AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Business Ideas: 70 ಸಾವಿರ ಖರ್ಚು ಮಾಡಿ 3-4 ಲಕ್ಷ ರೂ. ಆದಾಯ ಗಳಿಸಿ!

ಸರಿಯಾಗಿ ಕೃಷಿ ಮಾಡಿದರೆ ಹೆಚ್ಚುವರಿ ಆದಾಯ ತಾನಾಗಿಯೇ ಬರಲಿದೆ. ನೀವು ಕೂಡ ಒಂದು ಎಕರೆ ಹೊಲವನ್ನು ಹೊಂದಿದ್ದರೆ, ಅದರಲ್ಲಿ ಮಾಡುವ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. ಹಲವು ರೈತರಿಗೆ ಉತ್ತಮ ಲಾಭ ನೀಡುವ ಬೆಳೆ ಬಾಳೆ ಕೃಷಿಯಾಗಿದೆ.

Business Ideas: 70 ಸಾವಿರ ಖರ್ಚು ಮಾಡಿ 3-4 ಲಕ್ಷ ರೂ. ಆದಾಯ ಗಳಿಸಿ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: May 15, 2023 | 9:44 PM

Share

ಸರಿಯಾಗಿ ಕೃಷಿ ಮಾಡಿದರೆ ಹೆಚ್ಚುವರಿ ಆದಾಯ ತಾನಾಗಿಯೇ ಬರಲಿದೆ. ನೀವು ಕೂಡ ಒಂದು ಎಕರೆ ಹೊಲವನ್ನು ಹೊಂದಿದ್ದರೆ, ಅದರಲ್ಲಿ ಮಾಡುವ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. ಹಲವು ರೈತರಿಗೆ ಉತ್ತಮ ಲಾಭ ನೀಡುವ ಬೆಳೆ ಬಾಳೆ ಕೃಷಿಯಾಗಿದೆ.

ಕಡಿಮೆ ವೆಚ್ಚದಲ್ಲಿ ಬಾಳೆ ಕೃಷಿ ಮಾಡಿ ಹೆಚ್ಚಿನ ಲಾಭ ಪಡೆಯಬಹುದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ರೈತರು ಬಾಳೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಲ್ಲದೆ ಬಾಳೆ ಬೆಳೆಯಲು ಬೆಚ್ಚನೆಯ ವಾತಾವರಣವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬಾಳೆ ಕೃಷಿ ಕಷ್ಟ.

ಒಂದು ಎಕರೆ ಬಾಳೆ ಕೃಷಿಗೆ ಸುಮಾರು 70,000 ದಿಂದ 80,000 ರೂ. ವರೆಗೂ ವೆಚ್ಚವಾಗಬಹುದು. ಅದರೊಂದಿಗೆ ಈ ಬೆಳೆ ಮೂಲಕ ಒಂದು ಬಾರಿ ಹೂಡಿಕೆಗೆ ಸುಮಾರು 3.5 ಲಕ್ಷ ರೂ.ನಿಂದ 4 ಲಕ್ಷ ರೂ.ವರೆಗೆ ಗಳಿಸಬಹುದು. ಇತರ ಬೆಳೆಗಳಿಗೆ ಹೋಲಿಸಿದರೆ ಈ ಕೃಷಿ ಸುಲಭ. ಬಾಳೆ ಬೆಳೆಯಲು ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ವೆಚ್ಚವೂ ಕಡಿಮೆಯಾಗುತ್ತದೆ. ಸಾವಯವ ಗೊಬ್ಬರ ಬಳಸಿದರೆ ಉತ್ತಮ ಫಸಲು ದೊರೆಯುತ್ತದೆ. ಬಾಳೆ ಕಟಾವು ಮಾಡಿದ ನಂತರ ಉಳಿಯುವ ತ್ಯಾಜ್ಯವನ್ನು ಹೊಲದ ಹೊರಗೆ ಬಿಟ್ಟು ಬಿಟ್ಟರೆ ಅತ್ಯುತ್ತಮ ಗೊಬ್ಬರವಾಗುತ್ತದೆ.

ಇದನ್ನೂ ಓದಿ: Arecanut Price: ಇಂದಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಸಿಂಗಾಪುರದಲ್ಲಿ ಹೆಚ್ಚಾಗಿ ಬೆಳೆಯುವ ರೋಬಸ್ಟಾ ಬಾಳೆಯನ್ನು ನಮ್ಮ ದಕ್ಷಿಣದ ದೇಶಗಳಲ್ಲಿ ಚೆನ್ನಾಗಿ ಬೆಳೆಯಲಾಗುತ್ತದೆ. ಈ ರೀತಿಯ ಬಾಳೆ ಹೆಚ್ಚಿನ ಉತ್ಪಾದನೆಯನ್ನು ಹೊಂದಿದೆ. ವಾಮನ್, ಸಲ್ಭೋಗ್, ಅಲ್ಪಾನ್, ಪುವಾನ್ ತಳಿಗಳೂ ಉತ್ತಮ ಬಾಳೆ ತಳಿಗಳಾಗಿವೆ. ಬಾಳೆ ಕೃಷಿ ಕಡಿಮೆ ರಿಸ್ಕ್ ಹೊಂದಿದ್ದು, ಹೆಚ್ಚು ಲಾಭದಾಯಕವಾಗಿದೆ. ಬಾಳೆ ಎಲೆಗಳನ್ನು ಮಾರಾಟ ಮಾಡುವುದರಿಂದಲೂ ಬಾಳೆ ಕೃಷಿಯ ಲಾಭವನ್ನು ದ್ವಿಗುಣಗೊಳಿಸಬಹುದು. ಇದರ ಎಲೆಗಳನ್ನು ರೆಸ್ಟೋರೆಂಟ್‌ಗಳಲ್ಲಿ ಪ್ಲೇಟ್‌ಗಳಿಗಾಗಿ ಬಳಸಲಾಗುತ್ತದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