Multibagger: ಒಂದು ವರ್ಷದಲ್ಲಿ 16 ಪಟ್ಟು ಹೆಚ್ಚು ಲಾಭ; ಶೇ. 30 ಡಿವಿಡೆಂಡ್; ಸೌತ್ ಇಂಡಿಯನ್ ಬ್ಯಾಂಕ್​ನ ಷೇರಿಗೆ ಸಖತ್ ಬೇಡಿಕೆ

South Indian Bank: ಕಳೆದ ಹಣಕಾಸು ವರ್ಷದಲ್ಲಿ ಭರ್ಜರಿ ಆದಾಯ ತೋರಿಸಿರುವ ಸೌತ್ ಇಂಡಿಯನ್ ಬ್ಯಾಂಕ್​ನ ಷೇರುಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಕಳೆದ ವಾರ ಇದರ ಬೆಲೆ ಗಮನಾರ್ಹವಾಗಿ ಹೆಚ್ಚಿದೆ.

Multibagger: ಒಂದು ವರ್ಷದಲ್ಲಿ 16 ಪಟ್ಟು ಹೆಚ್ಚು ಲಾಭ; ಶೇ. 30 ಡಿವಿಡೆಂಡ್; ಸೌತ್ ಇಂಡಿಯನ್ ಬ್ಯಾಂಕ್​ನ ಷೇರಿಗೆ ಸಖತ್ ಬೇಡಿಕೆ
ಸೌತ್ ಇಂಡಿಯನ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2023 | 10:37 AM

ಷೇರು ಮಾರುಕಟ್ಟೆ ಬಹಳ ಮಂದಿಯನ್ನು ಶ್ರೀಮಂತರನ್ನಾಗಿಸುತ್ತದೆ. ಹಲವರಿಗೆ ನಷ್ಟವನ್ನೂ ತಂದಿಡುತ್ತದೆ. ಷೇರುಪೇಟೆ (Stock Market) ಒಂದು ರೀತಿಯಲ್ಲಿ ಸೋಜಿಗದ ಸಂತೆ. ಬುದ್ಧಿವಂತಿಕೆ ಮತ್ತು ಒಂದಿಷ್ಟು ಅದೃಷ್ಟ ಖುಲಾಯಿಸಿದರೆ ಕುಬೇರರಾಗಬಹುದು ಎನ್ನುವುದಕ್ಕೆ ರಮೇಶ್ ಜುಂಜುನವಾಲ ಮೊದಲಾದವರ ಅನೇಕರ ನಿದರ್ಶನಗಳಿವೆ. ಷೇರುಗಳ ಮೇಲೆ ಹೂಡಿಕೆ ಮಾಡಿ ಸಾವಿರಾರು ಕೋಟಿ ರೂ ಲಾಭ ಮಾಡಲು ಸಾಧ್ಯವಾ ಎನಿಸಬಹುದು. ಒಮ್ಮೆಲೇ ಸಾಧ್ಯವಿಲ್ಲ, ಹೂಡಿಕೆ ಹೆಚ್ಚಿಸುತ್ತಾ ಹೋದರೆ ಅದು ಸಾಧ್ಯ. ಈ ರೀತಿ ಲಾಭ ತಂದುಕೊಡುವ ಹಲವು ಷೇರುಗಳು ಮಾರುಕಟ್ಟೆಯ ದೊಡ್ಡ ರಾಶಿಯೊಳಗೆ ಹುದುಗಿ ಹೋಗಿರುತ್ತವೆ. ಅವನ್ನು ಹುಡುಕುವ ಪ್ರಯತ್ನವಾಗಬೇಕು. ಇಂತಹ ಷೇರುಗಳಲ್ಲಿ ಸೌತ್ ಇಂಡಿಯನ್ ಬ್ಯಾಂಕ್​ನದ್ದು ಒಂದು. ಕಳೆದ ವೀಕೆಂಡ್​ನಲ್ಲಿ ಷೇರುಮಾರುಕಟ್ಟೆಯಲ್ಲಿ ಬಹುತೇಕ ಚಟುವಟಿಕೆ ಸ್ತಬ್ಧಗೊಂಡಂತಿತ್ತು. ಆದರೆ, ಸೌತ್ ಇಂಡಿಯನ್ ಬ್ಯಾಂಕ್​ನ ಷೇರುಗಳಿಗೆ ಒಳ್ಳೆಯ ಬೇಡಿಕೆ ಕುದುರಿ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿತ್ತು.

