PVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?

India's Biggest Cinema Exhibitor Gets Huge Loss: 2023ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಪಿವಿಆರ್ ಐನಾಕ್ಸ್ ಸಂಸ್ಥೆ 333 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಈ ಕಾರಣಕ್ಕೆ ನಷ್ಟ ತರುತ್ತಿರುವ ಸಿನಿಮಾ ಹಾಲ್​ಗಳನ್ನು ಮುಚ್ಚಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆ.

PVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?
ಪಿವಿಆರ್ ಐನಾಕ್ಸ್
Follow us
|

Updated on: May 16, 2023 | 10:37 AM

ನವದೆಹಲಿ: ದೇಶದ ಮೊದಲ ಮಲ್ಟಿಪ್ಲೆಕ್ಸ್ ಆಪರೇಟರ್ ಎನಿಸಿದ ಪಿವಿಆರ್ ಇದೀಗ 50 ಸಿನಿಮಾ ಸ್ಕ್ರೀನ್​ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. 2023ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಪಿವಿಆರ್ ಐನಾಕ್ಸ್ ಸಂಸ್ಥೆ (PVR Inox) 333 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಈ ಕಾರಣಕ್ಕೆ ನಷ್ಟ ತರುತ್ತಿರುವ ಸಿನಿಮಾ ಹಾಲ್​ಗಳನ್ನು ಮುಚ್ಚಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆ. 2022ರ ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲೂ ಪಿವಿಆರ್ ಸಂಸ್ಥೆ 105.49 ಕೋಟಿ ರೂ ನಿವ್ವಳ ನಷ್ಟ ಅನುಭವಿಸಿತ್ತು. ಈ ವರ್ಷದ ತ್ರೈಮಾಸಿಕ ಅವಧಿಯಲ್ಲಿ 3 ಪಟ್ಟು ಹೆಚ್ಚು ನಷ್ಟವಾಗಿದೆ. ಆದರೆ, 2022ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಅದರ ಆದಾಯ 536.17 ಕೋಟಿ ರೂ ಇದ್ದದ್ದು ಈ ವರ್ಷ 1,143.17 ಕೋಟಿ ರೂಗೆ ಏರಿದೆ.

ಅಷ್ಟು ಆದಾಯ ಬಂದರೂ ಈ ಬೃಹತ್ ಮಲ್ಟಿಪ್ಲೆಕ್ಸ್ ಸಂಸ್ಥೆ 333.90 ಕೋಟಿ ರೂ ನಿವ್ವಳ ನಷ್ಟ ಕಂಡಿರುವುದು ಗಮನಾರ್ಹ. ಆ ಕ್ವಾರ್ಟರ್​ನಲ್ಲಿ ಪಿವಿಆರ್ ಐನಾಕ್ಸ್​ನ ಒಟ್ಟು ವೆಚ್ಚ 1,364.11 ಕೋಟಿ ರೂ ಎನ್ನಲಾಗಿದೆ. ಹೀಗಾಗಿ, ನಷ್ಟ ಅಗಾಧವಾಗಿದೆ.

ನಾಲ್ಕೈದು ತಿಂಗಳ ಹಿಂದಿನವರೆಗೂ ಪಿವಿಆರ್ ಮತ್ತು ಐನಾಕ್ಸ್ ಎರಡು ಬೇರೆ ಕಂಪನಿಗಳಾಗಿದ್ದವು. 2023 ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಎರಡೂ ಸಂಸ್ಥೆಗಳು ವಿಲೀನಗೊಂಡು ಪಿವಿಆರ್ ಐನಾಕ್ಸ್ ಎಂದು ಹೆಸರು ಬದಲಿಸಲಾಯಿತು. ಹೀಗಾಗಿ, ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅದರ ಲಾಭ ನಷ್ಟದ ವರದಿಯಲ್ಲಿ ಹಿಂದಿನ ಅಂಕಿ ಅಂಶಗಳಿಗಿಂತ ತುಸು ಭಿನ್ನವಾಗಿದೆ. ಕುತೂಹಲವೆಂದರೆ ಐನಾಕ್ಸ್ ವಿಲೀನವಾಗುವ ಮುನ್ನ ಪಿವಿಆರ್ ಸಂಸ್ಥೆ 2022ರ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ 16.1 ಕೋಟಿ ರೂ ಲಾಭ ಮಾಡಿತ್ತು. ಐನಾಕ್ಸ್ ವಿಲೀನಗೊಂಡ ಬಳಿಕ ನಷ್ಟ ಹೆಚ್ಚಾಗಿದೆ.

ಇದನ್ನೂ ಓದಿಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್​ನಲ್ಲಿ ‘ಬ್ರಹ್ಮ ಕಮಲ’ಕ್ಕೆ ಭಾರೀ ಬೇಡಿಕೆ; ಆಸ್ಟ್ರೇಲಿಯಾದಲ್ಲಿ ಪ್ರದರ್ಶನ ಕಾಣಲಿದೆ ಸಿನಿಮಾ

ಪಿವಿಆರ್ ಐನಾಕ್ಸ್​ನ 50 ಸ್ಕ್ರೀನ್​ಗಳು ಎಲ್ಲೆಲ್ಲಿ ಮುಚ್ಚಲಾಗುತ್ತಿದೆ?

