Vidya Lakshmi Scheme: ‘ವಿದ್ಯಾಲಕ್ಷ್ಮೀ’ ಯೋಜನೆ; ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ; ಇದಕ್ಕೆ ಬಡ್ಡಿ, ಅರ್ಹತೆ ಇತ್ಯಾದಿ ಬಗ್ಗೆ ಮಾಹಿತಿ

Education Loan From Central Govt: ಕೆಳಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆಂದು ಸರ್ಕಾರ ವಿದ್ಯಾಲಕ್ಷ್ಮೀ ಯೋಜನೆ ಮೂಲಕ ಸಾಲಸೌಲಭ್ಯ ಒದಗಿಸುತ್ತದೆ. ಈ ಸಾಲದ ಮೊತ್ತ, ಬಡ್ಡಿ ಇತ್ಯಾದಿ ಮಾಹಿತಿ ಇಲ್ಲಿದೆ....

Vidya Lakshmi Scheme: ‘ವಿದ್ಯಾಲಕ್ಷ್ಮೀ’ ಯೋಜನೆ; ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ; ಇದಕ್ಕೆ ಬಡ್ಡಿ, ಅರ್ಹತೆ ಇತ್ಯಾದಿ ಬಗ್ಗೆ ಮಾಹಿತಿ
ವಿದ್ಯಾರ್ಥಿನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 15, 2023 | 12:42 PM

ಇವತ್ತು ಶಿಕ್ಷಣ ಬಲು ದುಬಾರಿ. ಖಾಸಗಿ ಶಾಲೆಗಳಲ್ಲಿ ಪ್ರೀ ಸ್ಕೂಲ್ ಹಂತದಿಂದಲೇ ಲಕ್ಷಗಟ್ಟಲೆ ಶುಲ್ಕಗಳಿವೆ. ಇಪ್ಪತ್ತು ವರ್ಷಗಳಿಗೂ ಹಿಂದೆ ಇದ್ದ ಸ್ಥಿತಿ ಈಗ ಊಹಿಸಲೂ ಸಾಧ್ಯವಾಗದಂತಿದೆ. ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ಬಡವರಿಗೆ ಕೈಗೆಟುಕದಂತಾಗಿದೆ. ಮೆರಿಟ್ ಮೇಲೆ ಹೋದರೂ ವೃತ್ತಿಪರ ಶಿಕ್ಷಣಕ್ಕೆ ಲಕ್ಷಾಂತರ ರೂ ವ್ಯಯವಾಗುತ್ತದೆ. ಇದಕ್ಕೆಂದೇ ವಿವಿಧ ಬ್ಯಾಂಕುಗಳು ಶಿಕ್ಷಣ ಸಾಲಗಳನ್ನು ನೀಡುತ್ತವೆ. ಕೇಂದ್ರ ಸರ್ಕಾರವೂ ವಿದ್ಯಾರ್ಥಿಗಳ ಶಿಕ್ಷಣ ಸಾಲಕ್ಕೆ ವಿದ್ಯಾ ಲಕ್ಷ್ಮೀ ಯೋಜನೆ (Vidya Lakshmi Scheme) ತಂದಿದೆ. ಈ ಸ್ಕೀಮ್ ಬಗ್ಗೆ ಕೆಲ ಪ್ರಮುಖ ಮಾಹಿತಿ ಇಲ್ಲಿದೆ.

ವಿದ್ಯಾ ಲಕ್ಷ್ಮೀ ಯೋಜನೆಯ ಬಡ್ಡಿ ದರ, ಫಲಾನುಭವಿಗಳ ಅರ್ಹತೆ ಏನು?

ವಿದ್ಯಾಲಕ್ಷ್ಮೀ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ಮತ್ತು ಶಿಕ್ಷಣ ಸಾಲಗಳನ್ನು ನೀಡಲಾಗುತ್ತದೆ. ವಿವಿಧ ಬ್ಯಾಂಕುಗಳ ಮೂಲಕ ಸಾಲಗಳನ್ನು ಪಡೆಯಬಹುದು.

ವಿದ್ಯಾಲಕ್ಷ್ಮೀ ಯೋಜನೆ ಅಡಿ ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 5 ಲಕ್ಷ ರೂಗಿಂತ ಕಡಿಮೆ ಇರಬೇಕು ಎನ್ನುವ ಷರುತ್ತು ಇದೆ. ಅಂದರೆ ಕೆಳಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಈ ಯೋಜನೆಯಲ್ಲಿ ಎಜುಕೇಶನ್ ಲೋನ್ ಸಿಗುತ್ತದೆ.

ಇದನ್ನೂ ಓದಿDoctors: ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ; ದೇಶದ ಎಲ್ಲಾ ವೈದ್ಯರ ಹೆಸರು ನ್ಯಾಷನಲ್ ಮೆಡಿಕಲ್ ರಿಜಿಸ್ಟರ್​ನಲ್ಲಿ

ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ಇಂಟಿಗ್ರೇಟೆಡ್ ಕೋರ್ಸ್​ಗಳಿಗೆ ಶಿಕ್ಷಣ ಸಾಲ ಪಡೆಯಬಹುದು. ಆದರೆ, ಒಬ್ಬ ವಿದ್ಯಾರ್ಥಿ ಒಮ್ಮೆ ಮಾತ್ರ ಶಿಕ್ಷಣ ಸಾಲ ಪಡೆಯಬಹುದು.

ವಿದ್ಯಾಲಕ್ಷ್ಮೀ ಯೋಜನೆ ಅಡಿ ಶಿಕ್ಷಣ ಸಾಲದಲ್ಲಿ 7.5 ಲಕ್ಷ ರೂವರೆಗಿನ ಹಣಕ್ಕೆ ಯಾವುದೇ ಅಡಮಾನ ಇಡುವ ಅಗತ್ಯವಿಲ್ಲ. ಅದಕ್ಕೂ ಹೆಚ್ಚಿನ ಮೊತ್ತಕ್ಕೆ ಏನಾದರೂ ಗಿರವಿ ಇಡಬೇಕು. ಜೊತೆಗೆ ಒಬ್ಬ ಗ್ಯಾರಂಟರ್ ಕೂಡ ಸಹಿ ಹಾಕಬೇಕಾಗುತ್ತದೆ.

ಇನ್ನು ಬಡ್ಡಿ ದರ ವಿಚಾರಕ್ಕೆ ವಿವಿಧ ಬ್ಯಾಂಕುಗಳ ಕನಿಷ್ಠ ಬಡ್ಡಿದರ ಅನ್ವಯ ಆಗುತ್ತದೆ. ಈಗಿನ ಸಂದರ್ಭದಲ್ಲಿ ಶಿಕ್ಷಣ ಸಾಲಗಳಿಗೆ ವಾರ್ಷಿಕ ಶೇ. 8.4ರಿಂದ ಬಡ್ಡಿ ಆರಂಭವಾಗುತ್ತದೆ.

ಇದನ್ನೂ ಓದಿMultibagger: ಒಂದು ವರ್ಷದಲ್ಲಿ 16 ಪಟ್ಟು ಹೆಚ್ಚು ಲಾಭ; ಶೇ. 30 ಡಿವಿಡೆಂಡ್; ಸೌತ್ ಇಂಡಿಯನ್ ಬ್ಯಾಂಕ್​ನ ಷೇರಿಗೆ ಸಖತ್ ಬೇಡಿಕೆ

ವಿದ್ಯಾಲಕ್ಷ್ಮೀ ಸ್ಕೀಮ್; ಶಿಕ್ಷಣ ಸಾಲದ ಮರುಪಾವತಿ ಹೇಗೆ?

ವಿದ್ಯಾಲಕ್ಷ್ಮೀ ಯೋಜನೆ ಅಡಿ ತೆಗೆದುಕೊಳ್ಳಲಾಗುವ ಶಿಕ್ಷಣ ಸಾಲದ ಕಂತು ಹಣವನ್ನು ತತ್​ಕ್ಷಣದಿಂದಲೇ ಕಟ್ಟಲು ಆರಂಭಿಸಬೇಕಿಲ್ಲ. ಶಿಕ್ಷಣ ಮುಗಿದ ಒಂದು ವರ್ಷದವರೆಗೂ ಅಥವಾ ಕೆಲಸ ಸಿಕ್ಕ ಆರು ತಿಂಗಳವರೆಗೂ ಕಂತು ಕಟ್ಟುವುದರಿಂದ ವಿನಾಯಿತಿ ನೀಡಲಾಗುತ್ತದೆ. ಅದಾದ ಬಳಿಕ ಇಎಂಐ ಕಟ್ಟಲು ಆರಂಭಿಸಬೇಕು.

ಆದರೆ, ಶಿಕ್ಷಣ ಸಾಲ ತೆಗೆದುಕೊಂಡ ದಿನದಿಂದಲೇ ಬಡ್ಡಿ ಜಾರಿಗೆ ಬಂದಿರುತ್ತದೆ. ನೀವು ಇಎಂಐ ಕಟ್ಟಲು ಆರಂಭಿಸುವವರೆಗೂ ನಿಮ್ಮ ಸಾಲ ಮೊತ್ತಕ್ಕೆ ಬಡ್ಡಿ ಜಮೆಯಾಗಿರುತ್ತದೆ. ಸಾಲ ಕೊಡುವಾಗಲೇ ಈ ಬಡ್ಡಿಯನ್ನು ಸೇರಿಸಿಯೇ ಇಎಂಐ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಒಂದು ವೇಳೆ ನೀವು ಪೂರ್ವದಲ್ಲೇ ಬಡ್ಡಿಯನ್ನು ಪಾವತಿಸುವ ಅವಕಾಶವೂ ಇರುತ್ತದೆ.

ವಿದ್ಯಾಲಕ್ಷ್ಮೀ ಯೋಜನೆಯ ವೆಬ್​ಸೈಟ್​ಗೆ ಹೋಗಲು ಈ ಲಿಂಕ್ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Mon, 15 May 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್