ಸೌತ್ ಇಂಡಿಯನ್ ಬ್ಯಾಂಕಿನ ಷೇರಿಗೆ ಬೇಡಿಕೆ ಬರಲು ಪ್ರಬಲ ಕಾರಣಗಳಿವೆ. 2022-23ರ ಹಣಕಾಸು ವರ್ಷದಲ್ಲಿ ಸೌತ್ ಇಂಡಿಯನ್ ಬ್ಯಾಂಕ್​ನ ಲಾಭ ಗಣನೀಯವಾಗಿ ಹೆಚ್ಚಾಗಿದೆ. ಅ ಹಣಕಾಸು ವರ್ಷದ ಎಲ್ಲಾ ದಾಖಲೆಗಳನ್ನು ಇದು ಮುರಿದುಹಾಕಿದೆ. ಎಲ್ಲಾ ವಿಭಾಗಗಳಲ್ಲೂ ಬ್ಯಾಂಕ್ ಪ್ರಗತಿ ಸಾಧಿಸಿದೆ, ಸರ್ವಾಂಗೀಣ ಬೆಳವಣಿಗೆ ಸಾಧಿಸಿದೆ. 2022-23 ರ ಹಣಕಾಸು ವರ್ಷದಲ್ಲಿ ಸೌತ್ ಇಂಡಿಯನ್ ಬ್ಯಾಂಕ್​ನ ನಿವ್ವಳ ಮಾರಾಟ ಶೇ. 10ರಷ್ಟು ಹೆಚ್ಚಾದರೆ, ನಿವ್ವಳ ಲಾಭ ಶೇ. 1623ರಷ್ಟು, ಅಂದರೆ 16 ಪಟ್ಟು ಹೆಚ್ಚು ನಿವ್ವಳ ಲಾಭ ಹೆಚ್ಚಿದೆ.

ಇದರ ಜೊತೆಗೆ ಸೌತ್ ಇಂಡಿಯನ್ ಬ್ಯಾಂಕು ಶೇ. 30ರಷ್ಟು ಡಿವಿಡೆಂಡ್ ನೀಡಿದೆ. ಇದರ ಇಪಿಎಸ್ (ಅರ್ನಿಂಗ್ ಪರ್ ಶೇರ್) 3.41 ರೂ ಇದೆ. ಇಪಿಎಸ್ ಎಂದರೆ ಕಂಫನಿಯ ಲಾಭವನ್ನು ಷೇರುಸಂಪತ್ತಿನಿಂದ ಭಾಗಿಸಿದಾಗ ಬರುವ ಮೊತ್ತ. ಅಂದರೆ, ಅದರ ಒಂದು ಷೇರುಮೌಲ್ಯಕ್ಕೆ ಹೋಲಿಸಿದರೆ ಕಂಪನಿಯ ಹಣಕಾಸು ಲಾಭ ಎಷ್ಟಿದೆ ಎಂಬುದನ್ನು ಇದು ಸೂಚಿಸುತ್ತದೆ. 3.41 ರೂಗಳ ಇಪಿಎಸ್ ಇದೆ ಎಂದರೆ ಅದು ನಿಜಕ್ಕೂ ಗಮನಾರ್ಹ.

