪ್ರಕಾರ ಒಂದು ದಿನದಲ್ಲಿ 2 ಲಕ್ಷ ರೂಗಿಂತ ಹೆಚ್ಚು ಮೊತ್ತದ ಕ್ಯಾಷ್ ವಹಿವಾಟು ನಡೆಯುವಂತಿಲ್ಲ.

Bearer Cheque: ಬೇರರ್ ಚೆಕ್; ಎಷ್ಟು ಹಣ ಸ್ವೀಕರಿಸಬಹುದು? ಇನ್ಕಂ ಟ್ಯಾಕ್ಸ್ ನಿಯಮವೇನಿದೆ?
ಬ್ಯಾಂಕ್ ವಹಿವಾಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2023 | 12:27 PM

ಬೇರರ್ ಚೆಕ್ (Bearer Cheque) ಬಗ್ಗೆ ಕೇಳಿರಬಹುದು. ನಾವು ನೀವು ಸಾಮಾನ್ಯವಾಗಿ ಬಳಸುವುದು ಆರ್ಡರ್ ಚೆಕ್. ಬೇರರ್ ಚೆಕ್ ಕೂಡ ಅದೇ ಚೆಕ್ ಆದರೂ ಸ್ವೀಕೃತರು ಯಾರೇ ಆದರೂ ಚೆಕ್ ಬಳಸಬಹುದು. ಆರ್ಡರ್ ಚೆಕ್​ನಲ್ಲಿ ಸ್ವೀಕೃತರ ಹೆಸರು ಬರೆಯಲಾಗಿದ್ದರೆ ಆ ಹೆಸರಿನ ವ್ಯಕ್ತಿ ಮಾತ್ರ ಹಣ ಪಡೆಯಬಹುದು. ಕ್ರಾಸ್ಡ್ ಚೆಕ್ (Crossed Cheque) ಆದರೆ ಸ್ವೀಕೃತ ವ್ಯಕ್ತಿ ತನ್ನ ಖಾತೆ ಇರುವ ಬ್ಯಾಂಕಿಗೆ ಹೋಗಿ ಅಲ್ಲಿ ಆ ಚೆಕ್ ಅನ್ನು ಸಲ್ಲಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳಬಹುದು. ಬೇರರ್ ಚೆಕ್​ನಿಂದ ಯಾರು ಬೇಕಾದರೂ ಹಣ ವಿತ್​ಡ್ರಾ ಮಾಡಬಹುದು. ಹಣ ಪಡೆಯುವ ವ್ಯಕ್ತಿ ಬ್ಯಾಂಕ್ ಖಾತೆ ಹೊಂದಿರಬೇಕಾದ ಅಗತ್ಯ ಇರುವುದಿಲ್ಲ. ಬೇರರ್ ಚೆಕ್ ಬಳಕೆ ಹೆಚ್ಚು ಇಲ್ಲ. ವ್ಯವಹಾರಗಳಲ್ಲಿ ಕೆಲವೊಮ್ಮೆ ಬೇರರ್ ಚೆಕ್​ಗಳ ಮೂಲಕ ಹಣ ವಹಿವಾಟು ನಡೆಯುವುದುಂಟು.

ಬೇರರ್ ಚೆಕ್​ನಿಂದ ಎಷ್ಟು ಹಣ ವಿತ್​ಡ್ರಾ ಮಾಡಬಹುದು?

ಬೇರರ್ ಚೆಕ್​ನಲ್ಲಿ ಖಾತೆದಾರ ಸಹಿಹಾಕಿ ಯಾವುದೇ ಹಣದ ಮೊತ್ತವನ್ನು ನಮೂದಿಸದಿದ್ದರೆ ಅದು ಬ್ಲ್ಯಾಂಕ್ ಚೆಕ್ ಆಗುತ್ತದೆ. ಚೆಕ್ ಹೊಂದಿರುವವರು ಎಷ್ಟು ಬೇಕಾದರೂ ಹಣ ನಮೂದಿಸಬಹುದು. ಆದರೆ, ಬೇರರ್ ಚೆಕ್​ನಲ್ಲಿ 2 ಲಕ್ಷ ರೂಗಿಂತ ಹೆಚ್ಚು ಮೊತ್ತ ಹಾಕಲಾಗಿದ್ದರೆ ಆಗ ಆದಾಯ ತೆರಿಗೆ ಕಾನೂನು ಅಡ್ಡಿ ಬರುತ್ತದೆ. ಐಟಿ ಸೆಕ್ಷನ್ 269ಎಸ್​ಟಿ ಪ್ರಕಾರ ಒಂದು ದಿನದಲ್ಲಿ 2 ಲಕ್ಷ ರೂಗಿಂತ ಹೆಚ್ಚು ಮೊತ್ತದ ಕ್ಯಾಷ್ ವಹಿವಾಟು ನಡೆಯುವಂತಿಲ್ಲ. ಒಂದು ವೇಳೆ ಬೇರರ್ ಚೆಕ್​ನಿಂದ 2.5 ಲಕ್ಷ ರೂ ಹಣವನ್ನು ಒಮ್ಮೆಗೇ ಪಡೆದರೆ ಆಗ ಅಷ್ಟೂ ಮೊತ್ತದ ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿPVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?

50,000 ರೂಗಿಂತ ಹೆಚ್ಚಿನ ಮೊತ್ತಕ್ಕೆ ಕೆವೈಸಿ ಕಡ್ಡಾಯ

ಬೇರರ್ ಚೆಕ್ ಬಳಸಲು ಖಾತೆದಾರರ ಬ್ಯಾಂಕ್​ನ ಯಾವುದೇ ಬ್ರ್ಯಾಚ್​ಗೆ ಬೇಕಾದರೂ ಹೋಗಿ ಹಣ ಪಡೆಯಬಹುದು. ಈ ಚೆಕ್ ಇದ್ದವರು ಯಾರೇ ಆದರೂ ಹಣ ಪಡೆಯಲು ಅಡ್ಡಿ ಇರುವುದಿಲ್ಲ. ಆದರೆ, 50,000 ಸಾವಿರ ರೂಗಿಂತ ಹೆಚ್ಚು ಹಣವನ್ನು ಬೇರರ್ ಚೆಕ್ ಮೂಲಕ ಪಡೆದರೆ ಬ್ಯಾಂಕಿಗೆ ಕೆವೈಸಿ ಸಲ್ಲಿಸಬೇಕಾಗುತ್ತದೆ. ಕೆಲ ಬ್ಯಾಂಕುಗಳು 50,000 ರೂಗಿಂತ ಕಡಿಮೆ ಮೊತ್ತಕ್ಕೂ ವ್ಯಕ್ತಿಯಿಂದ ಕೆವೈಸಿ ದಾಖಲೆಗಳನ್ನು ಪಡೆಯಲು ಮುಂದಾಗಬಹುದು. ಆದರೆ, ಕಾನೂನು ಪ್ರಕಾರ ಅದು ಕಡ್ಡಾಯವಲ್ಲ. 50,000 ರೂಗಿಂತ ಹೆಚ್ಚು ಮೊತ್ತಕ್ಕೆ ಮಾತ್ರ ಕೆವೈಸಿ ಕಡ್ಡಾಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