ಪಿವಿಆರ್ ಮತ್ತು ಐನಾಕ್ಸ್ ಎರಡೂ ಸೇರಿ ಭಾರತ ಮತ್ತು ಶ್ರೀಲಂಕಾದಲ್ಲಿ 115 ನಗರಗಳಲ್ಲಿ 361 ಸಿನಿಮಾ ಮಂದಿರಗಳನ್ನು ಹೊಂದಿದ್ದು, ಅದರಲ್ಲಿ 1,670 ಸಿನಿಮಾ ಸ್ಕ್ರೀನ್​ಗಳನ್ನು ಆಪರೇಟ್ ಮಾಡಲಾಗುತ್ತಿದೆ. ಪ್ರತೀ ವರ್ಷವೂ ಹೊಸ ಸ್ಕ್ರೀನ್ ಹಾಲ್​ಗಳನ್ನು ಸೇರಿಸಲಾಗುತ್ತಿದೆ. 2023ರ ಹಣಕಾಸು ವರ್ಷದಲ್ಲಿ 140 ಪರದೆಗಳನ್ನು ಸೇರಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ 180 ಸ್ಕ್ರೀನ್​ಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರ ಮಧ್ಯೆ ನಷ್ಟ ತರುತ್ತಿರುವ 50 ಸ್ಕ್ರೀನ್​ಗಳನ್ನು ಮುಚ್ಚಲಾಗುತ್ತದೆ.

ಕೆಲ ಪ್ರದೇಶಗಳಲ್ಲಿ ಮತ್ತು ಮಾಲ್​ಗಳಲ್ಲಿ ಜನರು ಹೋಗುವುದು ಕಡಿಮೆ ಆಗಿದೆ. ಅಂಥ ಕಡೆ ಇರುವ ಸಿನಿಮಾ ಸ್ಕ್ರೀನ್​ಗಳನ್ನು ಗುರುತಿಸಿ ಮುಚ್ಚುತ್ತೇವೆ ಎಂದು ಪಿವಿಆರ್ ಐನಾಕ್ಸ್ ಹೇಳಿದೆ.

ಇದನ್ನೂ ಓದಿ: Business Ideas: 70 ಸಾವಿರ ಖರ್ಚು ಮಾಡಿ 3-4 ಲಕ್ಷ ರೂ. ಆದಾಯ ಗಳಿಸಿ!

ಹಿಂದಿ ಸಿನಿಮಾ ನೋಡೋರೂ ಕಡಿಮೆ ಆದ್ರಾ?

ಪಿವಿಆರ್ ಐನಾಕ್ಸ್ ಸಂಸ್ಥೆ ಒಂದು ಇಂಟರೆಸ್ಟಿಂಗ್ ಮಾಹಿತಿ ನೀಡಿದೆ. ಕಳೆದ 4 ಕ್ವಾರ್ಟರ್​ನಲ್ಲಿ ಹಿಂದಿ ಸಿನಿಮಾಗಳಿಗೆ ಜನರ ಸ್ಪಂದನೆ ಬಹಳ ಮಿಶ್ರ ರೀತಿಯಲ್ಲಿದೆ, ಅನಿಶ್ಚಿತ ಪರಿಸ್ಥಿತಿ ಇದೆ. ಕೋವಿಡ್​ಗೆ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗೀಗ ಪ್ರೇಕ್ಷಕರ ಭಾವನೆಗಳಿಗೆ ಹೆಚ್ಚು ಹತ್ತಿರ ಇರುವ ಸಿನಿಮಾಗಳು ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿವೆ ಎಂದು ಪಿವಿಆರ್ ಹೇಳಿದೆ.

ಹಿಂದಿ ಸಿನಿಮಾಗಳ ಕಲೆಕ್ಷನ್ ಕಡಿಮೆ ಆಗಿದ್ದು ಒಂದಾದರೆ, ಹಾಲಿವುಡ್ ಚಿತ್ರಗಳು ಹೆಚ್ಚು ಬಿಡುಗಡೆ ಆಗದೇ ಇದ್ದದ್ದು ಮಲ್ಟಿಪ್ಲೆಕ್ಸ್ ನಷ್ಟಕ್ಕೆ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳು ಮಲ್ಟಿಪ್ಲೆಕ್ಸ್​ಗಳಿಗೆ ಹೆಚ್ಚು ಆದಾಯಮೂಲವಾಗಿರುತ್ತವೆ. ಈಗೀಗ ಪ್ರಾದೇಶಿಕ ಸಿನಿಮಾಗಳು ಮಲ್ಟಿಪ್ಲೆಕ್ಸ್​ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ತೆರೆ ಕಾಣುತ್ತಿದ್ದು, ಉತ್ತಮ ಕಲೆಕ್ಷನ್ ಕೂಡ ಪಡೆಯುತ್ತಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..