ಇದನ್ನೂ ಓದಿRD Rates: ಆರ್​ಡಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳಿವು; ಅತ್ಯಂತ ಸುಲಭ ಹೂಡಿಕೆ ಆಯ್ಕೆ ಇದು

ಸೌತ್ ಇಂಡಿಯನ್ ಬ್ಯಾಂಕು ಉತ್ತಮ ಇಪಿಎಸ್ ಹೊಂದಿರುವ ಜೊತೆಗೆ ಅದರ ಪಿಇ ರೇಷಿಯೋ 4.79x ಇದೆ. ಪಿಇ ಎಂದರೆ ಪ್ರೈಸ್ ಟು ಅರ್ನಿಂಗ್ಸ್. ಕಂಪನಿಯ ಷೇರು ಬೆಲೆ ಹಾಗು ಪ್ರತೀ ಷೇರಿಗೆ ಸಿಕ್ಕ ಗಳಿಕೆಯ ಅನುಪಾತ ಅದು.

ಇನ್ನು ಸೌತ್ ಇಂಡಿಯನ್ ಬ್ಯಾಂಕಿನ ಷೇರು ಮೌಲ್ಯ 1 ವರ್ಷದಲ್ಲಿ ಶೇ. 140ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಬಿಎಸ್​ಇಯ ಸ್ಮಾಲ್​ಕ್ಯಾಪ್ ಇಂಡೆಕ್ಸ್ ಬೆಳೆದದ್ದು ಶೇ. 18 ಮಾತ್ರ. ಅದಕ್ಕೆ ಹೋಲಿಸಿದರೆ ಸೌತ್ ಇಂಡಿಯನ್ ಬ್ಯಾಂಕಿನ ಷೇರು ಸಖತ್ತಾಗಿ ಬೆಳೆದಿದೆ.

ಶುಕ್ರವಾರದ ವಹಿವಾಟಿನಲ್ಲಿ ಆರಂಭದಲ್ಲಿ ಪ್ರತೀ ಷೇರಿಗೆ 16.31 ರೂ ಇದ್ದ ಇದರ ಷೇರುಬೆಲೆ ದಿನಾಂಗ್ಯದಲ್ಲಿ 18.20 ರೂಗೆ ಏರಿತ್ತು. ಅಚ್ಚರಿ ಎಂಬಂತೆ ಸೋಮವಾರದ ವಹಿವಾಟಿನಲ್ಲಿ 45 ಪೈಸೆಯಷ್ಟು ಕುಸಿದಿದೆಯಾದರೂ ಮುಂದಿನ ದಿನಗಳಲ್ಲಿ ಇದರ ಷೇರುಬೆಲೆ 21 ರೂ ದಾಟುವ ಎಲ್ಲಾ ಸಾಧ್ಯತೆ ಇದೆ ಎನ್ನುತ್ತಾರೆ ಪರಿಣಿತರು.

ಇದನ್ನೂ ಓದಿ: PPF: ಸಂಬಳ ಪಡೆಯುವ ನೌಕರರಿಗೆ ಪಿಪಿಎಫ್ ಹೂಡಿಕೆ ಅಗತ್ಯವಾ? ಬೇರೆ ಉತ್ತಮ ಆಯ್ಕೆಗಳೇನು?

ಸೌತ್ ಇಂಡಿಯನ್ ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿರುವ ಪ್ರಮುಖ ಮ್ಯೂಚುವಲ್ ಫಂಡ್​ಗಳು:

  • ಕೋಟಕ್ ಮಹೀಂದ್ರ ಲೈಫ್ ಇನ್ಷೂರೆನ್ಸ್ ಕಂಪನಿ: ಶೇ. 7.64
  • ಎಲ್​ಐಸಿ: ಶೇ. 2.69
  • ಕೋಟಕ್ ಮಲ್ಟಿಕ್ಯಾಪ್ ಫಂಡ್: ಶೇ. 2.3
  • ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ ಕಂಪನಿ: ಶೇ. 1.69

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